ತುಮಕೂರು ದೇಶದ ದೊಡ್ಡ ಕೈಗಾರಿಕಾ ವಲಯವಾಗಲಿದೆ-ಪ್ರಧಾನಿ ನರೇಂದ್ರ ಮೋದಿ
ದೇಶಕ್ಕೆ ಅರ್ಪಣೆಗೊಂಡ ಹೆಚ್‍ಎಎಲ್

ತುಮಕೂರು : ಚೆನ್ನೈ ಮತ್ತು ಬೆಂಗಳೂರಿನಂತೆ ತುಮಕೂರು ಸಹ ದೇಶದ ದೊಡ್ಡ ಕೈಗಾರಿಕಾ ವಲಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅವರಿಂದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಬಳಿ ಹೆಚ್ ಎಎಲ್ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಲೋಕಾರ್ಪಣೆ ಹಾಗೂ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
ಡಬ್ಬಲ್ ಇಂಜಿನ್ ಸರ್ಕಾರ ಬಂದ ಮೇಲೆ ನಿರೀಕ್ಷೆಗೀ ಮೀರಿ ಅಭಿವೃದ್ಧಿ ಕೆಲಸಗಳಾಗಿವೆ, ಈಗ ತುಮಕೂರು ಜಿಲ್ಲೆಯಲ್ಲಿ ದೇಶದಲ್ಲೇ ದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಪ್ರಾರಭಿಸಿದ್ದು, ಯುವಕರಿಗೆ ಹೆಚ್ಚಿನ ಉದ್ಯೋಗ ದೊರೆಯಲಿದೆ, ಈ ಹಿಂದೆ ಫುಡ್‍ಫಾರ್ಕ್‍ನ್ನು ಉದ್ಘಾಟಿಸಿದ್ದೇ ಈಗ ಹೆಚ್‍ಎಎಲ್ ಉದ್ಘಾಟಿಸುವ ಮೂಲಕ ತುಮಕೂರು ಜಿಲ್ಲೆ ಕೈಗಾರಿಕಾ ವಲಯದಲ್ಲಿ ದೇಶದ ಗಮನ ಸೆಳೆದಿದೆ, ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯು ಬೃಹತ್ ಕೈಗಾರಿಕಾ ವಲಯವಾಗಲಿದೆ ಎಂದರು.

ಕರ್ನಾಟಕ ಯುವ ಪ್ರತಿಭೆ, ಆವಿμÁ್ಕರದ ತಾಣವಾಗಿದ್ದು, ಡಬಲ್ ಎಂಜಿನ್ ಸರ್ಕಾರ ರಾಜ್ಯದ ಪ್ರಗತಿಗಾಗಿ ಶ್ರಮಿಸುತ್ತಿದೆ. ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಉದ್ಘಾಟನೆಯಿಂದ ಸಾವಿರಾರು ಸಂಖ್ಯೆಯಲ್ಲಿ ಯುವ ಜನತೆಗೆ ಉದ್ಯೋಗ ದೊರೆಯಲಿದೆ. ಅಲ್ಲದೇ, ತುಮಕೂರು ಸುತ್ತಮುತ್ತ ವ್ಯಾಪಾರ ವಹಿವಾಟು ವೃದ್ಧಿಯಾಗಲಿದೆ ಎಂದರು.

ರಕ್ಷಣಾ ಉಪಕರಣಗಳ ರಫ್ತು ಪ್ರಮಾಣ ಹೆಚ್ಚಾಗಿದೆ. ಆಧುನಿಕ ಅಸಾಲ್ಟ್ ರೈಫಲ್‍ಗಳು, ವಿಮಾನ ವಾಹಕ ನೌಕೆ, ಯುದ್ದ ವಿಮಾನಗಳವರೆಗೂ ದೇಶದಲ್ಲಿಯೇ ತಯಾರಿಸಲಾಗುತ್ತಿದೆ. ದೇಶದಲ್ಲಿಯೇ ರಕ್ಷಣಾ ಉಪಕರಣಗಳನ್ನು ತಯಾರಿಸಲಾಗುತ್ತಿದ್ದು, ಸೇನೆ ಕೂಡಾ ಬಳಸುತ್ತಿದೆ. ಹೆಚ್ ಎಎಲ್ ರಕ್ಷಣೆಯಲ್ಲಿ ನಮ್ಮ ಸ್ವಾವಲಂಬನೆಯನ್ನು ಹೆಚ್ಚಿಸಲಿದೆ ಎಂದ ಪ್ರಧಾನಿ ಮೋದಿ, ನಮ್ಮ ರಕ್ಷಣೆಗಾಗಿ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು, ಆತ್ಮನಿರ್ಭರ್ ಮೂಲಕ ಹೆಲಿಕಾಪ್ಟರ್ ತಯಾರಿಸಲಾಗುತ್ತಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ 4 ಲಕ್ಷ ಕೋಟಿ ವ್ಯಾಪಾರ ವಹಿವಾಟು ನಡೆಯಲಿದೆ. ಹೆಚ್ ಎಎಲ್ ಹೆಸರು ಬಳಸಿ ನಮ್ಮನ್ನು ಬೆದರಿಸಲು ಯತ್ನಿಸಿದರು. ರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಸಂಸತ್ತಿನ ಹಲವು ಕೆಲಸದ ಸಮಯಗಳು ಅದಕ್ಕಾಗಿ ವ್ಯರ್ಥವಾಯಿತು.

ಎಚ್ಎಎಲ್‍ನ್ನು ಹೆಲಿಕಾಪ್ಟರ್ ಫ್ಯಾಕ್ಟರಿ ಮತ್ತು ಅದರ ಹೆಚ್ಚುತ್ತಿರುವ ಶಕ್ತಿ ಸುಳ್ಳು ಆರೋಪ ಮಾಡಿದವರನ್ನು ಬಯಲು ಮಾಡಲಿದೆ ಎಂದು ಹೆಸರು ಹೇಳದೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ಅನುದಾನ ನೀಡುವ ಮೂಲಕ ತುಮಕೂರು ಚಿಕ್ಕಬಳ್ಳಾಪುರ, ದಾವಣೆಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಈ ಯೋಜನೆಯಿಂದ ಮಧ್ಯ ಕರ್ವಾಟಕದ ಭಾಗಗಳಿಗೆ ಲಾಭವಾಗಲಿದೆ. ಪ್ರತಿ ಮನೆಗೂ ನೀರು, ಪ್ರತಿ ಜಮೀನಿಗೂ ನೀರಾವರಿ ಕಲ್ಪಿಸುತ್ತೇವೆ, ನಿವಾಸಕ್ಕೆ ನೀರು ಜೊತೆಗೆ ಭೂಮಿಗೆ ನೀರಾವರಿ ಬಲ ತುಂಬಲಾಗುವುದು ಎಂದರು.

ಜಲಜೀವನ್ ಮಿಷನ್ ಯೋಜನೆಯಡಿ ದೇಶದಲ್ಲಿ 3 ಕೋಟಿ ಕುಟುಂಬಗಳಿಗೆ ನೀರು ಪೂರೈಸಲಾಗುತ್ತಿದೆ. ಬಜೆಟ್ ನಲ್ಲಿ ಈ ಯೋಜನೆಯಡಿ ಹೆಚ್ಚಿನ ಹಣ ಮೀಸಲಿಡಲಾಗಿದೆ. ಇದರಿಂದ ಬಡ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದ ಪ್ರಧಾನಿ ಬಜೆಟ್ ನಲ್ಲಿ ಸಿರಿಧಾನ್ಯಗಳ ಉತ್ತೇಜನಕ್ಕೆ ಅವಕಾಶ ನೀಡಲಾಗಿದೆ. ಸಶಕ್ತ ಭಾರತ ನಿರ್ಮಾಣಕ್ಕಾಗಿ ಬಜೆಟ್ ಮಂಡಿಸಲಾಗಿದೆ. ವಿಶ್ವ ಮಟ್ಟದಲ್ಲಿ ಬಜೆಟ್ ಕುರಿತು ಚರ್ಚೆಯಾಗುತ್ತಿದ್ದು. ಸರ್ವ ಪ್ರಿಯಾ, ಸರ್ವ ಸ್ಪರ್ಶಿ ಬಜೆಟ್ ನೀಡಿದ್ದೇವೆ, ಸಶಕ್ತ ಭಾರತದ ಗುರಿಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಗತಿಮನ್ ಭಾರತದ ದಿಸೆಯಲ್ಲಿ ಅತಿದೊಡ್ಡ ಹೆಜ್ಜೆಯಾಗಿದೆ ಎಂದು ಬಣ್ಣಿಸಿದರು.

ಹೂಡಿಕೆದಾರರ ನೆಚ್ಚಿನ ರಾಜ್ಯವಾಗಿರುವ ಕರ್ನಾಟಕವನ್ನು ಸಕಲ ರೀತಿಯಿಂದಲೂ ಅಭಿವೃದ್ಧಿಗೊಳಿಸಲು ಒತ್ತು ನೀಡುತ್ತಿದ್ದು, ಡಬಲ್ ಇಂಜಿನ್ ಸರ್ಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ರೈತರ ಅಗತ್ಯತೆಗಳನ್ನು ಪೂರೈಸುವಂತಹ ಯೋಜನೆಗಳು ಜಾರಿಗೆ ತರಲಾಗುತ್ತಿದೆ. ಇದರಿಂದ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಹೆಚ್ಚು ಸಹಾಯಕವಾಗಲಿದೆ ಎಂದರು. ಇದೇ ವೇಳೆ ರಾಜ್ಯದ ಸಿರಿಧಾನ್ಯಗಳ ಬಗ್ಗೆ ಪ್ರಸ್ಯಾಪಿಸಿ, ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಬಹಳಷ್ಟಿದೆ ಎಂದು ಎಂದು ಮೋದಿ ಹೇಳಿದರು.

2023-24ರ ಬಜೆಟ್ ಸಶಕ್ತ ಭಾರತ ನಿರ್ಮಾಣದ ಗುರಿಯನ್ನು ಮುಂದಿಟ್ಟುಕೊಂಡು ಈ ಬಾರಿಯ ಬಜೆಟ್ ಮಂಡಿಸಲಾಗಿದೆ. ಹೀಗಾಗಿ ಬಜೆಟ್ ಬಗ್ಗೆ ವಿಶ್ವದೆಲ್ಲೆಡೆ ಚರ್ಚೆಗಳಾಗುತ್ತಿದ್ದು, ಮಧ್ಯಮ ವರ್ಗ ಹಿತ ಕಾಯುವ ಬಜೆಟ್ ಇದಾಗಿದೆ. ರೈತರು, ಮಧ್ಯಮವರ್ಗ, ಕಾರ್ಮಿಕರು, ಯುವಕರು, ಮಹಿಳೆಯರಿಗೆ ಈ ಬಜೆಟ್ ಅನುಕೂಲ ಆಗಲಿದೆ. ಮಹಿಳೆಯರನ್ನು ಸಶಕ್ತೀಕರಣ ಗೊಳಿಸುವ ಯೋಜನೆಯನ್ನು ಮುಂದಿಟ್ಟುಕೊಂಡು ಬಜೆಟ್ ಘೋಷಣೆ ಮಾಡಿದ್ದು, ನಾವು ಅವಶ್ಯಕತೆ, ಆಧಾರ ಮತ್ತು ಆದಾಯವನ್ನ ಗಮನದಲ್ಲಿಟ್ಟುಕೊಂಡಿದ್ದೇವೆ. ಸಮಾಜದ ಎಲ್ಲ ವರ್ಗವನ್ನ ಸಶಕ್ತೀಕರಣ ಗೊಳಿಸುವುದು ಬಜೆಟ್‍ನ ಗುರಿಯಾಗಿದೆ ಎಂದು ಹೇಳಿದರು.
ಪ್ರಧಾನಿಯವರಿಗೆ ಅಡಿಕೆ ಪೇಟ, ಹಾರ ಮತ್ತು ಸಿದ್ಧಗಂಗಾ ಶ್ರೀಗಳ ಫಲಕವನ್ನು ನೀಡಲಾಯಿತು.
ಪ್ರಧಾನಿಯವರು ತುಮಕೂರು ಆಧ್ಯಾತ್ಮಿಕ ನೆಲೆಯಾಗಿದ್ದು, ಸಿದ್ಧಗಂಗ ಮಠ ಮತ್ತು ಗುಬ್ಬಿಯ ಚಿದಂಬರ ಆಶ್ರಮಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

Leave a Reply

Your email address will not be published. Required fields are marked *