ಅ.10ರಂದು ಹಾಲಪ್ಪ ಪ್ರತಿಷ್ಠಾನದಿಂದ ಕರಡಾಳುವಿನಲ್ಲಿ ‘ರೈತರೊಂದಿಗೆ ನಾವು’

ತುಮಕೂರು : ಹಾಲಪ್ಪ ಪ್ರತಿಷ್ಠಾನದ ವತಿಯಿಂದ ತಿಪಟೂರು ತಾಲ್ಲೂಕು ಕರಡಾಳು ಸಂತೆ ಮೈದಾನದಲ್ಲಿ ಅಕ್ಟೋಬರ್ 10ರ ಮಂಗಳವಾರ ಬೆಳಿಗ್ಗೆ 8ಗಂಟೆಗೆ ‘ರೈತರೊಂದಿಗೆ ನಾವು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಷಡಕ್ಷರಿ ಮತ್ತು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರುಗಳು ಭಾಗವಹಿಸಿ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಕೃಷಿಕರ ಸಮಸ್ಯೆಗಳನ್ನು ಇಲಾಖೆಗಳ ಗಮನಕ್ಕೆ ತರುವ ಪ್ರಯತ್ನವನ್ನು ಮಾಡಲಿದ್ದಾರೆ.

ಹಾಲಪ್ಪ ಪ್ರತಿಷ್ಠಾನ ವತಿಯಿಂದ ಈಗಾಗಲೇ ಹಲವಾರು ಹೋಬಳಿ ಕೇಂದ್ರಗಳಲ್ಲಿ ‘ರೈತರೊಂದಿಗೆ ನಾವು’ ಕಾರ್ಯಕ್ರಮವನ್ನು ಹಮ್ಮಿಕೊಂಡು ರೈತರ ಪ್ರಸ್ತುತ ಸಮಸ್ಯೆಗಳನ್ನು ಆಲಿಸಿ ಸರ್ಕಾರದ ಮಟ್ಟದಲ್ಲಿ ರೈತರಿಗೆ ಸಿಗುವ ಸೌಲಭ್ಯಗಳು, ಈ ಬಾರಿ ಬರ ಬಂದಿರುವ ಹಿನ್ನೆಲೆಯಲ್ಲಿ ಬರವನ್ನು ಎದುರಿಸಲು ಸರ್ಕಾರ ತಂದಿರುವ ಯೋಜನೆಗಳು ಮತ್ತು ರೈತರು ಹೇಗೆ ತಮ್ಮ ಕೃಷಿ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕೆಂಬುದನ್ನು ಅರಿವು ಮತ್ತು ಮನದಟ್ಟು ಮಾಡಿ ಕೊಡಲಾಗಿದೆ.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊನ್ನುಡಿಕೆ, ತಿಪಟೂರು ತಾಲ್ಲೂಕಿನ ಕೆ.ಬಿ.ಕ್ರಾಸ್, ಚಿಕ್ಕನಾಯಕನಹಳ್ಳಿಯ ತಾಲ್ಲೂಕಿನ ಹಂದನಕೆರೆ, ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿ.ಎಸ್.ಪುರ, ಮತ್ತು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೆಳ್ಳಾವಿಗಳಲ್ಲಿ ಹಮ್ಮಿಕೊಂಡಿದ್ದ ‘ರೈತರೊಂದಿಗೆ ನಾವು’ ಕಾರ್ಯಕ್ರಮ ಯಶಸ್ವಿಯಾಗಿದೆ.

ಈ ಕಾರ್ಯಕ್ರದ ರೂವಾರಿಗಳಾಗಿರುವ ಮುರಳೀಧರ ಹಾಲಪ್ಪನವರು ರೈತರ ಮೂಲಭೂತ ಸಮಸ್ಯೆಗಳನ್ನು ಆಲಿಸಿ ಸಂಬಂಧ ಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಿ ಬಗೆ ಹರಿಸಲು ಪ್ರಯತ್ನಿಸುವರು.

Leave a Reply

Your email address will not be published. Required fields are marked *