
ತುಮಕೂರು : ಬಿಜೆಪಿ ಪಕ್ಷವನ್ನು ಸೋಲಿಸುವುದಕ್ಕಾಗಿ ಜಿಲ್ಲೆಯಲ್ಲಿ ಬಿಜೆಪಿ ಹೊರತು ಪಡಿಸಿ ಗೆಲ್ಲುವಂತಹ ಅಭ್ಯರ್ಥಿಗಳಿಗೆ ದಲಿತ ಸಂಘರ್ಷ ಸಮಿತಿ ಬೆಂಬಲ ನೀಡಲಿದೆ ಎಂದು ದಲಿತ ಮುಖಂಡ ಕುಂದೂರು ತಿಮ್ಮಯ್ಯ ಹೇಳಿದರು.
ಅವರು ಮೈತ್ರಿನ್ಯೂಸ್‍ನೊಂದಿಗೆ ಮಾತನಾಡುತ್ತಾ, ಹಲವಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಬೆಂಬಲ ಸೂಚಿಸುತ್ತಿರುವುದು ಗೊಂದಲಕ್ಕೆ ಕಾರಣವಾಗುವುದಿಲ್ಲವೇ ಎಂಬ ಪ್ರಶ್ನಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದ ಕುಂದೂರು ತಿಮ್ಮಯ್ಯನವರು, ನಮ್ಮ ಅಜೆಂಡಾ ಸಂವಿಧಾನ ವಿರೋಧಿಯಾದ ಬಿಜೆಪಿಯನ್ನು ಸೋಲಿಸುವದೇ ಆಗಿದ್ದು, ಯಾವುದೇ ಪಕ್ಷವಾಗಲಿ ಎಡ ಪಂಥಿಯ ಚಿಂತನೆಗಳನ್ನು ಇಟ್ಟುಕೊಂಡಿರುವ ಪಕ್ಷಗಳಿಗೆ ಬೆಂಬಲಿಸಿ ಬಿಜೆಪಿಯನ್ನು ಸೋಲಿಸುವಂತಹ ಅಭ್ಯರ್ಥಿಗಳಿಗೆ ಡಿಎಸ್‍ಎಸ್ ಬೆಂಬಲ ನೀಡಲಿದೆ ಎಂದರು.
ಸುಭದ್ರ ಸರ್ಕಾರ ಬರಬೇಕು ಕಾಂಗ್ರೆಸ್ ಬೆಂಬಲಿಸಿ ಎಂದೂ ಹೇಳುತ್ತಿರ, ಬಿಜೆಪಿ ಸೋಲಿಸಲು ಕೆಲ ಕಡೆ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಗೆ ಕಾಂಗ್ರೆಸ್ ಸುಭದ್ರ ಸರ್ಕಾರ ರಚಿಸುವ ನಿಟ್ಟಿನಲ್ಲಿ ಗೆಲುವು ಸಾಧ್ಯವಾಗಲಿದ್ದು, ಅನಿವಾರ್ಯವಾಗಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂಬ ಕಡೆ ಜೆಡಿಎಸ್ ಗೆಲ್ಲುವ ಸಾಮರ್ಥ ಇರುವ ಅಭ್ಯಥಿಗೆ ಬೆಂಬಲ ಸೂಚಿಸಲಾಗುವುದು ಎಂದು ಸ್ಪಷ್ಟ ಪಡಿಸಿದರು.