
ತುಮಕೂರು : ಸುಳ್ಳು, ಮೋಸ ದಗಲಬಾಜಿ ಜನಾದೇಶವಿಲ್ಲದಿದ್ದರೂ ಶಾಸಕರನ್ನು ಕೊಂಡುಕೊಂಡು ಸರ್ಕಾರ ಮಾಡುವಂತಹ ಬಿಜೆಪಿ ಪಕ್ಷವನ್ನು ಕಿತ್ತೊಗೆಯುವಂತೆ ಮತದಾರರಲ್ಲಿ ಮನವಿ ಮಾಡುವುದಾಗಿ ಪ್ರೊ.ರವಿವರ್ಮಕುಮಾರ್ ಹೇಳಿದರು.
ಅವರು ಮೈತ್ರಿನ್ಯೂಸ್ ನೊಂದಿಗೆ ಮಾತನಾಡಿ, ಚುನಾವಣೆ ಘೋಷಣೆಯಾಗಲು ಮೂರು ದಿನ ಇದೆ ಅನ್ನುವಾಗ ದಲತರನ್ನು 4 ಭಾಗ ಮಾಡಿ ಒಳ ಮೀಸಲಾತಿ ಕಲ್ಪಿಸಿದ್ದೇವೆ ಎಂಬುದು ಶುದ್ಧ ಸುಳ್ಳು ಸಂವಿಧಾನದಲ್ಲಿ ಜಾತಿವಾರಿಗೆ ಒಳಮೀಸಲಾತಿ ಕಲ್ಪಸಲು ಅವಕಾಶವಿಲ್ಲ, ಲೋಕಸಭೆಯಲ್ಲಿ ಮಂಡನೆಯಾಗಿ ರಾಷ್ಟ್ರಪತಿಗಳ ಅಂಕಿತವಾಗಬೇಕು, ಒಳಮೀಸಲಾತಿ ಜಾರಿ ಎಂಬುದು ಒಂದು ಮಂಕು ಬೂದಿ ಎಂದರು.
ಈ ಭ್ರಷ್ಟ ಸರ್ಕಾರಕ್ಕೆ ಆಡಳಿತ ನಡೆಸಲು ಬರುತ್ತಿಲ್ಲ, ಜನರ ಸಮಸ್ಯೆಗಳಿಗೆ ಪರಿಹಾರವಿಲ್ಲ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ, ಅನ್ಯಭಾಗ್ಯ ಅಕ್ಕಿಯನ್ನು ಕಡಿಮೆ ಮಾಡಿ ಬಡವರು, ಹಳ್ಳಿ ಜನ ಹಸಿವಿನಿಂದ ನರಳುವಂತೆ ಮಾಡಿದ್ದಾರೆ, ಎನ್‍ಸಿಪಿ ಜಾರಿ ಮಾಡುತ್ತೇವೆ ಎಂದು ಶಿಕ್ಷಣಕ್ಕೆ ಕಲ್ಲು ಹಾಕಿದ್ದಾರೆ, ಶಿಕ್ಷಣದಲ್ಲಿ ಮತೀಯ ವಿಷಯಗಳನ್ನು ತುಂಬಲಾಗಿದೆ, ಹಿಜಾಬ್ ಹೆಸರಿನಲ್ಲಿ ಅಲ್ಪಸಂಖ್ಯಾತ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದರು.
ಬಿ.ಸಿ.ನಾಗೇಶ್ ಎಂಬ ಅಶಿಕ್ಷಣ ಮಂತ್ರಿ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಿದ್ದಾರೆ, ಇಂತಹ ಮಂತ್ರಿ, ಸರ್ಕಾರ ಓಡಿಸಲು ಕಾಂಗ್ರೆಸ್‍ಗೆ ಮತ ನೀಡಬೇಕು ಎಂದು ಹೇಳಿದರು.