ಒಳಮೀಸಲಾತಿ ಜಾರಿ, ದಲಿತರಿಗೆ ಪಂಗನಾಮ ಹಾಕಿದ ಬೊಮ್ಮಾಯಿ ಸರ್ಕಾರ-ಪ್ರೊ.ರವಿವರ್ಮಕುಮಾರ್,

      ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸಲು ಕರೆ.

ತುಮಕೂರು : ಒಳಮೀಸಲಾತಿ ಜಾರಿಗೊಳಿಸಿದ್ದೇವೆ ಎಂಬುದೊಂದು ದಲಿತರಿಗೆ ಬಸವರಾಜ ಬೊಮ್ಮಾಯಿ ಹಾಕಿದ ಪಂಗನಾಮ ಎಂದು ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಬಿಜೆಪಿ ಸರ್ಕಾದ ವಿರುದ್ಧ ಹರಿಹಾಯ್ದರು.

ಅವರು ಶನಿವಾರ ಮಧುಗಿರಿ ಮತ್ತು ಕೊರಟಗೆರೆಗಳಲ್ಲಿ ಪ್ರಗತಿಪರ ಒಕ್ಕೂಟ ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ ಎಂಬ ಘೋಷಣೆಯಡಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಒಳಮೀಸಲಾತಿ ಜಾರಿಗೊಳಿಸಿದ್ದೇವೆ ಎಂಬುದು ಸಾಮಾಜಿಕ ನ್ಯಾಯದ ಆದೇಶವಲ್ಲ, ಸಾಮಾಜಿಕ ನ್ಯಾಯದ ಪಂಗನಾಮ, ಸಾಮಾಜಿಕ ಅನ್ಯಾಯ, ಸಂಪುಟ ಸಭೆಯಲ್ಲಿ ಒಳ ಮೀಸಲಾತಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ತೀರ್ಮಾನ ಮಾಡಿದ್ದು, ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಕಳಿಸಲಾಗುವುದು ಎಂದಷ್ಠೇ ಹೇಳಿರುವುದು, ಇದುವರೆವಿಗೂ ರಾಜ್ಯ ಸರ್ಕಾರ ಅರ್ಧ ಪುಟದಷ್ಟು ಸಹ ಒಳಮೀಸಲಾತಿಯ ಬಗ್ಗೆ ಪತ್ರ ಬರೆದಿಲ್ಲ ಎಂದು ಹೇಳಿದರು.

ಮಾದಿಗರಿಗೆ ಶೇಕಡ 6, ಹೊಲೆಯರಿಗೆ ಶೇಕಡ5.5 ಇತರಿಗೆ ಇಂತಿಷ್ಟು ಎಂದು ಒಳಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿ ಮಾಡಲಾಗುವುದು ಎಂದು ಹೇಳುತ್ತಾರೆ, ಆದರೆ ಸಂವಿಧಾನ ತಿದ್ದುಪಡಿ ಅದು ಹೇಗೆ ಮಾಡುತ್ತಾರೆ ಸಂವಿಧಾನದಲ್ಲಿ ಮಾದಿಗ, ಹೊಲೆಯ ಎಂಬ ಹೆಸರುಗಳೇ ಇಲ್ಲ, ಈ ಹಿನ್ನಲೆಯಲ್ಲಿ ಒಳಮೀಸಲಾತಿ ಜಾರಿ ಎಂಬುದೇ ಒಂದು ದೋಕ, ಸುಳ್ಳಿನ ಕಂತೆ, ಚುನಾವಣೆ ಘೋಷಣೆಗೆ 3 ದಿನ ಇದೆ ಎನ್ನುವಾಗ ತಂದ ಪಂಗನಾಮದ ಆದೇಶ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೇ.6ಷ್ಟು ಮೀಸಲಾತಿ ಕಲ್ಪಿಸಿದ್ದರೆ ಇಂದಿನಿಂದಲೇ ಸರ್ಕಾರಿ ನೌಕರಿಯಲ್ಲಿ ಮಾದಿಗರಿಗೆ ನೌಕರಿ, ಇಂಜಿನಿಯರ್ ಸೀಟ್, ಮೆಡಿಕಲ್ ಸೀಟ್ ಕೊಡಸಲಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲೆಸದರು.

ಈ ಸರ್ಕಾರಗಳು ಡಬ್ಬಲ್ ಇಂಜಿನ್ ಸರ್ಕಾರಗಳಲ್ಲ ಇವು ಡಬ್ಬಲ್ ಸುಳ್ಳಿನ ಸರ್ಕಾರಗಳು, ದೋಕ ಸರ್ಕಾರ,ಪಂಗನಾಮ ಹಾಕುವ ಸರ್ಕಾರ,ಈ ಹಿನ್ನೆಲಯಲ್ಲಿ ಇಂತಹ ಸರ್ಕಾರವನ್ನು ಒದ್ದು ಓಡಿಸ ಬೇಕಾಗಿದೆ, ಇನ್ನೆಷ್ಟು ದಿನ ಈ ಭ್ರಷ್ಟ ಸರ್ಕಾರವನ್ನು ಸಹಿಸಿಕೊಂಡಿರುವುದು, ಅಭಿವೃದ್ಧಿ ಮಾಡುವುದು ಎಂದರೆ ಮೋಸ, ಹಗಲು ದರೋಡೆ, ವಂಚನೆ, ದಗಲುಬಾಜಿತನ ಮಾಡಲು ಹೊರಟಿದ್ದಾರೆ ಜನರು, ಪತ್ರಕರ್ತರು ಅವರನ್ನು ಕಂಡಕಂಡಲ್ಲಿ ಪ್ರಶ್ನಿಸಬೇಕು ಎಂದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ಮಾಧ್ಯಮ ಇದನ್ನು ಪ್ರಶ್ನಿಸಬೇಕು, ಹಗಲು ದರೋಡೆ, ಮಹಾಮೋಸ ಮಾಡುತ್ತಿರುವ ಭ್ರಷ್ಟ ಸರ್ಕಾರವನ್ನು ತೊಲಗಿಸಲು ನ್ಯಾಯ ಒದಗಿಸಬೇಕು ಎಂದರು.


ನಮ್ಮನ್ನು ಆಳುತ್ತಿರುವವರು ಯಾರು, ಹಿಂಬಾಗಿಲಿಂದ, ಶಾಸಕರನ್ನು ಖರೀದಿ ಮಾಡಿದವರು, ಜನರು ನೀವು ಸರ್ಕಾರ ರಚಿಸಿ ಎಂದು ಆದೇಶ ನೀಡಿರಲಿಲ್ಲ, ನಮ್ಮ ಸರ್ಕಾರ ಬೇರೆ ಸರ್ಕಾರಗಳಂತಲ್ಲ ಎಂದು ಹೇಳಿದ ನರೇಂದ್ರ ಮೋದಿ, ಅಮಿತ್ ಶಾ ಮೂಲಕ ಶಾಸಕರ ವ್ಯಾಪರೀಕರಣ ಮಾಡಿ ಹಿಂಬಾಗಲಿನಿಂದ ಬಂದ ಸರ್ಕಾರಕ್ಕೆ ಬದ್ಧತೆ ಎಲ್ಲಿರುತ್ತದೆ ಎಂದು ಪ್ರಶ್ನಿಸಿದರು.

ನಾವು ಯಾರನ್ನು ಚುನಾಯಿಸಿದ್ದೇವೆ ಅವರನ್ನು ಪ್ರಶ್ನೆ ಮಾಡದಂತಹ ಸ್ಥಿತಿಯನ್ನು ತಂದಿದ್ದಾರೆ , ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ನಿಮಗೂ, ಅದಾನಿಯವರಿಗೂ ಏನಪ್ಪ ಸಂಬಂಧ, ಅದಾನಿಯವರಿಗೆ 20ಸಾವಿ ಲಕ್ಷ ಕೋಟಿ ಎಲ್ಲಿಂದ ಎಂದು ಪ್ರಶ್ನಿಸಿದರು, ಇದಕ್ಕೆ ಉತ್ತರಿಸದ ಪ್ರಧಾನಿ ತಮ್ಮ ಪಕ್ಷದ ಸಚಿವರು, ಸಂಸದರಿಂದ ಸಂಸತ್ತಿನ ಕಲಾಪ ನಡೆಯದಂತೆ ನೋಡಿಕೊಂಡು, ರಾಹುಲ್ ಗಾಂದಿಯವರ ಲೋಕಸಭಾ ಸದಸ್ಯತ್ವ ರದ್ದಾಗುವಂತೆ ನೊಡಿಕೊಂಡಿದ್ದಲದೆ, ನರೇಂದ್ರ ಮೋದಿಯವರ ಶೈಕ್ಷಣಿಕತೆಯ ಷರ್ಟಿಫಿಕೇಟ್ ಕೇಳಿದ ದೆಹಲಿ ಮುಖ್ಯಮಂತ್ರಿಗೆ 25ಸಾವಿರ ದಂಡ ವಿಧಿಸದರು ಹಾಗಾದರೆ ಪ್ರಜಾಪ್ರಭುತ್ವದಡಿ ಆರಿಸಿ ಬಂದ ಸರ್ಕಾರವನ್ನು ಪ್ರಶ್ನಿಸಲು ವಿರೋಧ ಪಕ್ಷಗಳಿಗೆ, ಮತದಾರನಿಗೆ ಹಕ್ಕಿಲ್ಲವೆ ಅಥವಾ ಹಕ್ಕನ್ನು ಈ ಸರ್ಕಾರ ಕಿತ್ತುಕೊಂಡಿದೆಯೇ ಎಂಬುದನ್ನು ಹೇಳಲು ಆಗದೆ ಕಲಾಪ ನಡೆಸದಂತೆ ಪಲಾಯನ ಮಾಡಿದ ಸರ್ಕಾರವನ್ನು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳದಳ್ಳಲು ಸಾಧ್ಯವಿಲ್ಲ, ಪ್ರಜೆಗಳಿಗೆ ಉತ್ತರಿಸದ ಸರ್ಕಾರ ಪ್ರಜೆಗಳ ಹಕ್ಕನ್ನು ಕಾಪಾಡಲು ಸಾಧ್ಯವಿಲ್ಲ ಎಂದು ಪ್ರೊ.ರವಿವರ್ಮಕುಮಾರ್ ಲೇವಡಿ ಮಾಡಿದರು.

ಪ್ರಜಾಪ್ರಭುತ್ವದ ತಿರುಳೇನೆಂದರೆ ಉತ್ತರದಾಯಿತ್ವ, ಸರ್ಕಾರ ಮಾಡಿದ ಕೆಲಸಗಳಿಗೆ ಜವಾಬ್ದಾರಿಯಾಗಿರಬೇಕು, ಜನತೆಯ ಪ್ರಶ್ನೆಗಳಿಗೆ ಉತ್ತರ ಕೊಡಬೇಕು, ಹೋಗಲಿ ಪ್ರಧಾನಿ ಎಂದಾದರೂ ಪತ್ರಕರ್ತರ ಪ್ರಶ್ನೆಗಳಿಗೆ ಮುಖಾಮುಖಿ ಉತ್ತರಿಸಿದ್ದಾರಾ! 9ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ, ಏನಿದರ ಅರ್ಥ, ಕಳೆದ ಸಂಸತ್ ಅಧಿವೇಶನದಲ್ಲಿ ಒಂದು ಗಂಟೆಯೂ ಕಲಾಪ ನಡೆಯಲು ಬಿಟ್ಟಿಲ್ಲ ರಾಹುಲ್ ಗಾಂಧಿ ಕ್ಷಮಾಪಣೆ ಕೇಳಬೇಕೆಂದು, ಇಡೀ ಪ್ರಜಾಪ್ರಭುತ್ವವನ್ನು ಹಾಳು ಮಾಡಲಾಯಿತು, ರಾಹುಲ್ ಗಾಂಧಿ ಸರ್ಕಾನಾ ಉತ್ತರಿಸಲು, ರಾಹುಲ್ ಗಾಂಧಿ ಅಧಿಕಾರದಲಿಲ್ಲ, ಇಡೀ ಕೇಂದ್ರ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಕಲಾಪ ನಡೆಸಲು ಬಿಡಲಿಲ್ಲ, ಪಾರ್ಲಿಮೆಂಟ್ ನಡೆಸಲು ಯಾರಪ್ಪನ ದುಡ್ಡು, ಪಾರ್ಲಿಮೆಂಟ್ ಇರುವುದು ಯಾರಿಗೋಸ್ಕರ,ಸರ್ಕಾರಗಳೆಂದರೆ ಜನತೆಗೋಸ್ಕರ, ಜನರಿಗಾಗಿ ರಚನೆಯಾಗಿರೋದು, ಪ್ರಧಾನ ಮಂತ್ರಿಗಳು ಸರ್ಕಾರದ ಮುಖ್ಯಸ್ಥ ಅವರು ಜನತೆಗೆ ಉತ್ತರ ಕೊಡದೆ ಸಂಸತ್ ಕಲಾಪವನ್ನೇ ನಡೆಯದಂತೆ ನೋಡಿಕೊಂಡು ಜನತೆಗೆ ಉತ್ತರಿಸಲಾಗದ ಸರ್ಕಾರ ಎಂದು ರವಿವರ್ಮಕುಮಾರ್ ಲೇವಡಿ ಮಾಡಿದರು.

ರಾಜ್ಯ ಸರ್ಕಾರ ಭ್ರಷಚಾರದಲ್ಲಿ ಹೇಳಲಾಗದಷ್ಟು ಮುಳಗಿದ್ದು ಈಗ ಸ್ವಾಭಿಮಾನಕ್ಕಾಗಿ, ನಾಡಿನ ಜನರು ಬದುಕು ಹಸನಾಗಲಿಕ್ಕೆ ರಾಜ್ಯಕ್ಕೆ ಸುಭದ್ರ ಸರ್ಕಾರ ಬೇಕಾಗಿರುವುದರಿಂದ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ನೀಡುಲೇ ಬೇಕಾದ ಅವಶ್ಯಕತೆ ಇದೆ ಎಂದು ಪ್ರೊ.ರವಿವರ್ಮಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಲೇಖಕರಾದ ಕೆ.ಪಿ.ನಟರಾಜು, ಪ್ರಗತಿಪರ ಒಕ್ಕೂಟದ ಸಂಚಾಲಕರಾದ ಡಾ.ರಂಗಸ್ವಾಮಿ.ಹೆಚ್.ವಿ., ಡಾ.ಬಸವರಾಜು ದಲಿತ ಸಂಘರ್ಷ ಸಮಿತಿಯ ಕುಂದೂರು ತಿಮ್ಮಯ್ಯ, ವಿರೂಪಾಕ್ಷ ಡ್ಯಾಗೇರಹಳ್ಳಿ, ಮಾತನಾಡಿದರು, ಈ ಸಂದರ್ಭದಲ್ಲಿ ನಟರಾಜಪ್ಪ, ಹೈಕೋರ್ಟ್ ವಕೀಲರಾದ ಹೆಚ್.ವಿ.ಮಂಜುನಾಥ, ನಿವೃತ್ತ ಇಂಜಿನಿಯರ್ ಶಿವಕುಮಾರ್, ಶಿವನಂಜಪ್ಪ ಚೇಳೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *