ಮಹಿಳೆಯರು ಕೈಗಾರಿಕಾ ವಲಯದಲ್ಲಿ ಪುರುಷರಿಗೆ ಉದ್ಯೋಗ ಕೊಡುವಷ್ಟು ಯಶಸ್ಸು ಕಾಣಬೇಕು: ಉಮಾರೆಡ್ಡಿ

ತುಮಕೂರು: ಹೆಣ್ಣು, ಹೊನ್ನು ಮಣ್ಣಿನಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದೆ ಮಹಿಳೆ ಇಂದು ಬಾಹ್ಯಾಕಾಶ ಗಗನಯಾನ ಸೇರಿದಂತೆ ವಿವಿಧ ವಲಯಗಳಲ್ಲಿ ಅಗಣಿತವಾದ ಸಾಧನೆಯನ್ನು ಮಾಡಿದ್ದು ಪುರುಷರನ್ನು ಮೀರಿಸುವಂತಹ ಮಟಿಗೆ ಮಹಿಳೆ ಬೆಳೆದು ನಿಂತಿದ್ದಾಳೆ ಕಾರ್ಯೇಷು ದಾಸಿ, ಕ್ಷಮೆಯಾಧರಿತ್ರಿ ಎನ್ನುವ ಮಹಿಳೆ ಕೈಗಾರಿಕಾ ಕ್ಷೇತ್ರಕ್ಕೂ ಇಂದು ದಾಪುಗಾಲು ಇಡುತ್ತಿದ್ದು ಪುರುಷರಿಗೆ ಉದ್ಯೋಗ ನೀಡುವಷ್ಟು ಉನ್ನತ ಮಟ್ಟಕ್ಕೆ ಬೆಳೆಯಬೇಕಾಗಿದೆ ಎಂದು ಎಫ್ ಕೆ ಸಿ ಸಿ ಐ ಉಪಾಧ್ಯಕ್ಷರು ಹಾಗೂ ಹೈಟೆಕ್ ಮ್ಯಾಗ್ನೆಟಿಕ್ ಎಲೆಕ್ಟ್ರಾನಿಕ್ಸ್ ಪ್ರವೇಟ್ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆದ ಉಮಾ ರೆಡ್ಡಿ ಅವರು ತಿಳಿಸಿದರು.

ನಗರದ ಸಿದ್ದಾರ್ಥ ಕ್ಯಾಂಪಾಸ್ ಆವರಣ ಪಿಜಿ ಸಂಭಾಂಗಣದ ದಲ್ಲಿ ಸಾಹೇ ವಿವಿ, ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಐಕ್ಯೂಎಸಿ, ಮಹಿಳಾ ಬಲವರ್ದನಾ ಕಮಿಟಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ತಮ್ಮ ಅನಿಸಿಕೆ ಹಂಚಿಕೊಂಡ ಅವರು ಸಮಾಜದಲ್ಲಿ ಇಂದಿಗೂ ಗಂಡು-ಹೆಣ್ಣು ಗಳೆಂಬ ತಾರತಮ್ಯವಿದ್ದು ಇದಕ್ಕೆ ಉತ್ತರ ಕೊಡುವಂತ ಕಾಲಘಟ್ಟದಲ್ಲಿ ಮಹಿಳೆಯು ಬೆಳೆದಿದ್ದಾಳೆ ಈ ನಿಟ್ಟಿನಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಯು ಕೂಡ ಮಹಿಳೆಯನ್ನು ಪ್ರಾತಿನಿಧಿಕವಾಗಿ ಕಂಡಿದ್ದು ಅತಿ ಹೆಚ್ಚು ಮಹಿಳಾ ಉಪನ್ಯಾಸಕರು ಪ್ರಾಧ್ಯಾಪಕರುಗಳು ಪ್ರಾಂಶುಪಾಲರುಗಳಂತಹ ಹುದ್ದೆಗಳನ್ನು ಸೃಜಿಸಿ ಅವರ ಘನತೆ ಗೌರವಗಳಿಗೆ ರಕ್ಷಣೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ನಾನು ಕೂಡ ಎಫ್ ಕೆ ಸಿ ಸಿ ಐ ಮೊದಲ ಮಹಿಳಾ ಅಧ್ಯಕ್ಷರಾಗಿ ಹೊರಹೊಮ್ಮಿ ಮಹಿಳಾ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದ್ದೇನೆ, ಮಹಿಳೆಯರು ಯಾವ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು ಎಂಬ ತಾಂತ್ರಿಕವಾದ ಯೋಜನೆಗಳನ್ನು ರೂಪಿಸುತ್ತಾ ಪ್ರತಿ ಶನಿವಾರ ಮಹಿಳೆಯರ ಸಭೆಗಳನ್ನು ನಡೆಸಿ ಮಹಿಳೆಯರು ಆರ್ಥಿಕವಾಗಿ ಸಮಾಜದಲ್ಲಿ ಹೇಗೆ ಬದಲಾವಣೆ ಕಾಣಬೇಕು ಮತ್ತು ಕೈಗಾರಿಕಾ ವಲಯದಲ್ಲಿ ಹೇಗೆ ಸಕ್ರಿಯವಾಗಿರಬೇಕೆಂಬುದರ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.

ಮಹಿಳೆಯರು ಹೆಚ್ಚು ಕೈಗಾರಿಕಾ ವಲಯಗಳಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಥನ್ ಎಂಬ ಯೋಜನೆಯ ರೂಪಿಸಿದ್ದು ಹೊಸದಾಗಿ ಸಣ್ಣ ಕೈಗಾರಿಕೆ ಉದ್ಯಮ ಸ್ಥಾಪಿಸುವ ಮಹಿಳೆಯರಿಗೆ ಸಹಾಯಧನ ಸೇರಿದಂತೆ ಇತರೆ ಸಹಕಾರಗಳನ್ನು ನೀಡುತ್ತಿದೆ ಇದರ ಬಗ್ಗೆ ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟ ಗೊಳ್ಳುತ್ತಿದ್ದು ಮಹಿಳೆಯರು ಉಪನ್ಯಾಸ ವಿದ್ಯಾಭ್ಯಾಸ ಸಂಸಾರಿಕ ಜೀವನದ ಜೊತೆ ಜೊತೆಗೆ ಕೈಗಾರಿಕಾ ವಲಯದಲ್ಲೂ ಹೆಚ್ಚು ಹೊತ್ತು ನೀಡಿ ಪುರಷರಿಗೆ ಸರಿಸಮಾನವಾಗಿ ಬೆಳೆಯಬೇಕು ಎಂದು ಉಮಾರೆಡ್ಡಿ ಅವರು ಕಿವಿಮಾತು ಹೇಳಿದರು.

ಸಾಹೇ ವಿವಿಯ ಉಪಕುಲಪತಿಗಳಾದ ಡಾ ಕೆಬಿ.ಲಿಂಗೇಗೌಡ ಅವರು ಮಾತನಾಡಿ ಮಹಿಳೆಯರು ಕೇವಲ ಸೌಂದರ್ಯ ನೋಟಕ್ಕೆ ಒತ್ತು ಕೊಡದೆ ಸ್ಪರ್ಧಾತ್ಮಕವಾಗಿ ಬೆಳೆದಾಗ ಪುರುಷರಿಗಿಂತ ಹೆಚ್ಚು ಸಕ್ರಿಯವಾಗಿರಬಹುದು ಇದಕ್ಕೆ ಪೂರಕವಾಗಿ ಸಾಹೇ ವಿವಿಯ ಕುಲಾಧಿಪತಿಗಳಾದ ಡಾ. ಜಿ ಪರಮೇಶ್ವರ್ ಅವರು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಅಗಣಿತ ಸಾಧನೆಗಳನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹೀಗಾಗಿ ಮಹಿಳೆಯರು ಎಲ್ಲಾ ವಲಯದಲ್ಲಿ ಅಳತೆ ಮೀರಿ ಬೆಳೆಯಬೇಕು ಎಂಬುದು ಅವರ ಆಶಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂಎಸ್ ರವಿಪ್ರಕಾಶ್ ಅವರು ಮಾತನಾಡುತ್ತಾ ಮಹಿಳೆಯರು ದೇವತೆಯ ರೂಪ ಹೊಂದಿದ್ದಾರೆ ಮಹಿಳೆಯರು ಕೇವಲ ಅಡುಗೆ ಮನೆ ಪುರುಷರ ಸೇವೆಗೆ ಮೀಸಲಾಗದೆ ಎಲ್ಲಾ ಕ್ಷೇತ್ರಗಳಲ್ಲೂ ಪರಿಣಿತಿಯನ್ನು ಹೊಂದಿ ಸಾಧನೆಯನ್ನು ಮಾಡಿದ್ದಾರೆ, ಬಾಹ್ಯಾಕಾಶ ಗಗನಯಾನ ಸೇರಿದಂತೆ ಇತರೆ ವಲಯಗಳಲ್ಲಿ ಗಣನೀಯ ಸಾಧನೆ ಮಾಡಿರುವುದು ಶ್ಲಾಘನೀಯವಾಗಿದ್ದು ಮಹಿಳೆಯರು ಸಮಾಜಮುಖಿಯಾಗಿ ಬೆಳೆದರೆ ದೇಶ ನಾಡು ಸಮೃದ್ಧಿಯಾಗುವದರ ಜೊತೆಗೆ ಮಕ್ಕಳನ್ನ ಪುರುಷರನ್ನ ಸರಿಪಡಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಹೇ ವಿವಿಯ ರಿಜಿಸ್ಟ್ರಾರ್ ಡಾ.ಆಶೋಕ್ ಮೆಹ್ತಾ, ಪರೀಕ್ಷಾಂಗ ವಿಭಾಗದ ಡಾ.ಗುರುಶಂಕರ್, ಡೀನ್ ರೇಣುಕಾಲತಾ, ಐಕ್ಯೂಎಸಿ ಮುಖ್ಯ ಸಂಯೋಜಕರಾದ ಡಾ ವಿ.ರವಿರಾಮ್ , ಡಾ.ಅನಿತಾ ದೇವಿ, ಡಾ ಪೂರ್ಣಿಮಾ,ವಿದ್ಯಾಲಕ್ಷ್ಮೀ ಸೇರಿದಂತೆ ವಿವಿಧ ವಿಭಾಗದ ಮಹಿಳಾ ಮುಖ್ಯಸ್ಥರು ಪ್ರಾಧ್ಯಾಪಕರು ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *