ತುಮಕೂರು : ಜಾತ್ಯತೀತ ಜನತಾದಳದ 2ನೇ ಪಟ್ಟಿ ಬಿಡುಗಡೆಯಾಗಿದ್ದು, ಶಿರಾಕ್ಕೆ ಆರ್.ಉಗ್ರೇಶ್, ತಿಪಟೂರಿಗೆ ಶಾಂತಕುಮಾರ್ ಮತ್ತು ಕಡೂರು ವಿಧಾನಸಭಾ ಕ್ಷೇತ್ರಕ್ಕೆ ವೈ.ಎಸ್.ವಿ. ದತ್ತ ಅವರಿಗೆ ಟಿಕೆಟ್ ನೀಡಲಾಗಿದೆ.
ಮೂರು ತಿಂಗಳ ಹಿಂದೆಯೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್, ಈಗ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 49 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಪಟ್ಟಿಯಲ್ಲಿ ಕಡೂರು ಕ್ಷೇತ್ರಕ್ಕೆ ಮಾಜಿ ಶಾಸಕ ವೈ.ಎಸ್.ವಿ ದತ್ತ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವುದರಿಂದ ಇತ್ತೀಚೆಗಷ್ಟೆ ಜೆಡಿಎಸ್ ಸೇರಿದ್ದ ಧನಂಜಯ್ಯ ಅವರಿಗೆ ಟಿಕೆಟ್ ತಪ್ಪಿದೆ.
ವೈ.ಎಸ್.ವಿ.ದತ್ತ ಅವರು ಇತ್ತೀಚೆಗೆ ಜೆಡಿಎಸ್‍ನಲ್ಲಿ ನಡೆದ ಬೆಳವಣಿಗೆಗಳಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು, ಆದರೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗದ ಕಾರಣ ತಮ್ಮ ಬೆಂಬಲಿಗರ ಸಭೆ ಕರೆದು ಪಕ್ಷೇತರರಾಗಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು.
ಈ ಮಧ್ಯೆ ದತ್ತ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಹಿನ್ನಲೆಯಲ್ಲಿ ಮತ್ತೆ ಕಡೂರು ಕ್ಷೇತ್ರದಲ್ಲಿ ವೈ.ಎಸ್.ವಿ. ದತ್ತರವರಿಗೆ ಟಿಕೆಟ್ ನೀಡಲಾಗಿದೆ.
ವೈ.ಎಸ್.ವಿ.ದತ್ತರವರು ಈ ಹಿಂದೆ ಕಡೂರು ಕ್ಷೇತ್ರದ ಶಾಸಕರಾಗಿದ್ದಾಗ ಉತ್ತಮ ಕೆಲಸ ಮಾಡಿದ್ದರು.
ಶಿರಾ : ಯಾರೂ ಈ ಆರ್.ಉಗ್ರೇಶ್ : ಶಿರಾ ಕ್ಷೇತ್ರಕ್ಕೆ ಬಿ.ಸತ್ಯನಾರಾಯಣ ನಿಧನ ಹೊಂದಿದ ಮೇಲೆ ಹಲವರು ಅಭ್ಯರ್ಥಿಗಳಾಗಲು ತುಂಬಾ ಪ್ರಯತ್ನ ಪಟ್ಟರು, ಆದರೆ ಕೊನೆಗೆ ಆರ್.ಉಗ್ರೇಶ್ ಅವರಿಗೆ ಟಿಕೆಟ್ ನೀಡಲಾಗಿದೆ.
ಆರ್.ಉಗ್ರೇಶ್ ಅವರು ಶಿರಾ ತಾಲ್ಲೂಕಿನ ಆದಲೂರು ಗ್ರಾಮದವರಾಗಿದ್ದು, ಒಮ್ಮೆ ಆದಲೂರು ಗ್ರಾ.ಪಂ.ನ ಉಪ್ಪಾಧ್ಯಕ್ಷರಾಗಿದ್ದರು. ಕೊಟ್ಟ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿದ್ದರು, ಟೌನ್ ಕೋ ಆಪರೇಟಿವ್ ಬ್ಯಾಂಕ್‍ನ ನಿರ್ದೇಶಕರಾಗಿದ್ದರು, ಕುಂಚಿಟಿಗರ ಸಂಘದ ನಿರ್ದೇಶಕರಾಗಿ, ಇವರ ಪತ್ನಿ ತಾಲ್ಲೂಕು ಪಂಚಾಯತಿ ಸದಸ್ಯರಾಗಿದ್ದರು, ಉಗ್ರೇಶ್ ಅವರು 2 ಬಾರಿ ನಗರಸಭಾ ಸದಸ್ಯರಾಗಿದ್ದರು, ಅವರ ಮಗಳು ಸಹ 2 ಬಾರಿ ನಗರಸಭಾ ಸದಸ್ಯರಾಗಿದ್ದರು.
ಈ ಬಾರಿ ಶಿರಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದಂತ ಹಾಸನ ಕ್ಷೇತ್ರದ ಟಿಕೆಟ್ ಕೊನೆಗೂ ಜೆಡಿಎಸ್ ಪಕ್ಷದ ನಿಷ್ಠಾವಂತ ಪ್ರಬಲ ಆಕಾಂಕ್ಷಿಯಾಗಿದ್ದಂತ ಸ್ವರೂಪ್ ಗೆ ಘೋಷಣೆ ಮಾಡಲಾಗಿದೆ.