ಯುವಜನ ಸ್ಪಂದನ – ಉದ್ಯೋಗ ಕೌಶಲ್ಯ ತರಬೇತಿ ಕೇಂದ್ರ

ತಿಪಟೂರು : ಯುವಶಕ್ತಿ ದೇಶದ ಸಂಪತ್ತು. ಆದರೆ ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಈ ಯುವಜನರನ್ನು ಸದ್ಭಳಕೆ ಮಾಡಿಕೊಳ್ಳಲು ವಿಫಲರಾಗಿದ್ದೇವೆ. ಮಾನವ ಸಂಪನ್ಮೂಲವನ್ನು ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯ ತರಬೇತಿ ವಿಷಯದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಟೂಡಾ ಶಶಿಧರ್.ಸಿ.ಬಿ.ತಿಳಿಸಿದ್ದಾರೆ.

ಈ ಆಧುನಿಕ ಯುಗದಲ್ಲಿ ಶಿಕ್ಷಣದಿಂದ ಮಾತ್ರ ಉದ್ಯೋಗ ಸಿಗುವುದಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ಹೆಚ್ಚಿನ ಕೌಶಲ್ಯದ ಅಗತ್ಯವಿದೆ. ಇದಕ್ಕೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಮತ್ತು ಪೆÇ್ರೀತ್ಸಾಹ ಅವಶ್ಯಕ ಎಂದಿದ್ದಾರೆ.

ಈ ನಿಟ್ಟಿನಲ್ಲಿ ತಿಪಟೂರು ತಾಲ್ಲೂಕು ನುರಿತ ಯುವಕರ ಕೇಂದ್ರವಾಗಿ ಹೊರಹೊಮ್ಮಬೇಕಿದೆ. ಇದರಿಂದ ತಿಪಟೂರಿನಿಂದ ಪ್ರಮುಖ ನಗರಗಳಿಗೆ ಯುವಕರ ವಲಸೆಗೆ ಕಡಿವಾಣ ಬೀಳಲಿದೆ. ತಿಪಟೂರಿನ ಯುವಕ, ಯುವತಿಯರಿಗೆ ಉದ್ಯೋಗ ಮತ್ತು ಉದ್ದಿಮೆಗೆ ಸಂಬಂಧಿಸಿದಂತೆ ಕೌಶಲ್ಯ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಕೌಶಲ್ಯ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದರ ಪೂರ್ವ ತಯಾರಿಯಾಗಿ ಫೆಬ್ರವರಿ 5ರ ಭಾನುವಾರ ನಗರದ ಬಯಲು ರಂಗಮಂದಿರದಲ್ಲಿ ಬೆಳಗ್ಗೆ 10:30 ಕ್ಕೆ ಜನಸ್ಪಂದನ ಟ್ರಸ್ಟ್, ಉನ್ನತಿ ಸಂಸ್ಥೆ, ಅರ್ಟಿಸ್ಟ್ ಫಾರ್ ಹರ್ ಹಾಗೂ ಕ್ಯೂಸ್ ಸಂಸ್ಥೆಗಳ ಸಹಯೋಗದಲ್ಲಿ ತಿಪಟೂರಿನ ಯುವಕ ಯುವತಿಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಜನಸ್ಪಂದನ ಟ್ರಸ್ಟ್ ಸಂಸ್ಥಾಪಕ ಸಿ.ಬಿ. ಶಶಿಧರ್ (ಟೂಡಾ) ಅವರು ‘ಉದ್ಯೋಗ ಕೌಶಲ್ಯ’ ಕುರಿತು ಯುವಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಿ.ಬಿ. ಶಶಿಧರ್ (ಟೂಡಾ), ಕಾಂಗ್ರೆಸ್ ಮುಖಂಡರು, ತಿಪಟೂರು ವಿಧಾನಸಭಾ ಕ್ಷೇತ್ರ,ತುಮಕೂರು ಜಿಲ್ಲಾ ವಾರ್ ರೂಮ್ ಸಂಜೋಜಕರು ಅಧ್ಯಕ್ಷರು, ಜನಸ್ಪಂದನ ಟ್ರಸ್ಟ್, ತಿಪಟೂರು, ಮೊ.ನಂ: 9845749685 ಇವರನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *