ಅಲ್ಪಸಂಖ್ಯಾತರ ಓಲೈಕೆ ನೀತಿಯನ್ನ ಕಾಂಗ್ರೇಸ್ ಸರ್ಕಾರ ಬೆಂಬಲಿಸಿ ಪೋಷಿಸುತ್ತಿದೆ: ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್.

ತುಮಕೂರು:ಕಾಂಗ್ರೇಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಠೀಕರಣ ನೀತಿಯನ್ನ ಬೆಂಬಲಿಸಿ ಪೋಷಿಸುತ್ತಿದೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರವೂ ಸಹ ಅಲ್ಪಸಂಖ್ಯಾತರ ತುಷ್ಠೀಕರ‌ಣ ನೀತಿಯನ್ನೆ ತನ್ನದಾಗಿಸಿಕೊಂಡಿತ್ತು, 24 ಹೆಚ್ಚು ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರ ಕೊಲೆಗೆ ಪರೋಕ್ಷವಾಗಿ ಕಾಂಗ್ರೇಸ್ ಕಾರಣವಾಗಿತ್ತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಆರೋಪಿಸಿದರು.

ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ನಯ್ಯರಾಲ್ ಅವರ ಹತ್ಯೆಯನ್ನು ಖಂಡಿಸಿ ಮಾತನಾಡಿದ ಅವರು ಹೆಚ್ಚುತ್ತಿರುವ ಜಿಹಾದಿ ಮಾನಸಿಕತೆಯೇ ಈ ಹತ್ಯೆಗೆ ಕಾರಣ ಎಂದರು.

ನೂಪುರ್ ಶರ್ಮ ಅವರ ಹೇಳಿಕೆಯನ್ನು ಬೆಂಬಲಿಸಿ ಟ್ವಿಟ್ ಮಾಡಿದ್ದ ಸಂಬಂಧ ಪೊಲೀಸರು ಕನ್ನಯ್ಯಲಾಲ್‌ರವರನ್ನು ಠಾಣೆಗೆ ಕರೆಸಿದ್ದರು . ನಂತರ ತಮಗೆ ಬೇವ ಬೆದರಿಕೆ ಇರುವುದಾಗಿ ಕನ್ನಯ್ಯಲಾಲ್ ಪೊಲೀಸರಿಗೆ ತಿಳಿಸಿದ್ದರು . ಆದರೂ ಅವರಿಗೆ ಪೊಲೀಸರು ಭದ್ರತೆ , ರಕ್ಷಣೆ ನೀಡಲಿಲ್ಲ . ಆದ್ದರಿಂದ ಈ ಹತ್ಯೆಯ ಹಿಂದೆ ರಾಜಸ್ಥಾನ ಪೊಲೀಸರ ವೈಫಲ್ಯ ಮತ್ತು ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರಕಾರದ ವಿಫಲತೆ ಇರುವುದು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.

ರಾಜಸ್ಥಾನದ ಕಾಂಗ್ರೆಸ್ ಸರಕಾರವು ಅಲ್ಪಸಂಖ್ಯಾತರ ತುಷ್ಟಿಕರಣ ನೀತಿಯನ್ನು ಬೆಂಬಲಿಸಿ , ಪೋಷಿಸುತ್ತಾ ಬಂದಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಕರ್ನಾಟಕದಲ್ಲೂ ಈ ಹಿಂದೆ ಅಲ್ಪಸಂಖ್ಯಾತರ ತುಷ್ಟಿಕರಣ ನೀತಿಯನ್ನೇ ತನ್ನದಾಗಿಸಿಕೊಂಡಿತ್ತು . 24 ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರ ಕೊಲೆಗೆ ಪರೋಕ್ಷವಾಗಿ ಕಾಂಗ್ರೆಸ್ ಕಾರಣವಾಗಿತ್ತು ಅಲ್ಲದೆ ಸಿದ್ದರಾಮಯ್ಯನವರು ಈ ಕೊಲೆಗಳಿಗೆ ಬೆಂಬಲವಾಗಿ ನಿಂತು ದೇಶವಿರೋಧಿ ಸಂಘಟನೆಗಳ ಮುಖಂಡರ ಮೇಲಿನ ಪ್ರಕರಣಗಳನ್ನು ರದ್ದುಪಡಿಸಿದ್ದರು .ಅಧಿಕಾರದಲ್ಲಿ ಇಲ್ಲದಾಗಲೂ ಗಲಭೆಗಳಿಗೆ ಪ್ರಚೋದನೆ ಕೊಡುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ . ಇದೆಲ್ಲದಕ್ಕೂ ಸಿದ್ದರಾಮಯ್ಯನವರ ಮತಬ್ಯಾಂಕ್ ರಾಜಕೀಯವೇ ಕಾರಣ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷ ಎಲ್ಲೇ ಅಧಿಕಾರದಲ್ಲಿ ಇದ್ದರೂ ಅದು ಹಿಂದೂಗಳ ವಿರುದ್ಧ ಒಳಸಂ- ಸಂಚು ಷಡ್ಯಂತ್ರ ಮಾಡುತ್ತ ಬಂದಿದೆ.

ರಾಜಸ್ಥಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ, ಅಲ್ಲದೆ , ಎಲ್ಲ ರಂಗಗಳಲ್ಲಿ ವಿಫಲವಾಗಿರುವ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಹೆಚ್ಚುತ್ತಿರುವ ಜಿಹಾದಿ ಮಾನಸಿಕತೆಯ ವಿರುದ್ಧ ಮತ್ತು ಇಂಥ ಕೊಲೆಗಳ ಬಗ್ಗೆ ಕಾಂಗ್ರೆಸ್ಸಿಗರು , ತಥಾಕಥಿತ ಬುದ್ಧಿಜೀವಿಗಳ ಮೌನ ಯಾಕೆ ? ಎಂದು ರವಿಶಂಕರ್ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರವಿಶಂಕರ್ ಹೆಬ್ಬಾಕ, ಪ್ರಧಾನ ಕಾರ್ಯದರ್ಶಿ ಬೈರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಅಂಭಿಕಾ ಹುಲಿನಾಯ್ಕರ್, ಮಾಧ್ಯಮ ಪ್ರಮುಖ್ ಟಿ‌ಆರ್ ಸದಾಶಿವಯ್ಯ, ಸನತ್,‌ಜಿಲ್ಲಾ ವಕ್ತಾರ ಕೆ ಪಿ ಮಹೇಶ್, ಟೂಡಾ ಮಾಜಿ ಸದಸ್ಯ ಜಗದೀಶ್ ಹಾಜರಿದ್ದರು.

Leave a Reply

Your email address will not be published. Required fields are marked *