ಅಹಿಂದ ವರ್ಗವನ್ನು ಯಾರು ಗುತ್ತಿಗೆ ಪಡೆದಿಲ್ಲ: ಮುದಿಮಡು ರಂಗಸ್ವಾಮಯ್ಯ


ತುಮಕೂರು: ಅಹಿಂದ ವರ್ಗಗಳ ಸಣ್ಣ ನಾಯಕರು ಸಂಕಷ್ಟಕ್ಕೆ ಸಿಲುಕಿದಾಗ ಯಾವ ಅಹಿಂದ ಸಂಘಟನೆಗಳು, ಮುಖಂಡರು ಹೋರಾಟಕ್ಕೆ ಬರಲಿಲ್ಲ ಈಗ ಹೋರಾಟದ ಎಚ್ಚರಿಕೆ ನೀಡುತ್ತಿರುವುದು ಏಕೆ ಎಂದು ಜಿ.ಪಂ.ಮಾಜಿ ಅಧ್ಯಕ್ಷ ಮುದಿಮಡು ರಂಗಸ್ವಾಮಯ್ಯ ಪ್ರಶ್ನಿಸಿದರು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಣ್ಣ ನವರು ಮಾತನಾಡಿರುವುದು ಶೋಭೆ ತರುವಂತಹದ್ದಲ್ಲ ಆದರೆ ಅಹಿಂದ ಮುಖಂಡರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ, ಅಹಿಂದ ವರ್ಗಗಳಿಗೆ ಅನ್ಯಾಯವಾದಾಗ ಯಾವ ಹೋರಾಟ ನಡೆಸಿದ್ದಾರೆ ಎಂದು ಪ್ರಶ್ನಿಸಿದರು.

ಅಹಿಂದ ಮುಖಂಡರು ಯಾರನ್ನು ಗುತ್ತಿಗೆ ತೆಗೆದುಕೊಂಡಿಲ್ಲ, ಸ್ಥಳೀಯ ನಾಯಕತ್ವ ಜನಪ್ರಿಯತೆಯಿಂದ ಗೆದ್ದಿರುವುದು ಅಷ್ಟೇ, ಕೆ.ಎನ್. ಆರ್ ಬಗ್ಗೆ ಪ್ರೀತಿ ಇದ್ದಷರೆ ಸಮಸ್ಯೆ ಬಗೆಹರಿಸಿ ಅದನ್ನು ಹೋರಾಟ ಎಂದರೆ ನಾವು ಹೋರಾಟ ಮಾಡುತ್ತೇವೆ ಎಂದರು.

ಅಹಿಂದ ನಾಯಕರು ಪತ್ರಿಕಾಗೋಷ್ಠಿ ನಡೆಸಿ, ಇನ್ನಷ್ಟು ಸಮಸ್ಯೆ ದೊಡ್ಡದಾಗಿಸಿದ್ದಾರೆ, ಅಹಿಂದ ನಾಯಕರು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿಯೂ ಹೋರಾಟಕ್ಕೆ ಬಂದಿಲ್ಲ, ಕೆಎನ್ ಆರ್ ದೇವೇಗೌಡರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಿ ಎಂದು ಸಲಹೆ ನೀಡಿದರು.

ದೇವೇಗೌಡರು ವ್ಯಕ್ತಿತ್ವ ಕಂಡು ಪ್ರೀತಿಸುವ ಜನರಿದ್ದಾರೆ, ಅಹಿಂದ ವರ್ಗಗಳನ್ನು ಯಾರು ಗುತ್ತಿಗೆ ಪಡೆದಿಲ್ಲ, ಸಣ್ಣಸಣ್ಣವರು ಸ್ಥಳೀಯತೆ ಆಧಾರದ ಮೇಲೆ ರಾಜಕಾರಣವನ್ನು ನಡೆಸುತ್ತಿವೆ, ಅಲ್ಲಿಯೇ ರಾಜೀ ಮಾಡಿಕೊಳ್ಳುತ್ತೇವೆ, ಇಂತಹ ಪ್ರಕರಣಗಳು ಮತ್ತೆ ಪುನಾರವರ್ತನೆ ಆಗುವುದು ಬೇಡ ಎಂದು ಹೇಳಿದರು.

ದೇಶಕಂಡ ರೈತರ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಗ್ಗೆ ಕೆ.ಎನ್.ರಾಜಣ್ಣ ಅವರು ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಲಿಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳಿಗೆ ಅಧಿಕಾರ ಕೊಡಿಸಲಿ ದೇವೇಗೌಡರ ಶ್ರಮ ಕಾರಣ, ಹಿಂದುಳಿದ ವರ್ಗಗಳಿಗೆ ಅಧಿಕಾರ ಕೊಡಿಸಿದ ಅವರ ಬಗ್ಗೆ ಹಿಂದುಳಿದ ವರ್ಗದವರಾಗಿ ಮಾತನಾಡಿರುವುದು ಖಂಡನೀಯ ಎಂದು ಹೇಳಿದರು.

ಜೆಡಿಎಸ್ ಮುಖಂಡ ಅನಿಲ್ ಕುಮಾರ್ ಮಾತನಾಡಿ, ರಾಜ್ಯದ ಪ್ರತಿನಿಧಿಯಾಗಿ ಇಂದಿಗೂ ದೇವೇಗೌಡರನ್ನು ನೋಡುತ್ತಾರೆ, ಅಂತಹ ವ್ಯಕ್ತಿಯ ಬಗ್ಗೆ ಮಾತನಾಡಿರುವುದು ನಮಗೆಲ್ಲ ನೋವು ತಂದಿದೆ, ದೇವೇಗೌಡರ ಮಾರ್ಗದರ್ಶನ, ಅವರ ಧ್ವನಿ ನಮಗೆಲ್ಲ ಅವಶ್ಯಕವಾಗಿದ್ದು, ದೇವೇಗೌಡರು ಶತಾಯುಷಿಗಳಾಗುತ್ತಾರೆ ಎಂದರು.ಹಿರಿಯರ ಬಗ್ಗೆ ಮಾತನಾಡುವುದು ಶೋಭೆ ತರುವಂತಹದ್ದಲ್ಲ ಎಂದು ಹೇಳಿದರು.

ಅನಿಲ್ ಕುಮಾರ್, ಉಪ ಮೇಯರ್ ನಾಜಿಮಾ ಬೀ, ಪಾಲಿಕೆ ಸದಸ್ಯ ಡಿ.ಕೆ ಮಂಜುನಾಥ್, ಮಾಜಿ ಸದಸ್ಯ ನರಸಿಂಹರಾಜು, ಇಸ್ಮಾಯಿಲ್, ಚೆಲುವರಾಜು, ಗಂಗಪ್ಪ, ಬೈರೇಶ್ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *