ತುಮಕೂರಿನ ಝೆನ್ ಟೀಮ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಇದೇ ತಿಂಗಳ 30 ರ ಶನಿವಾರ ರಾತ್ರಿ 7 ಗಂಟೆಗೆ ಶಿರಾ ತಾಲೂಕು ಶ್ರೀ ಮಣ್ಣಮ್ಮ ದೇವಿ ದೇವಸ್ಥಾನ ಪ್ರಾಂಗಣದಲ್ಲಿ ಜುಂಜಪ್ಪನ ಕಾವ್ಯ, ಗಣೆಪದ ಹಾಗೂ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತುಪ್ಪದಕೋಣ ಗೊಲ್ಲರಹಟ್ಟಿಯ ಗಣೆಕ್ಯಾತಪ್ಪ ಮತ್ತು ತಂಡದಿಂದ ಗಣೆ ಪದ ಹಾಗೂ ಗೌಡಪ್ಪ, ನಿಂಗಮ್ಮ ತಂಡದಿಂದ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಝೆನ್ ಟೀಮ್‍ನ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸರ್ವೋದಯ ಮಂಡಲದ ಜಿಲ್ಲಾ ಕಾರ್ಯದರ್ಶಿ ಆರ್.ವಿ. ಪುಟ್ಟಕಾಮಣ್ಣ ನೆರವೇರಿಸುವರು. ಜುಂಜಪ್ಪನ ಕಾವ್ಯ ಕುರಿತು ಜಾನಪದ ವಿದ್ವಾಂಸ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಣ್ಣಮ್ಮ ದೇವಿ ದೇವಸ್ಥಾನದ ಗುಡಿಗೌಡ್ರು ಸಿz್ದÉೀಗೌಡ, ಕಲಾವಿದರಾದ ಪುಟ್ಟಲಿಂಗೇಗೌಡ, ಪೂಜಾರ್ ಜಡಿಯಪ್ಪ ಆಗಮಿಸಲಿದ್ದಾರೆ.