ಕಥಾ ಕೀರ್ತನೆ ಭಾರತೀಯ ಸಂಸ್ಕøತಿ ಮತ್ತು ಅಧ್ಯಾತ್ಮದ ಸಂಮಿಶ್ರಣ.

ತುಮಕೂರು:ಕಥಾ ಕೀರ್ತನೆ ಭಾರತೀಯ ಸಂಸ್ಕøತಿ ಮತ್ತು ಅಧ್ಯಾತ್ಮದ ಸಂಮಿಶ್ರಣ.ಇಂದೊಂದು ಪ್ರಾಚಿನ ಕಲೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರರಾದ ಸ್ವಾಂದೇನಹಳ್ಳಿಯ ಕೋದಂಡರಾಮಯ್ಯ ಅಭಿಪ್ರಾಯಪಟ್ಟರು.

ರಂಗಕೀರ್ತನ ಸಂಪದ(ರಿ) ಮಲ್ಲಸಂದ್ರ,ತುಮಕೂರು ಇವರು ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದಲ್ಲಿ ಬಸವ ಜಯಂತಿ ಅಂಗವಾಗಿ ಸ್ವಾಂದೇನಹಳ್ಳಿಯ ಶ್ರೀಬಸವೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿವಕಥಾ ಸಂಕೀರ್ತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು,ಟಿ.ವಿ.ಗಳು ಪರಿಚಯವಾಗುವ ಮೊದಲು ಜನರಿಗೆ ಮನರಂಜನೆಯ ಜೊತೆಗೆ,ಉತ್ತಮ ಸಂದೇಶಗಳನ್ನು ತಲುಪಿಸುತಿದ್ದ ಕೆಲಸವನ್ನು ಹರಿಕಥೆ, ಶಿವಕಥೆಗಳು ಮಾಡುತಿದ್ದವು ಎಂಬುದನ್ನು ನಾವ್ಯಾರು ಮರೆಯುವಂತಿಲ್ಲ ಎಂದರು.

ಇಂದು ತಾಂತ್ರಿಕತೆ ಹೆಚ್ಚಾದಂತೆ ಎಲ್ಲರ ಮನೆಯಲ್ಲಿ ಟಿ.ವಿ., ಯುವಕರ ಕೈಯಲ್ಲಿ ಮೊಬೈಲ್ ಬಂದ ನಂತರ ಹರಿಕಥೆ, ಶಿವಕಥೆ ಎಂಬುದು ನೈಪಥ್ಯಕ್ಕೆ ಸರಿಯುತ್ತಿರುವುದು ವಿಷಾದದ ಸಂಗತಿಯಾಗಿದೆ. ಗ್ರಾಮೀಣ ಭಾಗದ ಜನರಲ್ಲಿ ಸೌಹಾರ್ಧತೆ, ಸೋದರತೆಯನ್ನು ಬೆಳೆಸುವಲ್ಲಿ ಹರಿಕಥೆಗಳ ಪಾತ್ರ ಮಹತ್ವದ್ದು,ಇಂತಹ ಕಲೆಯನ್ನು ಉಳಿಸಿ,ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕಾಗಿದೆ ಎಂದು ಕೋದಂಡರಾಮಯ್ಯ ತಿಳಿಸಿದರು.
ಹರಿಕಥಾ ವಿದ್ವಾನ್ ಶ್ರೀಮತಿ ಶೀಲಾ ನಾಯ್ಡು ತಂಡದವರಿಂದ ಗಿರಿಜಾ ಕಲ್ಯಾಣ ಎಂಬ ಶಿವಕಥಾ ಸಂಕೀರ್ತನವನ್ನು ನಡೆಸಿಕೊಡಲಾಯಿತು. ಇದೇ ವೇಳೆ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕøತ ಜಿಲ್ಲಾಧಿಕಾರಿಗಳ ಕಾರು ಚಾಲಕ ಜಯರಾಂ ಹಾಗು ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು.

ಗ್ರಾಮಪಂಚಾಯಿತಿ ಸದಸ್ಯರಾದ ವೆಂಕಟೇಶ್,ಗಿರಿಜಮ್ಮ ರಾಜಕುಮಾರ್,ಕಲಾವಿದರಾದ ದೊಡ್ಡರಾಮಯ್ಯ, ಮಹಾರುದ್ರೇಶ್, ಚಿಕ್ಕಣ್ಣನವರು,ಕಾಳಯ್ಯ,ಮಹದೇವ್,ದೊಡ್ಡಯ್ಯ, ಶಿವಲಿಂಗಪ್ಪ, ರಂಗನಾಥ್, ಯೋಗಾನಂದ,ವಕೀಲರಾದ ವಿಜಯಕುಮಾರ್, ಮಹಮದ್ ರಫೀ ಹಾಗೂ ಸ್ವಾಂದೇನಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಈ ವೇಳೆ ರಂಗಸೊಗಡು ಕಲಾಟ್ರಸ್ಟ್‍ನ ಸಿದ್ದರಾಜು,ರಂಗಕೀರ್ತನ ಸಂಪದ(ರಿ)ಮಲ್ಲಸಂದ್ರ ಇದರ ಅಧ್ಯಕ್ಷರಾದ ಡಾ.ಲಕ್ಷ್ಮಣದಾಸ್ ಸ್ವಾಂದೇನಹಳ್ಳಿ ಗ್ರಾಮಸ್ಥರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *