ಜನಜಾಗೃತಿ ಪಾದಯಾತ್ರೆ : ಬಾಲ್ಯದಲ್ಲಿಯೇ ಮಕ್ಕಳ ಪಠ್ಯಪುಸ್ತಕದಲ್ಲಿ ಬೌದ್ಧಿಕ ವಿಷ- ಶ್ರೀ ಜ್ಞಾನ ಪ್ರಕಾಶ ಮಹಾಸ್ವಾಮಿಜಿ

ತಿಪಟೂರು: ಪಠ್ಯಪುಸ್ತಕದಲ್ಲಿ ಬೌದ್ಧಿಕ ವಿಷತುಂಬಿ ಮಕ್ಕಳ ಬಾಲ್ಯದಲ್ಲಿಯೇ ಮಕ್ಕಳಿಗೆ ಉಣಿಸಿ ಮನುವಾದದ ಗುಲಾಮಗಿರಿಗೆ ತಳ್ಳಿವ ಹುನ್ನಾರವನ್ನ ರಾಜ್ಯಸರ್ಕಾರ ರೂಪಿಸಿದೆ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಮಹಾಸ್ವಾಮಿಜಿ ಆರೋಪಿಸಿದರು.

ತಾಲ್ಲೋಕಿನ ಹಾಲ್ಕುರಿಕೆ ಗ್ರಾಮದಲ್ಲಿ ಜಾಗೃತ ತಿಪಟೂರು ವೇದಿಕೆ ವತಿಯಿಂದ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಹಮ್ಮಿಕೊಂಡಿರುವ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ ಪಠ್ಯಪುಸ್ತಕದಲ್ಲಿ ಬೌದ್ದಿಕ ವಿಷತುಂಬಿ ಬಾಲ್ಯದಲ್ಲಿಯೇ ಮಕ್ಕಳಿಗೆ ಉಣಿಸಿ ಮನುವಾದದ ಗುಲಾಮಗಿರಿಗೆ ತಳ್ಳುವ ಹುನ್ನಾರ ರಾಜ್ಯಸರ್ಕಾರ ರೂಪಿಸಿದೆ ಎಂದರು.

ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನ ಉಳ್ಳವರಿಂದ ಉಳ್ಳವರಿಗಾಗಿ ಉಳ್ಳವರಿಗೊಸ್ಕರ ಎನ್ನುವ ಮೂಲಕ ಬಹುಜನರ ಹಿತಮರತು ಉಳ್ಳವರಿಗಾಗಿ ಕೆಲಸ ಮಾಡುತ್ತಿದ್ದು ಬಹುಜನ ಸಂಸ್ಕೃತಿಯನ್ನ ನಾಶಮಾಡಿ ಬ್ರಾಹ್ಮಣೀಕರಣವನ್ನ ಏರುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಮನುವಾದದ ಹುನ್ನಾರದ ವಿರುದ್ಧ ಜನ ಜಾಗೃತರಾಗುತ್ತಿದ್ದು ಬಿಜೆಪಿಯ ಸಾಂಸ್ಕೃತಿಕ ರಾಜಕಾರಣದ ಹುನ್ನಾರವನ್ನ ಜನಸಾಮಾನ್ಯರಲ್ಲಿ ಜಾಗೃತಿಗೊಳಿಸಲು ಜಾಗೃತಿ ಜಾಥ ಆರಂಭಿಸಲಾಗಿದೆ.

ಸಿ.ಬಿ.ಶಶಿಧರ್ : ತಾಲ್ಲೂಕಿನ 97% ಇರುವ ಶೂದ್ರ ಸಮುದಾಯಗಳ ಮತ ಪಡೆದು ಅಧಿಕಾರಕ್ಕೆ ಬಂದಿರುವ ನೀವು ಈ ಸಮುದಾಯಗಳನ್ನ ಪ್ರತಿನಿಧಿಸಬೇಕಾಗಿತ್ತು. ಮಂದಿನ 25 ವರ್ಷಗಳ ನಂತರವೂ ಸರ್ವಾಧಿಕಾರಕ್ಕೆ ಬರಲು ಮುಂದಾಗಿದೆ ಎಂದು ಶಿಕ್ಷಣ ಸಚಿವರ ವಿರುದ್ದ ಜನಜಾಗೃತಿ ವೇದಿಕೆ ಮುಖಂಡ ಸಿ.ಬಿ.ಶಶಿಧರ್ ಹರಿಹಾಯ್ದರು.

ಶಾಲಾ ಹಂತದಲ್ಲೆ ಮಕ್ಕಳಲ್ಲಿ ಜಾತಿ, ಧರ್ಮದ ವಿಷಬೀಜ ಬಿತ್ತಿ ಒಂದಾಣಿಕೆಯಾಗದಂತೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಾಂಸ್ಕೃತಿ ರಾಜಕಾರಣ ಮಾಡಿ ಇನ್ನೂ 25 ವರ್ಷದ ನಂತರವೂ ಸರ್ವಾಧಿಕಾರಕ್ಕೆ ಬರಲು ಬಿಜೆಪಿ ಮುಂದಾಗಿದೆ ಎಂದರು.

ಪಠ್ಯ ಪರಿಷ್ಕರಣೆ ಮಾಡಿ ಶಾಲಾ ಹಂತದಲ್ಲೆ ಮಕ್ಕಳಲ್ಲಿ ಜಾತಿ, ಧರ್ಮದ ವಿಷಬೀಜ ಬಿತ್ತುವ ಮೂಲಕ ಬಿಜೆಪಿ ಸರ್ಕಾರ ಜಾತ್ಯಾತೀತ ರಾಷ್ಟ್ರದಲ್ಲಿ ಸಾಂಸ್ಕೃತಿಕ ರಾಜಕಾರಣ ಮಾಡಿ. ಆದರೆ ಪಠ್ಯ ಪರಿಷ್ಕರಣೆ ಸಮೀತಿಯಲ್ಲಿ 10 ಜನರಲ್ಲಿ 9 ಜನರನ್ನ ಒಂದೇ ಜಾತಿಯವರನ್ನ ನೇಮಿಸಲು ನಿಮಗೆ ಮನಸ್ಸಾದ್ರೂ ಹೇಗೆ ಬಂತು, 28 ಪಠ್ಯಗಳಲ್ಲಿ 24 ಒಂದೇ ಸಮುದಾಯದ ಜನರ ಪಠ್ಯಗಳನ್ನ ಸೇರಿಸಿದ್ದೀರಲ್ಲಾ ನಿಮಗೆ ಸಂವಿಧಾನದಲ್ಲಿ ನಂಬಿಕೆ ಇದೆಯಾ…ಎಂದು ಪ್ರಶ್ನಿಸಿದರು. ಶಿಕ್ಷಣ ಸಚಿವರ ಈ ಕೇಡಿನ ಅಪಾಯದ ಮೂನ್ಸೂಚನೆಗಳನ್ನ ನಾವು ಜನರಿಗೆ ತಿಳಿಸದೇ ಇದ್ದರೆ ಮುಂದೆ ಇನ್ನೂ ದೊಡ್ಡ ಗಂಡಾಂತರ ರಾಜ್ಯಕ್ಕೆ ಒದಗಿಬರಲಿದೆ ಈಗಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರ ರಾಜೀನಾಮೆ ಆಗ್ರಹಿಸಿ ಈ ಪಾದಯಾತ್ರೆಯನ್ನ ಹಮ್ಮಿಕೊಂಡಿದ್ದೆವೆ ಎಂದರು.

ನಾಡಿನ ಜನರು ಇಷ್ಟೆಲ್ಲಾ ವಿರೋಧ ವ್ಯಕ್ತ ಪಡಿಸಿದ್ರು, ತಪ್ಪು ತಿದ್ದಿಕೊಳ್ಳುತ್ತಿಲ್ಲ ಎಂದರೆ ಶಿಕ್ಷಣ ಸಚಿವರನ್ನ ಇನ್ಯಾರೊ ಕಂಟ್ರೋಲ್ ಮಾಡ್ತಿದ್ದಾರೆ ಎಂದೇನಿಸುತ್ತಿದೆ. ಸಚಿವರು ತಮ್ಮ ತಪ್ಪು ತಿದ್ದುಕೊಳ್ಳಲು ಈ ನಾಡಿನ ಜನರು ಅವಕಾಶ ನೀಡಿದ್ದಾರೆ ಸಚಿವರು ಉದ್ದಟತನವನ್ನ ಬಿಟ್ಟು ತಮ್ಮ ತಪ್ಪನ್ನು ತಿದ್ದಿಕೊಳ್ಳಲಿ, ತಮ್ಮ ಕೈಲಿ ಅಧಿಕಾರವಿದೆ ಅದನ್ನ ಬಳಸಿಕೊಂಡು ಕ್ಷೇತ್ರಕ್ಕೆ ನೀರಾವರಿಯನ್ನ ತಂದು ರೈತರಿಗೆ ಅನುಕೂಲ ಮಾಡಿಕೊಡಲಿ ಎಂದು ಸಲಹೆ ನೀಡಿದರು.

ಜೊತೆಗೆ ಜುಲೈ 10 ನೇ ತಾರಿಖು ಭಾನುವಾರ ನಾಡಿನ ಪ್ರಗತಿರ ಚಿಂತಕರು, ಸಾಹಿತಿಗಳು, ಹೋರಾಟಗಾರರು ತಿಪಟೂರು ಚಲೋ ಎಂಬ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದಾರೆ ಕಾರ್ಯಕ್ರಮದಲ್ಲಿ ಸುಮಾರು 500 ಕ್ಕೂ ಹೆಚ್ಚು ಜನ ಹೋರಾಟದ ಮನಸ್ಸುಗಳು ಭಾಗವಹಿಸುತ್ತಿದ್ದಾರೆ, ಇದರಲ್ಲಿ ನಾವು ಸಹ ಕೈಜೋಡಿಸುತ್ತಿದ್ದೆವೆ. ರಾಜ್ಯಾದ್ಯಂತ ಎಲ್ಲರೂ ಬಂದು ಈ ಹೋರಾಟದಲ್ಲಿ ಭಾಗವಹಿಸಿ ಈ ಕೇಡನ್ನ ಹಿಮ್ಮೆಟ್ಟಿಸಲು ನಮಗೆ ಧೈರ್ಯ ತುಂಬ ಬೇಕು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *