ಜೂನ್ 26ಮತ್ತು 27 ರಂದು ಸಿ.ಐ.ಟಿ.ಯು. ಕಟ್ಟಡ ಕಾರ್ಮಿಕರ 4ನೇ ರಾಜ್ಯ ಸಮ್ಮೇಳನ

ತುಮಕೂರು : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‍ನ 4ನೇ ರಾಜ್ಯ ಸಮ್ಮೇಳನ ಜೂನ್ 26ಮತ್ತು 27 ರಂದು ಕಲ್ಪತರು ನಾಡಿನ ತುಮಕೂರು ನಗರದಲ್ಲಿ ನಡೆಯಲಿದ್ದು ಈ ಸಮ್ಮೇಳನಕ್ಕೆ  ರಾಜ್ಯದ ವಿವಿದ ಜಿಲ್ಲೆಗಳನ್ನು ಪ್ರತಿನಿಧಿಸಿ ಸುಮಾರು 400 ಪ್ರಮುಖ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.  ಎಂದು ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ. ದೊರೈರಾಜು ತಿಳಿಸಿದ್ದರು.
 

ಕಾರ್ಯಾಧ್ಯಕ್ಷ ಬಿ.ಉಮೇಶ್ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿಜೂನ್ 26 ರ ಬೆಳಗ್ಗೆ 10 ಗಂಟೆಗೆ ಡಾ. ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರುಗಲಿದ್ದು ,ಉದ್ಘಾಟನೆಯನ್ನು ಬೆಂಗಳೂರು ಕಾನೂನು ವಿಶ್ವವಿದ್ಯಾಲಯದ ಡೀನ್ ಮತ್ತು ಪ್ರಿನ್ಸಿಪಾಲ್ ಡಾ. ಸುರೇಶ ವಿ. ನಾಡಗೌಡರ್ ನೆರವೇರಿಸುವರು. ಸ್ವಾಗತ ಭಾಷಣವನ್ನು ಚಲನಚಿತ್ರ ನಟ ಹಾಗು ಅಧ್ಯಕ್ಷ ಹನುಮಂತೇಗೌಢರು ಮಾಡಲಿದ್ದು ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‍ನ ಅಧ್ಯಕ್ಷ ಎನ್.ವೀರಾಸ್ವಾಮಿ ವಹಿಸುವರು. ಮುಖ್ಯ ಅತಿಥಿಗಳಾಗಿ ಸಿ.ಡಬ್ಲ್ಯು.ಎಫ್.ಐ.ನ ರಾಷ್ಟ್ರ ಉಪಾಧ್ಯಕ್ಷ ದೇಬಂಜನ್ ಚಕ್ರವರ್ತಿ, ಸಿ.ಐ.ಟಿ.ಯು ರಾಜ್ಯಾಧ್ಯಕ್ಷರಾದ ಎಸ್.ವರಲಕ್ಷ್ಮಿ ಸಿಯಟಿಯು ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್, ಭಾಗವಹಿಸುವರು. ಪ್ರಧಾನ ಕಾರ್ಯದರ್ಶಿ ಕಮಲ, ಉಪಸ್ಥಿತರಿರುವರು. ಇದೇ ವೇಳೆ 75 ವಸಂತಗಳು ತುಂಬಿದ ಚಿಂತಕ ಪ್ರೊ .ಕೆ.ದೊರೈರಾಜು ಅವರನ್ನು ಅಭಿನಂದಿಸಲಾಗುವುದು.

ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ವ್ಯಾಸ ದೇಶಪಾಂಡೆ ರಚಿಸಿರುವ “ಇವ ನಮ್ಮವ” ನಾಟಕ ಮೆಳೇಹಳ್ಳಿ ದೇವರಾಜು ಅವರ ನಿರ್ದೇಶನದಲ್ಲಿ ಡಮರುಗ ರಂಗಸಂಪನ್ಮೂಲ ಕೇಂದ್ರ ಹಾಗೂ ರಂಗ ಅನಿಕೇತನ ಸಂಯುಕ್ತ ಆಶ್ರಯದಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.

ಜನರು ಬೆಲೆ ಹೆಚ್ಚಳದಿಂದ ತತ್ತರಿಸಿದ್ದು, ಇದರ ಜೊತೆಗೆ ಕಟ್ಟಡ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮ್ಮೇಳನ ಬೆಳಕು ಚಲ್ಲಲಿದೆ ಮಾತ್ರವಲ್ಲ ಜನಸಾಮಾನ್ಯರ ನಿರುದ್ಯೊಗ, ಬಡತನ, ಅದಾಯ ಕುಂಠಿತವಾಗಿರುವುದು ಸೇರಿದಂತೆ ಜನರ ಐಕ್ಯತೆಗೆ ಒತ್ತು ನೀಡಲಾಗುವುದೆಂದರು ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯಿಂದ ಸಾಕಷ್ಟು ತೊಂದರೆಯನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘಟನೆಯ ದೃಷ್ಟಿಯಿಂದ ಇದೊಂದು ಮಹತ್ವದ ಸಮ್ಮೇಳನವಾಗಲಿದೆ. ರಾಜ್ಯದಲ್ಲಿ ಉಂಟಾಗಿರುವ ಕೋಮುಗಲಭೆಗಳ ಹಿನ್ನೆಲೆಯಲ್ಲಿ ರಾಜ್ಯ ಎದುರಿಸುತ್ತಿರುವ ಬಿಕ್ಕಟ್ಟುಗಳು ಕುರಿತು ಚರ್ಚೆಗಳು ಈ ಸಮ್ಮೇಳನದಲ್ಲಿ ಚರ್ಚೆಯಾಗಲಿz.É ನೋಟ್ ಬ್ಯಾನ್, ಜಿ.ಎಸ್.ಟಿ. ಜಾರಿಯಿಂದಾಗಿ ನಿರ್ಮಾಣ ಕ್ಷೇತ್ರದ ಮೇಲಾಗಿರುವ ಪರಿಣಾಮಗಳು ಕುರಿತು ಸಮ್ಮೇಳನದಲ್ಲಿ ವಿಸ್ಕøತ ಚರ್ಚೆಗಳು ನಡೆಯಲಿವೆ. ಗೋಷ್ಠಿಯಲ್ಲಿ ಮುಖಂಟರುಗಳಾದ ಟಿ.ಎಂ. ಗೋವಿಂದರಾಜು,, ಇಬ್ರಾಹಿಂ ಖಲೀಲ್, ಒ.ಆರ್.ರವೀಶ್, ಸಿ.ಐ.ಟಿ.ಯು ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *