ಪಠ್ಯಪುಸ್ತಕ ಪರಿಸ್ಕರಣೆ ವಾಪಸ್ಸಿಗೆ ಜನಾಂದಲೋನ ಚಳುವಳಿ ರೂಪಿಸಲು ಪಣ-ಬಿಜೆಪಿ ಹೈಕಮಾಂಡ್ ನಾಗಪುರದಲ್ಲಿದೆ-ಎಲ್.ಎನ್.ಮುಕುಂದರಾಜ್

ತುಮಕೂರು: ಪಠ್ಯಪುಸ್ತಕ ಪರಿಸ್ಕರಣೆ ವಾಪಸ್ಸು ಪಡೆಯುವಂತೆ ಗೋಕಾಕ್ ಚಳುವಳಿಯಂತೆ ಜನಾಂದಲೋನ ಚಳುವಳಿಯಾಗಿ ರೂಪಿಸಬೇಕಿದೆ ಎಂದು ಸಾಹಿತಿಗಳು, ಚಿಂತಕರು, ವಿದ್ವಾಂಸರುಗಳು ಮತ್ತು ಚಳುವಳಿಗಾರರು ಪಣ ತೊಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಮತ್ತು ತುಮಕೂರು ಜನಪರ ಚಳುವಳಿಗಳ ಒಕ್ಕೂಟದ ಸಹಯೋಗದಲ್ಲಿ ಪಠ್ಯಪುಸ್ತಕ ಪರಿಸ್ಕರಣೆ ಕುರಿತು ಸಂವಾದವನ್ನು ಜುಲೈ 9ರಂದು ತುಮಕೂರು ನಗರದ ಬಿ.ಹೆಚ್.ರಸ್ತೆ ಯ ದ್ವಾರಕ ರೆಸಿಡೆನ್ಸಿ ಯಲ್ಲಿ ಏರ್ಪಡಿಸಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಸಂವಾದದಲ್ಲಿ ಮಾತನಾಡುತ್ತಿದ್ದರು.

ಸಾಹಿತಿ ಎಲ್.ಎನ್.ಮುಕುಂದರಾಜ್ ಮಾತನಾಡಿ ಈಗ ಬಹು ದೊಡ್ಡ ಪ್ರತಿ ರೋಧ ಒಡ್ಡುವ ಕಾಲಘಟ್ಟ ಇದಾಗಿದೆ, ಇಲ್ಲದಿದ್ದರೆ ನಮ್ಮ ಮಕ್ಕಳನ್ನು ಜೀತಕ್ಕೆ ತಳ್ಳುವ ಪಾಪವನ್ನು ನಾವೆ ಮಾಡಿದಂತಾಗುತ್ತದೆ ಎಂದು ಸಾಹಿತಿ ಎಲ್.ಎನ್.ಮುಕುಂದರಾಜ್ ಅಭಿಪ್ರಾಯ ಪಟ್ಡರು.

ಯಾರದೋ ಪ್ರಾಮಾಣಿಕ, ಧಾರ್ಮಿಕ ನಶೆಗೆ ಬಹು ದೊಡ್ಡ ಚಪ್ಪಡಿ ಹಾಕಿಕೊಂಡಿದ್ದೇವೆ. ಇಂತಹ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ, ಪ್ರತಿರೋಧ ಆದರೂ ಮುಖ್ಯಮಂತ್ರಿ ಮತನಾಡುತ್ತಿಲ್ಲ,ಮೋದಿ, ಅಡ್ವಾಣಿ ಇವರ ಹೈಕಮಾಂಡಲ್ಲ, ಇವರ ಹೈಕಮಾಂಡ್ ನಾಗಪುರದಲ್ಲಿದೆ.


ವಿಷ್ಣು ಹುಟ್ಟುವುದು ಕಮಲದಲ್ಲಿ, ಆ ಹಿನ್ನೆಲೆಯಲ್ಲಿ ಅವರ ಪಕ್ಷ ಕ್ಕೆ ಕಮಲದ ಚಿಹ್ನೆ ಇಟ್ಟು ಕೊಂಡಿದ್ದಾರೆ, ಬಾಬ್ರಿ ಮಸೂದೆ ಕೆಡವಿ ದಾಗ ರಾಮನ ಅವತಾರದ ಪರುಶುರಾಮ ಚಿತ್ರ ಹಾಕಿದರು. ಏಕೆಂದರೆ ಪರುಶುರಾಮ ಭೂಮಿಯನ್ನು ಒಂಬತ್ತು ಸಲ ಸುತ್ತಿ ಕ್ಷತ್ರಿಯರನ್ನು ಕೊಂದು ಬ್ರಾಹ್ಮಣರನ್ನು ಉಳಿಸಿದ, ಮಹಿಳೆಯರನ್ನು ಹಿಡಿತದಲ್ಲಿಟ್ಟುಕೊಳ್ಳಲು ಪರುಶುರಾಮ ತನ್ನ ತಾಯಿ ತಲೆ ಕಡಿದ, ಶೂದ್ರ ಕರ್ಣ ಬ್ರಾಹ್ಮಣ ಅಲ್ಲ ಎಂದು ವಿದ್ಯೆಯನ್ನು ಕಿತ್ತುಕೊಂಡ ಇದರಿಂದ ಬ್ರಾಹ್ಮಣರು ಅಥವಾ ಸಂಘ ಪರಿವಾರದ ವರು ರಾಮನ ರೂಪದ ಪರುಶುರಾಮನ ಚಿತ್ರ ಹಾಕಿಕೊಂಡಿದ್ದಾರೆ ಎಂದರು.

ರೈತರು ಯುದ್ಧ ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ್ದರೆ ಬ್ರಿಟಿಷರು ಭಾರತವನ್ನು ಆಳುವುದಕ್ಕೆ ಆಗುತ್ತಿರಲಿಲ್ಲ, ,ಯುದ್ಧ ಮಾಡಲು ಹೋದ ರೈತರನ್ನು ವಿದ್ಯೆ ಇಲ್ಲ ಎಂದು ತಡೆದರೆ, ದಲಿತರನ್ನು ಜಾತಿ, ವಿದ್ಯೆ ಇಲ್ಲ ಎಂದು ಹೊರಗಿಟ್ಟರು. ಹೀಗಾಗಿ ಬ್ರುಟಿಷರು ಭಾರತದ ಜಾತಿಯನ್ನೆ ಬಂಡವಾಳ ಮಾಡಿಕೊಂಡು ಆಳ್ವಿಕೆ ಮಾಡಿದರು ಎಂದ ಅವರು, ರೈತ ಹೊಲ ಉಳುವುದನ್ನು ಬಿಟ್ಟು ಯುದ್ಧ ಮಾಡಿದ್ದರೆ ಚರಿತ್ರೆ ಬೇರೆ ಇರುತ್ತಿತ್ತು ಎಂದು ಹೇಳಿದರು.

ಸಂವಿಧಾನ ಬಂದ 70 ವರ್ಷಗಳ ನಂತರ ಅನ್ಯಾಯ, ಅವಮಾನ ಮಾಡುತ್ತಿರುವುದನ್ನು ಬರಹದ ಮೂಲಕ ಶೂದ್ರರು, ದಲಿತರು ಎತ್ತಿ ತೋರಿಸಿದಾಗ ನಮ್ಮ ಬುಡ ಕ್ಕೆ ಉಳಿಗಾಲವಿಲ್ಲ ಎಂದು ತಿಳಿದು ಈಗ ಪಠ್ಯಪುಸ್ತಕದ ಮೂಲಕ ಅವರ ಕೊಳಕನ್ನು ಆರ್.ಎಸ್.ಎಸ್ ಹೇಳಿದ್ದನ್ನು ಹೇರಲು ಹೊರಟಿದ್ದಾರೆ ಎಂದು ಹೇಳಿದರು.

ನಾಡಗೀತೆಗೆ ಅವಮಾನ, ನಾಡ ಧ್ವಜಕ್ಕೆ ಅವಮಾಡಿದ ರೋಹಿತ್ ಚಕ್ರತೀರ್ಥನನ್ನು ರಾಷ್ಟ್ರ ದ್ರೋಹದಡಿ ಬಂಧಿಸಬೇಕಿತ್ತು. ತಿದ್ದೋಲೆ ಸರ್ಕಾರ ಮಾಡುತಾ ಇದೆ ಎಂದರೆ ಸರ್ಕಾರ ತಪ್ಪು ಮಾಡಿದೆ ಅಂತ ಅರ್ಥ. ಈ ತಿದ್ದುಪಡಿ ಯಾರಿಗೆ ಸಿಗುತ್ತದೋ ಗೊತ್ತಿಲ್ಲ ಮಕ್ಕಳು ಪುಸ್ತಕ ಓದುವುದೇ ಕಷ್ಡ ತಿದ್ದುಪಡಿ ಓದುತ್ತಾರೆಯೇ? ಎಂದು ಪ್ರಶ್ನಿಸಿದರು.

ಬಿಜೆಪಿ ಒಂದೇ ಸಮುದಾಯದವರನ್ನೇ ಶಿಕ್ಷಣ ಸಚಿವರನ್ನು ಮಾಡಿದ್ದಾರೆ. ಅದೊಂದು ಸಮಾಜದ ವರೇನೆ ವಿದ್ವಾಂಸರು ಇರುವುದು.ಈಗ ಅಲೆಮಾರಿ, ಮಹಿಳೆಯರು, ದಲಿತರು ಬರವಣಿಗೆ ಮಾಡುತ್ತಿದ್ದಾರೆ.ಸರ್ಕಾರ ಎಲ್ಲಾ ಜಾತಿಯವರು ಇರಬೇಕು ಎಂಬುದು ಗೊತ್ತಿರಬೇಕಿತ್ತು.ನಾವು ಪ್ರಶ್ನಿಸುವವರನ್ನು ಎಡ ಪಂಥಿಯರು ಎನ್ನುತ್ತಾರೆ. ನಾವು ಕುವೆಂಪು ಅವರ ಪತಿತೋರಣ ಉದ್ದರಣ ಪಂಥ, ಬಿಜೆಪಿಯವರು ದೊಡ್ಡರಂಗೇಗೌಡ, ಮಲ್ಲೇಪುರಂ ಅಂತಹ ಸಾಹಿತಿಗಳನ್ನು ತೋರಿಕೆಗೆ ಇಟ್ಟು ಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಸೂಲಿಬೆಲೆ ಚಕ್ರವರ್ತಿ ಅವರ ಪಾಠ ಇಟ್ಟಿದ್ದಾರೆ, ಮಕ್ಕಳು ಅವರ ಕಾವ್ಯ ನಾಮವೇನು ಎಂದರೆ ಸಾಮಾಜಿಕ ಜಾಲ ತಾಳದಲ್ಲಿ ನೀಡಿರುವ ಹ್ಯಂಗೆ ಪುಂಗ್ಲಿ ಅವರ ಕಾವ್ಯನಾಮ ಎಂದು ಹೇಳಬೇಕ ಎಂದರು. ಜಾತಿ ಹುಡುಕುವವರು ಇವರು ಮಾಸ್ತಿ, ರಾಜರತ್ನಂ, ಗೋ.ಕೃ.ಅಡಿಗರ ಬರಹಗಳಿರಲಿಲ್ಲವೆ, ಜಾತಿ ಮಾಡುವರು ಪ್ರತಿಭೆಗೆ ಮಾನ್ಯತೆ ನೀಡಬೇಕಿತ್ತು.ವೆಂಕಟೇಶ ಮೂರ್ತಿ, ಲಕ್ಷ್ಮಣ ರಾವ್ ಇರಲಿಲ್ಲವೆ, ಇದು ದೇಶಕ್ಕೆ ಬಗೆದ ದ್ರೋಹ ಎಂದ ಅವರು,ಭೂಪಟ ಎಂದರೆ ಜನ ಎಂದು ತಿಳಿಯಲಿ ಎಂದರು.

ಕುವೆಂಪು ಹೋರಟ ಸಮಿತಿ ಉಗ್ರ ಹೋರಾಟ ಮಾಡಲಿದೆ. ಎಲ್ಲ ರಾಜಕೀಯದವರು ಇದ್ದಾರೆ. ಇದು ವ್ಯಾಪಕವಾಗಿ ಹಬ್ಬಬೇಕು.ಅಹಂಕಾರಿ ಪ್ರಭುತ್ವವನ್ನು ಕೊನೆಗಾಣಿಸಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ, ತಿಂಗಳಾನುಗಟ್ಟಲೆ ಚರ್ಚೆ ನಡೆಯುತ್ತಿದ್ದರೂ ಪರಿಣಾಮಕಾರಿ ಬೀರಿಲ್ಲ ಎಂದರು.
ಬರಗೂರರು ಸ್ಪಷ್ಟನೆ ನೀಡಲು ಹೋದರೆ ಅವರ ಮೇಲೆಯೇ ಗೂಭೆ ಕೂರಿಸುವ ಹುನ್ನಾರ ಮಾಡುತ್ತಾರೆ, ಪಠ್ಯಪುಸ್ತಕ ಪರಿಷ್ಕರಣಾ ಸಮತಿ ಅಧ್ಯಕ್ಷರು ಅಧಿಕಾರದ ಪ್ರಭುತ್ವದಿಂದ ಮಾತನಾಡುತ್ತಾರೆ.ಹಳೆಯದನ್ನು ಕೊಡಿ ಎಂದರೂ ಕೊಡದೆ ಹೊಸ ಪುಸ್ತಕ ಕೊಟ್ಟಿದ್ದಾರೆ. ಪ್ರಶ್ನೆ ಮಾಡಿದರೆ ದೇಶ ದ್ರೋಹಿಗಳು ಎನ್ನುತ್ತಾರೆ ಎಂದರು
1 ರಿಂದ 7ನೇ ತರಗತಿವರೆಗೆ ಭಾಷ್ಯ ಪಠ್ಯ ಗಳು ಬೇಡ. ಪ್ರಾದೇಶಿಕ ಭಾಷೆ, ಕಲೆಗೆ ಒತ್ತು ನೀಡಬೇಕು. ಇತಹ ಸಂದರ್ಭದಲ್ಲಿ ಓದುಗರಿಂದ ಸಾಹಿತಿಯಾದವರು, ಸಾಮಾಜ ಬದಲಾವಣೆ ಬಯಸುವವರು ಮಾತನಾಡಬೇಕು. ಕುವೆಂಪು ರವರ ಸಾಹಿತ್ಯವನ್ನೇ ಅಂತಹ ಸಾಹಿತ್ಯ, ವಿಚಾರ ಬೇಕಿಲ್ಲ ಎಂಬ ಮನೋಭಾವ ಬಿತ್ತುತ್ತಿದ್ದಾರೆ. ಮಕ್ಕಳ ಭವಿಷ್ಯ ಏನು ಎಂದು ಯೋಚಿಸುವವರು ಮಾತನಾಡಬೇಕು ಎಂದರು.

ಕವಯಿತ್ರಿ ಬಿ.ಸಿ.ಶೈಲಾನಾಗರಾಜುರೋಹಿತ್ ಚಕ್ರತೀರ್ಥ ಯಾರು ಎಂದು ಜನ ಸಾಮಾನ್ಯರು ಕೇಳುತ್ತಿದ್ದಾರೆ.ಟುಟೋರಿಯಲ್ ನಡೆಸುವರು ಪಠ್ಯ ಪುಸ್ತಕ ಪರಿಷ್ಕರಣೆ ಅಧ್ಯಕ್ಷರಾದರೂ ಶಿಕ್ಷಣ ಮಂತ್ರಿ ಬಾಯಿ ಮುಚ್ಚಿಕೊಂಡು ಮಹಾ ದೊಡ್ಡ ಮೋಸ ಮಾಡಿದರು ಎಂದರು.


ಬ್ರಾಹ್ಮಣರು ಅಧಿಕಾರದಲ್ಲಿರುವುದನ್ನು ಹೇಳದಿರುವುದು ನಾವು ತಪ್ಪು ಮಾಡಿದ್ದೇವೆ. ಮುಖ್ಯಮಂತ್ರಿ ಪ್ರತಿ ರೋಧ ಬಂದರೂ ಮಾತನಾಡುತ್ತಿಲ್ಲ. ದಾಸೋಹ ಎಂಬುದನ್ನು ಸಹ ಬರೆದಿಲ್ಲ, ನಮ್ಮ ಜಾಗೃತಿಗೆ, ಆತ್ಮಸಾಕ್ಷಿಗೆ ಪ್ರಶ್ನೆ ಕೇಳಿಕೊಳ್ಳಬೇಕು.ಮುಖ್ಯಮಂತ್ರಿಗೆ ಘೆರಾವ್ ಹಾಕಬೇಕು ಅದು ವಿಧಾನಸೌಧದಿಂದಲೇ ಪ್ರಾರಂಭಿಸಬೇಕು. ಶೂದ್ರ ಪ್ರಜ್ಞೆ ಎಚ್ಚರಗೊಳ್ಳಬೇಕು ಎಂದರು.
ಶಿಕ್ಷಣ ಮಂತ್ರಿಗೆ ಎಂತಹ ಆತ್ಮಸಾಕ್ಷಿ ಇದೆ. ನಮ್ಮ ಮಕ್ಕಳಿಗೆ ಅನ್ಯಾಯ, ಅಂಬೇಡ್ಕರ್ ಗೂ ಅವಮಾನ. ಹೋರಾಟ ರೂಪಿಸದಿದ್ದರೆ ನಮ್ಮಗೂ ಉಳಿವಿಲ್ಲ.ಹಳ್ಳಿ ಮಕ್ಕಳಿಗೆ ಇಂದು ತಿಳುವಳಿಕೆ ನೀಡಿ, ದ್ರಾವಿಡ ಪ್ರಜ್ಞೆ ಗೆ ಸರಿಯಾದ ರೂಪಕ್ಕೆ ಆಂದೋಲನ ಮಾಡಬೇಕಿದೆ ಎಂದರು.

ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಕಾರ್ಯದರ್ಶಿ ಡಾ.ರವೀಂದ್ರ ಹೆಚ್.ಎನ್ ಮಾತನಾಡಿ ತಿದ್ದೋಲೆಗಳನ್ನು ಕೊಡುತ್ತೇವೆ ಎಂದ ಕೂಡಲೇ ಹೋರಾಟಕ್ಕೆ ಸಿಕ್ಕ ಜಯ ಎಂದುಕೊಳ್ಳುತ್ತೇವೆ. ಆದರೆ ಇದು ತಿಪ್ಪೆಗೆ ಎಸೆಯ ಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿ, ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಮಕ್ಕಳ ಪೋಷಕರ ಜೊತೆ , ಸಾಮಾನ್ಯ ಜನರ ಜೊತೆ ಬುದ್ಧನ ರೀತಿಯಲ್ಲಿ ಹೇಳಬೇಕು ಎಂದರು.

ತುಳಿತಕೊಳಗಾದವರ ನೋವು ಅವರಿಗೆ ಗೊತ್ತಿಲ್ಲ , ಹೊಸ ಧರ್ಮಗಳ ಉದಯಿಸಿದ ಪಾಠ ಬಿಟ್ಟಿರುವುದು ಒಂದು ಧರ್ಮ ಹೇರಲು. ಯಾವುದೇ ಮುಜಗರವಿಲ್ಲದೆ ಬ್ರಾಹ್ಮಣರು ಮುಸ್ಲಿಂ ಜನರ ಬಗ್ಗೆ ಶೂದ್ರರಿಗೆ ವಿಷ ಬೀಜ ಬಿತ್ತಿದ್ದಾರೆ. ಅಗ್ನಿಪಥ್ ಮೂಲಕ ಶೂದ್ರ ರ ಮಕ್ಕಳು ಪದವಿ ಓದದಂತೆ ಮಾಡಲು ಹೊರಟಿದ್ದಾರೆ. ಒಂದು ತಲೆಮಾರಿನ ಮಕ್ಕಳನ್ನು ಪದವಿಯನ್ನು ವಂಚಿಸಿ ಉನ್ನತ ಹುದ್ದೆಗೆ ಹೋಗದಂತೆ ತಡೆಯಲು ಹೊರಟಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು ಎಂದ ಅವರು ಪಠ್ಯ ಪುಸ್ತಕ ಪರಿಷ್ಕರಣೆ ಮೂಲಕ ಶಿಕ್ಷಣ ಸಚಿವರು ಬೆತ್ತಲಾಗಿದ್ದಾರೆ, ಈಗಲಾದರೂ ನಾವುಪ್ರಾಯಚಿತ್ತಕ್ಕೂ ಮುಂದಾಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆ.ದೊರೈರಾಜ್ ಮಾತನಾಡಿ ಸಂಘಪರಿವಾರದವರು ಜಾತಿವಾರು ಭೇಟಿ ಮಾಡಿ ಹೋರಾಟಗನ್ನು ದುರ್ಬಲ ಗೊಳಿದ್ದಾರೆ.ಪ್ರಜ್ಞಾವಂತರು ಇದಕ್ಜೆ ಸ್ಟ್ರಾಟಜಿ ಮಾಡಿ, ಜನರ ಮಧ್ಯೆ ಹೋಗಬೇಕು. ಸವಾಲು ಎಂದರೆ ಸಾಮನ್ಯ ಜನರಿಗೆ ಶಿಕ್ಷಣದ ಬಗ್ಗೆ ತಿಳಿಸಬೇಕಾಗಿರುವುದು,ಪಠ್ಯಪುಸ್ತಕ ಪರಿಷ್ಕರಣೆಯನ್ನು ಎನ್‌ಸಿಎಫ್ ನವರು ಮಾಡುತ್ತಿದ್ದರು. ಆದರೆ ಈ ಸರ್ಕಾರ ಯಾರಿಗೂ ಗೊತ್ತಿಲ್ಲದೆ ಮಾಡಿದ್ದಾರೆ. ಮಾಧ್ಯಮದವರು ಒಂದು ಪಕ್ಷದ ಪರವಾಗಿ ಮಾತನಾಡುತ್ತಿದ್ದಾರೆ, ಈ ಹಿಂದಿನ ಪಠ್ಯ ಮತ್ತು ಪರಿಷ್ಕರಣೆಗೊಂಡ ಪಠ್ಯ ಎರಡನ್ನೂ ಇಟ್ಟು ಚರ್ಚೆ ಮಾಡುತ್ತಿಲ್ಲ. ಸರ್ಕಾರಕ್ಕೆ ಮಾಧ್ಯಮ, ಪ್ರಭುತ್ವ ಇರುವುದರಿಂದ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಅವರು ಮಣಿಸುವ ಪಟ್ಟು ಗಳನ್ನು ಕಲಿತ್ತಿದ್ದಾರೆ ಎಂದರು.ಆAತರಿಕವಾಗಿ ಸಂವಾದ ಇಡೀ ವ್ಯವಸ್ಥೆ ತಿದ್ದುವಂತೆ, ಸರ್ಕಾರಗಳು ನಮ್ಮನ್ನು ಆಳುತ್ತಿಲ್ಲ, ಕಾಣದ ಕೈಗಳು ಆಳುತ್ತಿರುವುದನ್ನು ಭೌದ್ದಿಕ ಮತ್ತು ಪ್ರಜ್ಣಾವಂತಿಕೆಯಿAದ ಹಿಮ್ಮೆಟ್ಟಿಸಬೇಕು. ದೊಡ್ಡ ಆಂದೋಲನಕ್ಕೆ ರಾಜಕೀಯವಾಗಿ, ಸಾಹಿತ್ಯವಾಗಿ ಆಗಬೇಕಿದೆ ಎಂದರು.
ಬರಗೂರರಿಗೆ ತರವಲ್ಲದವರಿಂದ ತೇಜೋವಧೆ ಮಾಡಿಸಕಾಗುತ್ತಿದೆ. ಪುರೋಹಿತ ಶಾಹಿ ಕುವೆಂಪುರವರ ಚಿಂತನೆಗಳನ್ನು ಮರೆಮಾಚಲು ಹೊರಟಿದೆ. ನಮ್ಮ ಮಕ್ಕಳ ಶಿಕ್ಷಣ ಉಳಿವಿಗಾಗಿ ನಮ್ಮ ಹೋರಾಟ ಇದಾಗಿದು, ಬಲವಾದ ಜನ ಶಕ್ತಿ ಯನ್ನು ತುಮಕೂರಿನಲ್ಲಿ ತೋರಿಸಬೇಕಿದೆ ಎಂದು ಚಿಂತಕ ಕೆ.ದೊರೈರಾಜ್ ಅಭಿಪ್ರಾಯಪಟ್ಟರು.

ಕವಯತ್ರಿ ಮಲ್ಲಿಕಾ ಬಸವರಾಜು ಮಾತನಾಡಿ ಪಕ್ಷದ ಆಂದೋಲವಾಗದೆ ಪಠ್ಯ ಪುಸ್ತಕ ಸಮಾಸಮಾಜ ನಿರ್ಮಾಣಕ್ಕೆ ಜನಾಂದೋಲನ ಮಾಡಬೇಕು ಎಂದರು.
ತಿಪಟೂರು ಜನಸ್ಪಂದನ ಟ್ರಸ್ಟ್ನ ಟೂಡಾ ಶಶಿಧರ್ ಮಾತನಾಡಿ ರಾಜಕೀಯಕ್ಕೆ ಒಂದಾಗಿದ್ದೇವೆ ಎಂದು ಬಿಂಬಿಸಲು ಹೊರಟಿದ್ದಾರೆ ಇದನ್ನು ಮಕ್ಕಳಿಗೆ ವಿಷ ಉಳಿಸಲು ಹೊಟಿರುವುದನ್ನು ಹಿಮ್ಮೆಟ್ಟಿಸಲು ಎಂದು ಹೇಳ ಬೇಕು. ಬಹಳ ಜನಕ್ಕೆ ಗೊತ್ತಿಲ್ಲ, ಸಾಮಾನ್ಯ ಜನರಿಗೆ ಸಾಮಾನ್ಯ ಭಾಷೆಯಲ್ಲಿ ಹೇಳಬೇಕು. ಯಾರೂ ಪ್ರತಿಕ್ರಿಯೆ ನೀಡಿಲ್ಲ. ಸಾಪ್ಟ್ ವೇರ್ ಕೂಡ ತಲುಪುತ್ತಿಲ್ಲ. ಸ್ಕಾಲರ್‌ಗಳು ಸಾಮಾನ್ಯರಿಗೆ ಅರ್ಥವಾಗುವಂತೆ ಮಾಡಿಕೊಡಬೇಕು ಎಂದರು.

ಭಾರತೀಯ ಶರಣ ಸೇನೆಯ ರಾಯಸಂದ್ರರವರು ಮಾಡಿನಾಡಿ ಸಂಘಪರಿವಾರದವರು ಹೋರಾಟಗಾರರಲ್ಲ, ಹಾರಾಟಗಾರರು, ಅವರನ್ನು ಈಗ ಮಣಿಸದಿದ್ದರೆ ಮುಂದೆ ಅವರು ಈ ಸಮಾಜಕ್ಕೆ ತುಂಬಾ ಕೇಡನ್ನು ಬಯಸುವವರಾಗುತ್ತಾರೆ ಎಂದರು.

ಜಿ.ಪಂ ಮಾಜಿ ಸದಸ್ಯರು ಹಾಗೂ ಶಿಕ್ಷಣ ತಜ್ಷರಾದ ಕೆಂಚಮಾರಯ್ಯ.ಹೆಚ್. ಮಾತನಾಡಿ ಪರಿಷ್ಕರಣೆ ವಾಪಸ್ಸು ಪಡೆಯುವ ಚಳುವಳಿಯಾಗಬೇಕು, ಮನುಸ್ಮೃತಿ ಮತ್ತೆ ಜಾರಿಗೊಳಿಸಿ ನಮ್ಮನ್ನು ಮತ್ತೆ ಉಳಿಗಮಾನಕ್ಕೆ ತಳ್ಳಲು ಹೊರಟಿದ್ದಾರೆ ಎಂದರು.

ಸಂವಾದದಲ್ಲಿ ಕ.ಸಾ.ಪ ಮಾಜಿ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ, ಕೃಷ್ಣ ಮೂರ್ತಿ ಬಿಳಿಗೆರೆ , ಸತೀಶ್ ತಿಪಟೂರು, ಆಡಿಟರ್ ನಾಗರಾಜು, ವಕೀಲರಾದ ಮಾರುತಿಪ್ರಸಾದ್, ವೇಣುಗೋಪಾಲ್, ಬಿ.ಉಮೇಶ್, ವೆಂಕಟೇಶ್‌ಮೂರ್ತಿ ಮಾತನಾಡಿದರು. ಡಾ.ಬಸವರಾಜು ಸ್ವಾಗತಿಸಿ, ಗಂಗಾಲಕ್ಷಿö್ಮÃ ಪ್ರಾರ್ಥಿಸಿ, ಮಹಾಲಿಂಗಪ್ಪ ಕಗ್ಗಲಡು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *