ತುಮಕೂರು:ಸಮಾಜದಲ್ಲಿರುವ ಸಣ್ಣ ಸಣ್ಣ ಸಮುದಾಯಗಳು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅಂಬೇಡ್ಕರ್ ಅವರ ತತ್ವಗಳ ಮೇಲೆ ನಡೆದರೆ ಖಂಡಿತವಾಗಿಯೂ ಸಮಾಜದ ಮುಖ್ಯವಾಹಿನಿಯನ್ನು ತಲುಪಬಹುದು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ,ಮಹಾನಗರಪಾಲಿಕೆ ಹಾಗೂ ಉಪ್ಪಾರ ಸಮುದಾಯಕ್ಕೆ ಸೇರಿದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಸಂವಿಧಾನದ ಪ್ರಕಾರ ಎಲ್ಲರಿಗೂ ಗೌರವದಿಂದ ಬದುಕುವ ಅವಕಾಶವಿದೆ.ಹಾಗಾಗಿ ಸಮುದಾಯ ಮೇಲೆರಬೇಕೆಂದರೆ ಸಂಘಟಿತರಾಗಿ ಕೆಲಸ ಮಾಡಬೇಕಾಗುತ್ತದೆ.ಹಾಗಾಗಿ ಸರಕಾರಿ ಸವಲತ್ತು ಪಡೆದಿರುವ ಜನರು ತಮ್ಮ ಹಿಂದಿರುವ ಜನರಿಗೆ ಸರಕಾರದ ಸವಲತ್ತು ಪಡೆದು ಮೇಲೆ ಬರುವಂತೆ ನೋಡಿಕೊಳ್ಳಬೇಕಿದೆ.ನೀವುಗಳು ಸಹ ಹಾಸ್ಟಲ್ ನಡೆಸುತಿದ್ದು,ಅದಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನು ನಾವು ಸಹ ನೀಡುತಿದ್ದೇವೆ.ಇವುಗಳ ಉಪಯೋಗವನ್ನು ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಬಳಕೆ ಮಾಡಿಕೊಂಡು ಉನ್ನತ ಶಿಕ್ಷಣದ ಕಡೆಗೆ ಗಮನಹರಿಸಬೇಕೆಂದು ಸಲಹೆ ನೀಡಿದರು.
ಜಾಗತಿಕ ಮಟ್ಟದಲ್ಲಿ ಬರುವ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಹೇಗೆ ಕೆಲಸ ಮಾಡಬೇಕು ಎಂಬ ನಿಟ್ಟಿನಲ್ಲಿ ಸಮುದಾಯದಲ್ಲಿರುವ ಕ್ರಿಯಾಶೀಲರು ಮುಂದೆ ನಿಂತು ಕೆಲಸ ಮಾಡಿದರೆ, ಹಿರಿಯರು ಅವರ ಬೆನ್ನಿಗೆ ನಿಂತು ಸಮುದಾಯದ ಅಭಿವೃದ್ದಿಗೆ ಕಾರ್ಯನಿರ್ವಹಿಸಬೇಕಿದೆ.ನಿನ್ನ ಉದ್ದಾರ ನಿನ್ನಿಂದಲೇ ಎಂಬ ಹಿರಿಯರ ಮಾತನ್ನು ನಾವೆಲ್ಲರೂ ಪಾಲಿಸೊಣ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ಕಿವಿ ಮಾತು ಹೇಳಿದರು.
ಜಿಲ್ಲಾ ಮಹಿಳ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಶ್ರೀಮತಿ ವಾಸಂತಿ ಉಪ್ಪಾರ್ ಮಾತನಾಡಿ,ತಮ್ಮ ಪೂರ್ವಜರ ಮುಕ್ತಿಯನ್ನು ಕಾಣಲು ದೇವಲೋಕದಲ್ಲಿದ್ದ ಗಂಗೆಯನ್ನು ಹಲವಾರು ಸಂಕಷ್ಟವನ್ನು ಎದುರಿಸಿ ತಂದವರು ರಾಜಶ್ರೀಭಗೀರಥರು.ಹಾಗಾಗಿ ಇಂದಿಗೂ ಭಗೀರಥ ಪ್ರಯತ್ನ ಎಂಬ ಮಾತು ಚಾಲ್ತಿಯಲ್ಲಿದೆ.ಅಂದು ತಮ್ಮ ಪೂರ್ವಜರ ಮುಕ್ತಿಗಾಗಿ ತಂದ ಗಂಗೆ, ಇಂದು ಕೋಟ್ಯಾಂತರ ಜನರ ಜೀವಜಲವಾಗಿದೆ.ಅವರ ರೀತಿ ನಾವೆಲ್ಲರೂ ಸತ್ಕಾರ್ಯದಲ್ಲಿ ಭಾಗಿಯಾಗೋಣ ಎಂದು ಸಲಹೆ ನೀಡಿದರು.
ಉಪ್ಪಾರ ಸಮುದಾಯದ ಮುಖಂಡ ಹಾಗೂ ಪಿಡಿಓ ಶ್ರೀನಿವಾಸ್ ಮಾತನಾಡಿ,ರಾಜಶ್ರೀ ಭಗೀರಥರ ಜಯಂತಿಯನ್ನು ಇಂದು ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಮುಂದೆ ಸಮಾಜದ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಉಪ್ಪಾರರ ಸಮಾಜದವತಿಯಿಂದ ಆಯೋಜಿಸಲಾಗುವುದು.ತನ್ನ ಸತತ ಪರಿಶ್ರಮದಿಂದ ದೇವಲೋಕದಿಂದ ಗಂಗೆಯನ್ನು ಭೂಮಿಗೆ ತಂದು ತನ್ನ ಹಿರಿಯರಿಗೆ ಮುಕ್ತ ನೀಡಿದ ಭಗೀರಥ ರಾಜ, ಆ ನಂತರ ರಾಜರ್ಷಿಯಾದರು. ಅಂಬೇಡ್ಕರ್ ಅವರ ಶಿಕ್ಷಣ ಸಂಘಟನೆ, ಹೋರಾಟ, ಬಸವಣ್ಣವರ ಕಾಯಕವೇ ಕೈಲಾಸ ಹಾಗೂ ವಿವೇಕಾನಂದ ನಿನ್ನ ಭಾಳಿನ ಶಿಲ್ಪಿ ನೀನೇ ಎಂಬ ಮಾತುಗಳನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು, ಭಗೀರಥರನ್ನು ಉದಾಹರಣೆಯಾಗಿಟ್ಟುಕೊಂಡು ಸಮಾಜದ ಏಳಿಗೆಗೆ ದುಡಿಯೊಣ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಕುಮಾರ್, ಸುರೇಶಕುಮಾರ್, ಪಾಲಿಕೆ ನಾಮಿನಿ ಸದಸ್ಯ ತ್ಯಾಗರಾಜಸ್ವಾಮಿ, ವೈದ್ಯರಾದ ಡಾ.ನಾಗೇಶ್,ಉಪಾರರ ಸಂಘದ ಗೌರವಾಧ್ಯಕ್ಷ ಗಂಗಪ್ಪ,ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಎಸ್.ಮಂಜುನಾಥ್, ಉಪಾಧ್ಯಕ್ಷರಾದ ರೇಣುಕಯ್ಯ, ನಾಗೇಂದ್ರ, ಜಂಟಿ ಕಾರ್ಯದರ್ಶಿ ಶ್ರೀನಿವಾಸ್, ಸತೀಶ್, ಚನ್ನಿಗರಾಯಪ್ಪ, ಶಿವಣ್ಣ, ರಾಮಚಂದ್ರ, ಮಂಜಣ್ಣ, ಲೋಕೇಶ್, ನಾಗರಾಜು,ಸಂಜೀವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.