ಗುಬ್ಬಿ: ಗುಬ್ಬಿ ತಾಲ್ಲೂಕು ಪೆದ್ದಹಳ್ಳಿಯಲ್ಲಿ ಇಬ್ಬರು ದಲಿತ ಯುವಕರ ಕೊಲೆ ಮಾಸುವ ಮುನ್ನವೇ ಹಾಡು ಹಗಲೇ ದಲಿತ ಮುಖಂಡರೊಬ್ಬರನ್ನು ಗುಬ್ಬಿ ಪಟ್ಟಣದಲ್ಲಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ಮಧ್ಯಾಹ್ನ 1ಗಂಟೆಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಗುಬ್ಬಿ ತಾಲ್ಲೂಕು ದ.ಸಂ.ಸ. ಸಂಚಾಲಕರಾದ ನರಸಿಂಹಮೂರ್ತಿ(ಕುರಿಮೂರ್ತಿ)ಯಾಗಿದ್ದಾರೆ.
ಬಿ.ಹಚ್.ರಸ್ತೆಯ ಟೀ ಅಂಗಡಿ ಮುಂದೆ ಕುಳಿತ್ತಿದ್ದ ನರಸಿಂಹಮೂರ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಗುಂಪು ಪರಾರಿಯಾಗಿದ್ದು, ಹಲ್ಲೆಯ ತೀವ್ರತೆಗೆ ನರಸಿಂಹಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನರಸಿಂಹಮೂರ್ತಿರವರು ಗುಬ್ಬಿಯ ಎ.ಕೆ.ಕಾಲೋನಿವರಾಗಿದ್ದು, ಇಂದು ಮಧ್ಯಾಹ್ನ 1ಗಂಟೆ ಸುಮಾರಿನಲ್ಲಿ ಜೂನಿಯರ್ ಕಾಲೇಜು ಮುಂಭಾಗದ ಹಳೆ ಎಸ್.ಸಿ.-ಎಸ್.ಟಿ. ಹಾಸ್ಟಲ್ ಮುಂಭಾಗದ ಟೀ ಅಂಗಡಿಯ ಮುಂಭಾಗ ಕುಳಿತಿದ್ದಾಗ ಈ ಕೊಲೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸುತ್ತಿದ್ದಾರೆ.
ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ತುಮಕೂರಿನಲ್ಲೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲೇ ಈ ಕೊಲೆ ನಡೆದಿದೆ.
ಈಗ್ಗೆ ಒಂದೂವರೆ ತಿಂಗಳ ಹಿಂದೆ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಯುವಕರ ಕೊಲೆ ಮಾಸುವ ಮುನ್ನವೆ ಹಾಡ ಹಗಲೇ ಗುಬ್ಬಿಯಲ್ಲಿ ಮತ್ತೊಂದು ದಲಿತರ ಕೊಲೆ ನಡೆದಿರುವುದು ಭಯಭೀತಿಯನ್ನುಂಟು ಮಾಡಿದೆ.