‘ಉಚಿತ ಶಿಕ್ಷಣ, ಆರೋಗ್ಯ ಸೇವೆ ಸರ್ಕಾರದ ಆದ್ಯತೆಯಾಗಲಿ’ಪದವಿಧರ ಕ್ಷೇತ್ರಕ್ಕೆ ಆಯ್ಕೆ ಮಾಡಲು ಸ್ವತಂತ್ರ ಅಭ್ಯರ್ಥಿ ಚಿಕ್ಕರಾಜು ಮನವಿ

ತುಮಕೂರು: ನಿರುದ್ಯೋಗಿ ಪದವಿಧರರ ಉದ್ಯೋಗಾವಕಾಶ ಕಲ್ಪಿಸಿ ಅವರು ಬದುಕು ರೂಪಿಸಿಕೊಳ್ಳಲು ಸರ್ಕಾರ ಆದ್ಯತೆ ನೀಡಬೇಕು. ಈ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿ ಇರಬೇಕು. ಸ್ಥಳೀಯ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯ ನಿರುದ್ಯೋಗಿ ಪದವಿಧರರಿಗೆ ಉದ್ಯೋಗ ಕಲ್ಪಿಸಬೇಕಾಗಿರವುದು ಅತ್ಯಗತ್ಯವಾಗಿದೆ ಎಂದು ಆಗ್ನೇಯ ಪದವಿಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಚಿಕ್ಕರಾಜು ಎಸ್. ಯಾದವ್ ಹೇಳಿದರು.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರುದ್ಯೋಗಿ ಪದವಿಧರರಿಗೆ ಉದ್ಯೋಗ ದೊರೆಯಬೇಕು, ಹೊಸ ಪೆನ್ಷನ್ ಸ್ಕೀಂ ರದ್ದು ಮಾಡಿ ಸರ್ಕಾರಿ ನೌಕರರಿಗೆ ಹಳೆ ಪೆನ್ಷನ್ ಸ್ಕೀಂ ಜಾರಿ ಮಾಡಬೇಕು. ಸರ್ಕಾರದ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜಕೀಯ ಅಧಿಕಾರ ಬೇಕು. ಈ ಚುನಾವಣೆಯಲ್ಲಿ ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಿದರೆ ಸಾಧ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ತಾವು ಈಗಾಗಲೇ ಆಗ್ನೇಯ ಪದವಿಧರರ ಕ್ಷೇತ್ರದ ಎಲ್ಲಾ ಐದು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಮತಯಾಚನೆ ಮಾಡಿದ್ದು ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸಂಘ, ಸಂಘಟನೆ, ವಿವಿಧ ಸಂಸ್ಥೆಗಳ ಮೂಲಕ ತಾವು ಮತದಾರರನ್ನು ತಪುಪಿದ್ದು ಅವರು ತಮಗೆ ಮತ ನೀಡಿ ಆಯ್ಕೆ ಮಾಡುವ ವಿಶ್ವಾಸವಿದೆ. ಎಲ್ಲಾ ನಿರುದ್ಯೋಗಿ ಪದವಿಧರರಿಗೆ ಜೀವನ ಭದ್ರತೆ ಹಾಗೂ ಸ್ವಾವಲಂಬಿ ಬದುಕು ನಡೆಸಲು ಪ್ರತಿಯೊಬ್ಬರಿಗೂ ಸರ್ಕಾರ ಎರಡು ಎಕರೆ ಕೃಷಿ ಭೂಮಿ ಮಂಜೂರು ಮಾಡಬೇಕು. ವಕೀಲರಿಗೆ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂದು ಚಿಕ್ಕರಾಜು ಎಸ್. ಯಾದವ್ ಹೇಳಿದರು.

ಇಂದಿನ ದಿನಮಾನದಲ್ಲಿ ಜನರ ಜೀವನ ಮಟ್ಟ, ಜೀವನ ಶೈಲಿ ಬದಲಾಗಿದೆ. ದುಡಿದ ಹಣವು ಆರೋಗ್ಯ ಮತ್ತು ಶಿಕ್ಷಣಕ್ಕೆ ಖರ್ಚು ಮಾಡುವಂತಾಗಿದೆ. ಸರ್ಕಾರಗಳು ಸಾರ್ವಜನಿಕರಿಗೆ ಸಮಾನವಾದ ಉಚಿತ ಶೀಕ್ಷಣ ಹಾಗೂ ಆರೋಗ್ಯ ಸೇವೆ ಒದಗಿಸಲು ಬದ್ಧವಾಗಬೇಕು. ರಾಜಕೀಯ ಪಕ್ಷಗಳು ಚುನಾವಣೆ ವೇಳೆ ನೀಡುವ ಆಶ್ವಾಸನೆಗಳು ಅನುಷ್ಠಾನಗೊಳ್ಳದೆ ಆಶ್ವಾಸನೇಯಾಗೇ ಉಳಿಯುತ್ತವೆ. ರಾಜಕೀಯ ಪಕ್ಷಗಳ ಧೋರಣೆಗೆ ಬೇಸತ್ತಿರುವ ಪದವಿಧರರು ಈ ಬಾರಿ ಸ್ವತಂತ್ರ ಅಭ್ಯರ್ಥಿಯ ಆಯ್ಕೆಗೆ ಒಲವು ತೋರಿರುವುದು ತಾವು ಮತದಾರರನ್ನು ಭೇಟಿ ಮಾಡಿದಾಗ ಅರಿವಿಗೆ ಬಂದಿದೆ. ಇವೆಲ್ಲವೂ ಈಡೇರಲು ರಾಜಕೀಯ ಶಕ್ತಿ, ಇಚ್ಛಾಶಕ್ತಿ ಬೇಕಾಗಿರುವುದರಿಂದ ಆಗ್ನೇಯ ಪದವಿಧರರ ಕ್ಷೇತ್ರ ಚುನಾವಣೆಯಲ್ಲಿ ಕ್ರಮ ಸಂಖ್ಯೆ 5ರ ತಮಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಬೇಕು ಎಂದು ಕೋರಿದರು.

ವಕೀಲರಾದ ಕೆಂಪರಾಜು, ವೆಂಕಟೇಶ್, ರಾಘವೇಂದ್ರ, ಮುಖಂಡರಾದ ನಾಗರಾಜು, ನಾಗೇಂದ್ರಪ್ಪ, ಪ್ರವೀಣ್ ಹಾಜರಿದ್ದರು.

Leave a Reply

Your email address will not be published. Required fields are marked *