SIR ನಂತರ ವೋಟರ್ ಲಿಸ್ಟ್ ಬಿಡುಗಡೆ, ನಿಮ್ಮ ಹೆಸರು ಮತದಾರರ ಪಟ್ಟಯಲ್ಲಿದೆಯೇ ಎಂಬುದನ್ನು ಹೀಗೆ ಖಚಿತ ಪಡಿಸಿಕೊಳ್ಳಿ

ಭಾರತೀಯ ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ಅತ್ಯಂತ ಸರಳವಾದ ಪೋರ್ಟಲ್‌ವೊಂದನ್ನಾ ಅಭಿವೃದ್ಧಿಪಡಿಸಿದೆ. ಈ ಆನ್‌ಲೈನ್ ಪೋರ್ಟಲ್ ಮೂಲಕ ನೀವು ಇಡೀ ವಾರ್ಡ್‌ನ ಮತದಾರರ ಪಟ್ಟಿಯ ಪಿಡಿಎಫ್ ಪ್ರತಿಯನ್ನ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ನಿಮ್ಮ ಎಪಿಕ್ (EPIC) ನಂಬರ್ ಬಳಸಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ನೇರವಾಗಿ ಹುಡುಕಬಹುದು. ಆನ್‌ಲೈನ್‌ನಲ್ಲಿ ಹೆಸರು ಚೆಕ್ ಮಾಡಲು ಈ ಕೆಳಗಿನ ಹಂತಗಳನ್ನ ಅನುಸರಿಸಿ:

ಮೊದಲಿಗೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಬ್ರೌಸರ್ ಓಪನ್ ಮಾಡಿ, ಅಲ್ಲಿ ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ voters.eci.gov.in ಗೆ ಭೇಟಿ ನೀಡಿ.. ಅಲ್ಲಿ ಮುಖಪುಟದಲ್ಲಿ ಕಾಣುವ ‘Search in Electoral Roll’ (ಮತದಾರರ ಪಟ್ಟಿಯಲ್ಲಿ ಹುಡುಕಿ) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

3. ಇಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ – ‘ವಿವರಗಳ ಮೂಲಕ ಹುಡುಕಿ’ , ‘ಎಪಿಕ್ ಸಂಖ್ಯೆ ಮೂಲಕ ಹುಡುಕಿ’ , ಮತ್ತು ‘ಮೊಬೈಲ್ ಸಂಖ್ಯೆ ಮೂಲಕ ಹುಡುಕಿ’.

4. ನಿಮ್ಮ ಬಳಿ ವೋಟರ್ ಐಡಿ ಕಾರ್ಡ್ ಇದ್ದರೆ, ನೇರವಾಗಿ ‘ಎಪಿಕ್ (EPIC) ಸಂಖ್ಯೆ ಮೂಲಕ ಹುಡುಕಿ’ ಆಯ್ಕೆ ಮಾಡಿ.

5. ನಿಮ್ಮ ವೋಟರ್ ಐಡಿ ಸಂಖ್ಯೆ, ರಾಜ್ಯ (ಕರ್ನಾಟಕ) ಹಾಗೂ ಅಲ್ಲಿ ನೀಡಲಾಗಿರುವ ಕ್ಯಾಪ್ಚಾ (Captcha) ಕೋಡ್ ಅನ್ನು ನಮೂದಿಸಿ ‘Search’ ಬಟನ್ ಒತ್ತಿ.

6. ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ, ನಿಮ್ಮ ಸಂಪೂರ್ಣ ವಿವರ, ನಿಮ್ಮ ಮತಗಟ್ಟೆಯ ಹೆಸರು ಹಾಗೂ ವಾರ್ಡ್ ನಂಬರ್ ಪರದೆಯ ಮೇಲೆ ಮೂಡುತ್ತದೆ.

ಪಿಡಿಎಫ್ ರೂಪದಲ್ಲಿ ಇ-ರೋಲ್ ಡೌನ್‌ಲೋಡ್ ಮಾಡುವುದು ಹೇಗೆ?

ನಿಮ್ಮ ಇಡೀ ಪ್ರದೇಶದ ಮತದಾರರ ಪಟ್ಟಿಯನ್ನ ಡೌನ್‌ಲೋಡ್ ಮಾಡಲು ಅದೇ ವೆಬ್‌ಸೈಟ್‌ನಲ್ಲಿ ‘Download E-Roll’ ಎಂಬ ಆಯ್ಕೆ ಇರುತ್ತದೆ. ಅಲ್ಲಿಗೆ ಹೋಗಿ ನಿಮ್ಮ ರಾಜ್ಯ (ಕರ್ನಾಟಕ – S10), ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿ. ನಂತರ ನಿಮ್ಮ ಹತ್ತಿರದ ಮತಗಟ್ಟೆಯನ್ನು ಆಯ್ಕೆ ಮಾಡಿ, ಕ್ಯಾಪ್ಚಾ ಕೋಡ್ ಹಾಕಿದರೆ ಸಂಪೂರ್ಣ ಮತದಾರರ ಪಟ್ಟಿಯ ಪಿಡಿಎಫ್ ಫೈಲ್ ನಿಮ್ಮ ಮೊಬೈಲ್‌ಗೆ ಡೌನ್‌ಲೋಡ್ ಆಗುತ್ತದೆ.

ಇದರಲ್ಲಿ ನಿಮ್ಮ ಹಾಗೂ ನಿಮ್ಮ ಇಡೀ ಕುಟುಂಬದವರ ಹೆಸರುಗಳನ್ನು ನೀವು ಸುಲಭವಾಗಿ ಪರಿಶೀಲಿಸಬಹುದು.ವೋಟರ್ ಹೆಲ್ಪ್‌ಲೈನ್ ಆಯಪ್ ಮೂಲಕ ಪರಿಶೀಲಿಸುವುದು ಹೇಗೆ?

ವೆಬ್‌ಸೈಟ್ ಬಳಸಲು ಕಷ್ಟ ಎನಿಸುವ ಸ್ಮಾರ್ಟ್‌ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಅಥವಾ ಆಯಪಲ್ ಆಯಪ್ ಸ್ಟೋರ್‌ನಿಂದ ‘Voter Helpline’ (ವೋಟರ್ ಹೆಲ್ಪ್‌ಲೈನ್) ಆಯಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಈ ಆಯಪ್‌ನಲ್ಲಿ ‘Voter Search’ ಆಯ್ಕೆಗೆ ಹೋಗಿ, ನಿಮ್ಮ ವೋಟರ್ ಐಡಿ ಮೇಲಿರುವ ಬಾರ್‌ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ಎಪಿಕ್ ಸಂಖ್ಯೆ ನಮೂದಿಸುವ ಮೂಲಕವೂ ನಿಮ್ಮ ಹೆಸರನ್ನ ಪತ್ತೆ ಹಚ್ಚಬಹುದು.

ಹೆಸರು ಇಲ್ಲದಿದ್ದರೆ ಮುಂದೇನು ಮಾಡಬೇಕು?

ಒಂದು ವೇಳೆ ನಿಮ್ಮ ಬಳಿ ವೋಟರ್ ಐಡಿ ಕಾರ್ಡ್ ಇದ್ದರೂ ಆನ್‌ಲೈನ್‌ನಲ್ಲಿ ನಿಮ್ಮ ಹೆಸರು ಕಾಣಿಸುತ್ತಿಲ್ಲ ಎಂದರೆ, ಪರಿಷ್ಕರಣೆ ವೇಳೆ ಯಾವುದೋ ಕಾರಣಕ್ಕೆ ನಿಮ್ಮ ಹೆಸರು ಡಿಲೀಟ್ ಆಗಿರುವ ಸಾಧ್ಯತೆಯಿರುತ್ತದೆ. ಆಗ ನೀವು ಗಾಬರಿಯಾಗುವ ಅಗತ್ಯವಿಲ್ಲ.ಅದೇ ವೆಬ್‌ಸೈಟ್‌ನಲ್ಲಿ ಅಥವಾ ಆಯಪ್‌ನಲ್ಲಿ ‘Form 6’ (ಫಾರ್ಮ್ 6) ಅನ್ನು ಭರ್ತಿ ಮಾಡುವ ಮೂಲಕ ನೀವು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಈಗಲೂ ಅರ್ಜಿ ಸಲ್ಲಿಸಬಹುದು. ವಿಳಾಸ ಬದಲಾವಣೆ ಅಥವಾ ವಿವರಗಳಲ್ಲಿ ತಿದ್ದುಪಡಿ ಇದ್ದರೆ ‘Form 8’ ಅನ್ನು ಬಳಸಬಹುದು. ಮತದಾನ ನಮ್ಮೆಲ್ಲರ ಸಂವಿಧಾನದತ್ತವಾದ ಬಹುದೊಡ್ಡ ಹಕ್ಕು. ಐದು ವರ್ಷಕ್ಕೊಮ್ಮೆ ಬರುವ ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಲು ಇಂದೇ ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿ, ನಿಮ್ಮ ಹಕ್ಕನ್ನು ಖಾತರಿ ಪಡಿಸಿಕೊಳ್ಳಿ.

Leave a Reply

Your email address will not be published. Required fields are marked *