ಶಾಂತಿಯಿಂದ ಬದುಕಲು ಗಾಂಧಿಯವರ ತತ್ವಗಳು ಇಂದಿಗೂ ಪ್ರಸ್ತುತ-ಮಲ್ಲಿಕಾ ಬಸವರಾಜು

ತುಮಕೂರು: ಮಹಾತ್ಮ ಗಾಂಧೀಯವರ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು ಶಾಂತಿಯಿಂದ ಬದುಕಲು ಅವರ ವಿಚಾರಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ತುಮಕೂರು ಜಿಲ್ಲೆಯ ಚಕೋರ ಸಂಚಾಲಕಿ ಹಾಗೂ ಲೇಖಕಿ ಮಲ್ಲಿಕಾ ಬಸವರಾಜು ತಿಳಿಸಿದರು.

ಕರ್ನಾಟಕ ಸಾಹಿತ್ಯ ಆಕಾಡೆಮಿ ಬೆಂಗಳೂರು ವತಿಯಿಂದ ತುಮಕೂರು ಹೊರವಲಯದಲ್ಲಿರುವ ಭೀಮಸಂದ್ರದ ಗ್ಲೋಬಲ್ ಶಾಹೀನ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಚಕೋರ ಸಾಹಿತ್ಯ ಉಪನ್ಯಾಸ ಮಾಲಿಕೆಯಲ್ಲಿ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಚಕೋರ ಉಪನ್ಯಾಸ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳುತ್ತಿದ್ದು, ಕನ್ನಡ ಭಾμÉ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಯುವಜನರಿಗೆ ತಿಳಿಸಿ ಓದುವ ಹವ್ಯಾಸ ಮೂಡಿಸಿ ಅರಿವು ತುಂಬಲು ಪ್ರಯತ್ನಿಸುತ್ತಿದೆ. ಗಾಂಧಿಯವರು ಸತ್ಯ, ಶಾಂತಿ, ಅಹಿಂಸೆ ಮತ್ತು ಸತ್ಯಾಗ್ರಹ ಬಳಸಿ ಬ್ರಿಟಿμï ಪ್ರಭುತ್ವವನ್ನು ಮಣಿಸಿದರು. ಹೀಗಾಗಿ ಶಾಂತಿಯಿಂದ ಬದುಕಲು ಅವರ ವಿಚಾರಗಳನ್ನು ಅರಿತು ಅಳವಡಿಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಕ.ಸಾ.ಅಕಾಡೆಮಿ ಸದಸ್ಯೆ ಸುಮಾ ಸತೀಶ್ ಮಾತನಾಡಿ, ಇಂದು ಮಹಾತ್ಮ ಗಾಂಧೀ ಅವರನ್ನು ತಪ್ಪಾಗಿ ಬಿಂಬಿಸಿ, ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ತಪ್ಪು ತಪ್ಪಾಗಿ ಗ್ರಹಿಸಲಾಗುತ್ತಿದೆ. ಇಂಥ ಉಪನ್ಯಾಸ ಗಳ ಮೂಲಕ ಮಕ್ಕಳು ಮಹಾತ್ಮ ಗಾಂಧೀಯವರನ್ನು ಸರಿಯಾಗಿ ಗ್ರಹಿಸುವಂತಾಗಲಿ ಎಂದು ತಿಳಿಸಿದರು.
ಹಿರಿಯ ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಹಿಂಸೆಯೆಂದರೆ ನೋಯಿಸುವುದು. ಬ್ರಿಟೀಷರು ಹಿಂಸೆಯಿಂದ ವರ್ತಿಸಿದರೂ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅಹಿಂಸೆಯಿಂದ ವರ್ತಿಸಿದರು.

ಶಾಂತಿಯಿಂದ ಸ್ವಾತಂತ್ರ್ಯ ಪಡೆದೆವು. ಗಾಂಧೀಜಿ ಜನ್ಮ ದಿನವನ್ನು ಅಹಿಂಸಾ ದಿನವನ್ನಾಗಿ ಜಗತ್ತಿನೆಲ್ಲೆಡೆ ಆಚರಿಸಲಾಗುತ್ತಿದೆ. ಸತ್ಯವನ್ನು ನುಡಿಯುವುದರಿಂದ ತೊಂದರೆಯಾಗದು. ಗಾಂಧೀಜಿ ಅಹಿಂಸಾ ಪರಮೋಧರ್ಮ ಎಂದರು.

ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಲು, ಸ್ವದೇಶಿಯಾಗಲು, ಎಲ್ಲರಲ್ಲೂ ಪ್ರೀತಿ, ಮೈತ್ರಿ ಬೆಳೆಸಿಕೊಳ್ಳಲು, ಏಳು ಪಾತಕಗಳನ್ನು ಮಾಡದಿರಲು ಕರೆ ನೀಡಿದರು. ಅಸಂಗ್ರಹ, ಅಸ್ವಾದ, ಬ್ರಹ್ಮಚರ್ಯ ಮತ್ತು ಸ್ಪರ್ಶ ಭಾವನೆ ಮೂಡಿಸಿಕೊಳ್ಳಲು, ಸ್ವಾವಲಂಬನೆಯಿಂದ ಸರಳವಾಗಿ ಬದುಕಲು ತಿಳಿಸಿದರು. ಗಾಂಧೀಜಿ ತತ್ವ ಅನುಸರಿಸಲಾಗದವರು ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ; ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಇದು ತಪ್ಪು. ಗಾಂಧಿಯವರನ್ನು ಕೊಂದ ಗೋಡ್ಸೆ ಸಂತತಿಗೆ ಕಡಿವಾಣ ಹಾಕಬೇಕು. ಗಾಂಧಿ ತತ್ವಗಳನ್ನು ಎಲ್ಲರೂ ಅನುಸರಿಸಬೇಕು. ಮಹಾತ್ಮ ಗಾಂದೀಜಿ ಇಂದಿಗೂ ಪ್ರಸ್ತುತ ಎಂದು ನುಡಿದರು.

ಗ್ಲೋಬಲ್ ಶಾಹೀನ್ ಕಾಲೇಜಿನ ಪ್ರಾಂಶುಪಾಲ ಆಯೇμÁ ಜುಬೇದಾ ಕೌಸರ್ ಅಧ್ಯಕ್ಷತೆ ವಹಿಸಿದ್ದರು. ಮರಿಯಂಬಿ ನಿರೂಪಿಸಿದರು. ಕ.ಲೇ.ಸಂ .ತುಮಕೂರು ಜಿಲ್ಲಾ ಶಾಖೆಯ ಉಪಾಧ್ಯಕ್ಷೆ ಸಿ.ಎಲ್.ಸುನಂದಮ್ಮ ಇದ್ದರು.

Leave a Reply

Your email address will not be published. Required fields are marked *