ವೈದ್ಯಕೀಯ ಡಾ||ಬಸವರಾಜು, ರಂಗಭೂಮಿ ಪುಟ್ಟಸ್ವಾಮಯ್ಯ, ಸಾಹಿತ್ಯ ಶಿವಣ್ಣ ತಿಮ್ಲಾಪುರ, ರಂಗಮ್ಮ ಹೊದೇಕಲ್ ಸೇರಿದಂತೆ 71 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ತುಮಕೂರು : ಜಿಲ್ಲಾಡಳಿತದ ವತಿಯಿಂದ ನವೆಂಬರ್ 1ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವೈದ್ಯಕೀಯ ಡಾ||ಬಸವರಾಜು, ರಂಗಭೂಮಿ ಪುಟ್ಟಸ್ವಾಮಯ್ಯ, ಸಾಹಿತ್ಯ ಶಿವಣ್ಣ ತಿಮ್ಲಾಪುರ, ರಂಗಮ್ಮ ಹೊದೇಕಲ್, ಸೇರಿದಂತೆ 71 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಜಿಲ್ಲಾಡಳಿತ ಸನ್ಮಾನಸಲಿದೆ.

ಸನ್ಮಾನಿತರು :-

ರಂಗಭೂಮಿ ಕ್ಷೇತ್ರದಿಂದ ತುಮಕೂರು ತಾಲ್ಲೂಕಿನ  ಕೆ. ರಂಗರಾಜು, ಹ್ಯಾರಿಡೇವಿಡ್, ಹೆತ್ತೇನಹಳ್ಳಿಯ ರಂಗಸ್ವಾಮಿ ಹೆಚ್.ಟಿ., ಬಿ.ಎ.ಗುಡಿಪಾಳ್ಯದ ಭೀಮಯ್ಯ(ಭೀಮರಾಜು) ಹಾಗೂ ಗೂಳಹರಿವೆಯ ಜಿ.ಟಿ.ಪೆರಮಯ್ಯ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಯಳ್ಳೇನಹಳ್ಳಿಯ ಆರ್. ಮೂರ್ತಿ, ಹುಳಿಯಾರಿನ ಗೌರಮ್ಮ, ಕೊರಟಗೆರೆ ತಾಲ್ಲೂಕು ಹುಲಿಕುಂಟೆಯ ಸಿ. ರಂಗಶಾಮಯ್ಯ, ಮಣುವಿನಕುರಿಕೆ ಎಂ.ಪಿ. ಪುಟ್ಟಶಾಮಯ್ಯ, ಇರಕಸಂದ್ರ ಕಾಲೋನಿಯ ಬಿ. ರುದ್ರೇಶ್, ಹಂಚಿಹಳ್ಳಿಯ ಹೆಚ್.ಎಸ್. ಮಾರುತಿ,  ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಡಾ: ಅಶ್ವತ್ಥನಾರಾಯಣ ಕೆ.ಪಿ., ಗುಬ್ಬಿ ತಾಲ್ಲೂಕು ಕೊಡಿಯಾಲದ ಎನ್.ದಲಿತ ರವಿಕುಮಾರ್. 

ಜಾನಪದ/ಯಕ್ಷಗಾನ ಕ್ಷೇತ್ರದಿಂದ ಕೊರಟಗೆರೆ ತಾಲ್ಲೂಕು ಬಿದಲೋಟಿಯ ಮರಿರಂಗಯ್ಯ, ಮಧುಗಿರಿ ತಾಲ್ಲೂಕು ಹನುಮಂತಪುರದ ಡಾ: ಹೆಚ್.ಡಿ. ನರಸೇಗೌಡ ಹಾಗೂ ಅರಳಾಪುರದ ಎಸ್. ಶಿವಣ್ಣ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೆ.ಜಿ.ಹಟ್ಟಿಯ ಎನ್. ಜಯಣ್ಣ(ಕೋಲಾಟ ಜಯಣ್ಣ), ಹೊಸಪಾಳ್ಯದ ಭಾಗವತ್ ಈ ಶಿವಣ್ಣ, ತುಮಕೂರಿನ ಸಿ.ಬಿ. ವಿಶ್ವನಾಥ ಚಿಕ್ಕಹಳ್ಳಿ, ಪಾವಗಡ ತಾಲ್ಲೂಕು ಸಿದ್ದಾಪುರದ ಎನ್. ಮರಿಸ್ವಾಮಿ, ಶಿರಾ ತಾಲ್ಲೂಕು ಚಿಕ್ಕನಹಳ್ಳಿಯ ಸಿ.ವಿ. ವಿನಯ್ ಕುಮಾರ್. 

ಸಾಹಿತ್ಯ ಕ್ಷೇತ್ರದಿಂದ ತುಮಕೂರಿನ ಕುವೆಂಪು ನಗರದ ಕೆ.ಹೆಚ್. ವೆಂಕಟೇಶ, ಹೊದೇಕಲ್‍ನ ರಂಗಮ್ಮ ಹೊದೇಕಲ್, ಮಧುಗಿರಿ ತಿಮ್ಲಾಪುರದ ಡಾ: ಶಿವಣ್ಣ ತಿಮ್ಲಾಪುರ,  ಕೊರಟಗೆರೆ ತಾಲ್ಲೂಕು ಎಲೆರಾಂಪುರದ ರುದ್ರಮೂರ್ತಿ ಎಲೆರಾಂಪುರ, ತಿಪಟೂರು ತಾಲ್ಲೂಕು ಬಳ್ಳೇಕಟ್ಟೆಯ ಡಾ: ಪಿ. ಶಂಕರಪ್ಪ ಬಳ್ಳೇಕಟ್ಟೆ, ಪಾವಗಡ ತಾಲ್ಲೂಕು ವೈ.ಎನ್. ಹೊಸಕೋಟೆಯ ಹೊ.ಮ.ನಾಗರಾಜು.

ಸಮಾಜಸೇವೆ ಕ್ಷೇತ್ರದಿಂದ ಕುಣಿಗಲ್ ತಾಲ್ಲೂಕು ನಾರಾಯಣ ಕೆ.ವಿ., ಗುಬ್ಬಿ ತಾಲ್ಲೂಕು ಬೆಣಚಿಗೆರೆಯ ಸುಬೇದಾರ್ ರಾಜಶೇಖರಯ್ಯ, ತುಮಕೂರು ತಾಲ್ಲೂಕು ದೇವರಾಯಪಟ್ಟಣದ ಯಶೋಧ ಆರ್.ಪಿ.(ದೇವಯಾನಿ), ಕುಪ್ಪೂರಿನ ಶ್ರೀಧರ್ ಕುಪ್ಪೂರು, ಬಂಡೇಪಾಳ್ಯದ ಶಿವಕುಮಾರ್ ಕೆ.ಎಂ., ನಾಗವೇಣಿ ಜಿ., ಪಿ.ಗೊಲ್ಲಹಳ್ಳಿಯ ರಾಮತೀರ್ಥನ್ ವಿ., ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಿ.ಎಸ್.ಲಿಂಗದೇವರು, ಮಧುಗಿರಿ ತಾಲ್ಲೂಕು ವೆಂಕಟರಮಣಪ್ಪ.

ಸಂಗೀತ/ನೃತ್ಯ ಕ್ಷೇತ್ರದಿಂದ ತುಮಕೂರು ತಾಲ್ಲೂಕು ಲಕ್ಷ್ಮೀ ಜೈಪ್ರಕಾಶ್, ಬತ್ಸಂದ್ರದ ಬಿ.ವಿ. ನಾಗಭೂಷಣ, ದೊಡ್ಡೇಗೌಡನಪಾಳ್ಯದ ಟಿ. ನಿರಂಜನ್ ಮೂರ್ತಿ, ಬನಶಂಕರಿ ನಗರದ ಜಯರಾಮಯ್ಯ, ಚಿಕ್ಕನಾಯಕನಹಳ್ಳಿ ತಾಲ್ಲೂಕು ತೀರ್ಥಪುರದ ಟಿ.ಎನ್. ರೇಣುಕಯ್ಯ. 

ಶಿಕ್ಷಣ ಕ್ಷೇತ್ರದಿಂದ ತುಮಕೂರು ತಾಲ್ಲೂಕು ಗೋಕುಲ ಬಡಾವಣೆಯ ಡಾ: ಹಾಲನೂರು ಲೇಪಾಕ್ಷ, ಶಿರಾಗೇಟ್‍ನ ರಮೇಶ್ ಎಸ್.ವಿ., ಗುಬ್ಬಿ ತಾಲ್ಲೂಕು ಬಾಗೂರಿನ ಜೀವಂಧರ ಕುಮಾರ್ ಬಿ. 

ಚಿತ್ರಕಲೆ/ಶಿಲ್ಪಕಲೆ/ಕರಕುಶಲ ಕ್ಷೇತ್ರದಿಂದ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗದ ಆನಂದ ಎಸ್.ವಿ., ತುಮಕೂರು ತಾಲ್ಲೂಕು ಬೊಮ್ಮನಹಳ್ಳಿಯ ದೇವರಾಜು ಸಿ.ಎಸ್. ಮಧುಗಿರಿ ತಾಲ್ಲೂಕಿನ ಎಂ.ಎನ್. ಅರುಣ್ ಕುಮಾರ್.

ಪತ್ರಿಕೋದ್ಯಮ ಕ್ಷೇತ್ರದಿಂದ ಮಧುಗಿರಿ ತಾಲ್ಲೂಕಿನ ಜಿ. ನಾರಾಯಣರಾಜು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಿ.ಬಿ. ಲೋಕೇಶ್, ತುಮಕೂರು ತಾಲ್ಲೂಕು ಹನುಮಂತಪುರದ ಯೋಗೀಶ್ ಟಿ., ದಾದಾಪೀರ್ ಎನ್., ದೇವರಾಯಪಟ್ಟಣದ ಕುಮಾರಸ್ವಾಮಿ ಹೆಚ್.ಬಿ., ಎಸ್.ಎಸ್.ಪುರಂನ ಟಿ.ಎಲ್. ನರಸಿಂಹಯ್ಯ, ಕುಣಿಗಲ್ ತಾಲ್ಲೂಕಿನ ಸಿದ್ದಲಿಂಗಸ್ವಾಮಿ.

ಕ್ರೀಡಾ ಕ್ಷೇತ್ರದಿಂದ ತುಮಕೂರಿನ ವೀರಸಾಗರದ ಶಶಿಕುಮಾರ ಕೆ. ಹಾಗೂ ಶ್ರೀನಿವಾಸ ಬಿ. ವೈದ್ಯಕೀಯ/ಪಾರಂಪರಿಕ ವೈದ್ಯ ಕ್ಷೇತ್ರದಿಂದ ಶಿರಾ ತಾಲ್ಲೂಕು ಮಾದೇನಹಳ್ಳಿ ಚರಕ ಆಸ್ಪತ್ರೆಯ ಡಾ: ಬಸವರಾಜು. 

ಕನ್ನಡಪರ ಸಂಘಟನಾ ಕ್ಷೇತ್ರದಿಂದ ಕೊರಟಗೆರೆಯ ನಟರಾಜ್ ಕೆ.ಎನ್., ಶಿರಾದ ಕೊಟ್ಟರಂಗಯ್ಯ, ತುಮಕೂರು ಕುವೆಂಪು ನಗರದ ಡಾ: ಎಂ.ಸುದೀಪ್ ಕುಮಾರ್, ದೇವರಾಯಪಟ್ಟಣದ ಚಂದನ್ ಪಟೇಲ್ ಡಿ.ಎಸ್., ಶಾಂತಿನಗರದ ಸತೀಶ್ ಜಿ.ಡಿ., ಉಪ್ಪಾರಹಳ್ಳಿಯ ಆಯಿಷಾ ಹಾಗೂ ಬಿ.ಎಂ. ಪ್ರವೀಣ್. 

ಗಡಿನಾಡು ಸೇವೆ ಕ್ಷೇತ್ರದಿಂದ ಮಧುಗಿರಿ ತಾಲ್ಲೂಕು ಸಿಡದರಗಲ್ಲಿನ ಶ್ರೀನಿವಾಸ್, ಪಾವಗಡ ತಾಲ್ಲೂಕು ಪಿ. ರೊಪ್ಪದ ನಾಗೇಂದ್ರಪ್ಪ ರೊಪ್ಪ, ಶಿರಾ ತಾಲ್ಲೂಕು ದೇವರಹಳ್ಳಿಯ ನಾಗರಾಜು ಎಸ್.ಕೆ.(ಸಕ್ಕರ ನಾಗರಾಜು). 

ಯೋಗ ಕ್ಷೇತ್ರದಿಂದ ಮಧುಗಿರಿ ಬಿದರಕೆರೆಯ ಕೃಷ್ಣಮೂರ್ತಿ ಬಿ.ಎಲ್., ಸಂಕೀರ್ಣ ಕ್ಷೇತ್ರದಿಂದ ತುಮಕೂರು ಎಂ.ಜಿ.ರಸ್ತೆಯ ಜೆ. ಮಹೇಂದ್ರ ಕುಮಾರ್, ಸಂಶೋಧನೆ ಕ್ಷೇತ್ರದಿಂದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ: ಹೆಚ್. ನಾಗಭೂಷಣ್, ಪರಿಸರ/ಸಾಮಾಜಿಕ ಸೇವೆ ಕ್ಷೇತ್ರದಿಂದ ತಿಪಟೂರು ತಾಲ್ಲೂಕು ಮಡೆನೂರಿನ ಸಂತೋಷ್ ಕುಮಾರ್ ಎಂ.(ಸಂತೋಷ್ ಮಡೆನೂರು) ಅವರು ರಾಜ್ಯೋತ್ಸವ ಗೌರವ ಸನ್ಮಾನಕ್ಕೆ ಆಯ್ಕೆಯಾಗಿರುತ್ತಾರೆ. 

ಆಯ್ಕೆಯಾಗಿರುವ ಸಾಧಕರಿಗೆ ನವೆಂಬರ್ 1ರಂದು ಬೆಳಗ್ಗೆ 9 ಗಂಟೆಗೆ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ ಕು.ಮಿರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *