ತಿಪಟೂರು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಸಿ.ಬಿ.ಶಶಿಧರ್ (ಟೂಡಾ) ಅವರು ಅಕ್ಟೋಬರ್ 20ರಿಂದ ತಿಪಟೂರು ವಿಧಾನ ಸಭಾ ಕ್ಷೇತ್ರದ ಸಂಚಾರವನ್ನು ಆರಂಭಿಸಲಿದ್ದಾರೆ.
ಅಕ್ಟೋಬರ್ 20ರ ಬೆಳಿಗ್ಗೆ 10.30ಕ್ಕೆ ತಿಪಟೂರಿನ ಕಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಕ್ಷೇತ್ರ ಸಂಚಾರಕ್ಕೆ ಚಾಲನೆ ನೀಡುವರು. ಬಳಿಕ ಸುದ್ದಿಗೋಷ್ಢಿಯಲ್ಲಿ ಮಾತನಾಡಿ, ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಸಿ.ಬಿ.ಶಶಿಧರ್ ಸಂಚಾರದಲ್ಲಿ ಪಾಲ್ಗೊಳ್ಳುವರು