
ತುಮಕೂರು : ರಂಗಭೂಮಿ ಕಲಾವಿದರಾದ ಇರಕಸಂದ್ರ ಜಗನ್ನಾಥ್ ಅವರು ಇಂದು ಕಳ್ಳಂಬೆಳ್ಳ ಸಮೀಪ ನಡೆದ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.
ಇಂದು ಮಧ್ಯಾಹ್ನ 1-30ರ ಸಮಯದಲ್ಲಿ ಶಿರಾಕ್ಕೆ ಸಮಾರಂಭವೊಂದಕ್ಕೆ ತಮ್ಮ ಕಾರಿನಲ್ಲಿ ರಾಜಣ್ಣ ಎಂಬುವರ ಜೊತೆಯಲ್ಲಿ ಹೊರಟಿದ್ದಾರೆ, ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಕಳ್ಳಂಬೆಳ ಟೋಲ್ಗೇಟ್ ಬಳಿ ಕಾರನ್ನು ನಿಲ್ಲಿಸಿ ನೀರನ್ನು ಕುಡಿಯುವ ಸಲುವಾಗಿ ಕಾರಿನಿಂದ ಇಳಿದ ಕೂಡಲೇ ವೇಗವಾಗಿ ಬಂದ ಲಾರಿಯೊಂದು ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಈ ಸಂಬಂಧ ಕಳ್ಳಂಬೆಳ್ಳ ಪೊಲೀಸರು ಕೇಸು ದಾಖಲಿಸಿ, ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಪ್ರಾರ್ಥಿವ ಶರೀರವನ್ನು ನೀಡಲಾಯಿತು.
ಸಂಜೆ ತುಮಕೂರಿನ ಗುಬ್ಬಿವೀರಣ್ಣ ರಂಗಮಂದಿರದ ಆವರಣದಲ್ಲಿ ಜಗನ್ನಾಥ್ ಅವರ ಪ್ರಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.
ಇರಕಸಂದ್ರ ಜಗನ್ನಾಥ್ ಅವರು ಪೌರಾಣಿಕ ನಾಟಕಗಳಲ್ಲಿ ಹಲವಾರು ಪಾತ್ರಗಳನ್ನು ಮನೋಜ್ಞವಾಗಿ ಅಭಿನಯಿಸುತ್ತಿದ್ದರು, ಇವರು ಹಲವಾರುÀ್ರಂಗಭೂಮಿ ಕಲಾವಿದರನ್ನು ಬೆಳಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಕಳೆದ ವರ್ಷ ನಡೆದ ಮೈಸೂರು ದಸಾರದಲ್ಲಿ ತಮ್ಮ ತಂಡವನ್ನು ಕರೆದುಕೊಂಡು ಹೋಗಿ ದಸರಾ ಉತ್ಸವದಲ್ಲಿ ನಾಟಕ ಪ್ರದರ್ಶನ ನೀಡಿದ್ದರು.
ಜಗನ್ನಾಥರವರ ಸಾವು ರಂಗಭೂಮಿ ಕಲೆಗೆ ತುಂಬಲಾರದ ನಷ್ಟವುಂಟಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು, ರಂಗಭೂಮಿ ಕಲಾವಿದರು, ಗೆಳೆಯರು ದೇವರಲ್ಲಿ ಪ್ರಾರ್ಥಿಸಿದ್ದು, ಅವರ ಕುಟುಂಬ ವರ್ಗಕ್ಕೆ ದುಃಖಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.