
ತುಮಕೂರು.: ಮಣಿಪುರ ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಜನರ ಮೇಲಾಗುತ್ತಿರುವ ಹಿಂಸಾಚಾರ ಮತ್ತು ಅಲ್ಲಿನ ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರ,ಬೆತ್ತಲೆ ಮೆರವಣಿಗೆಯನ್ನು ಖಂಡಿಸಿ,ಇಂದು ತುಮಕೂರು ಜಿಲ್ಲಾ ಕ್ರೈಸ್ತ ವಿಭಾಗದ ಮುಖ್ಯಸ್ಥರಾದ ರೆವೆರೆಂಡ್ ಫಾದರ್ ಮನೋಜ್ ಕುಮಾರ್ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.
ನಗರದ ಚರ್ಚ್ ಸರ್ಕಲ್ ಬಳಿ ಇರುವ ವೆಸ್ಲಿ ದೇವಾಲುದ ಬಳಿ ಸಮಾವೇಷಗೊಂಡ ಕ್ರೈಸ್ತ ಸಮುದಾಯದ ಸಾವಿರಾರು ಜನರು ಶಾಂತಿಯ ಸಂಕೇತವಾದ ಪಾರಿವಾಳವನ್ನು ಹಾರಿ ಬಿಡುವ ಮೂಲಕ ಮೌನ ಮೆರವಣಿಗೆ ಆರಂಭಿಸಿದರು.ನಂತರ ಅಶೋಕ ರಸ್ತೆಯ ಮೂಲಕ ಟೌನ್ ಹಾಲ್ ತಲುಪಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಖಂಡನೆಯನ್ನು ಖಂಡಿಸಿದರು. ಅಲ್ಲಿಂದ ಬಿ.ಹೆಚ್ ರಸ್ತೆ ಮೂಲಕ ಸಿಎಸ್‍ಐ ಚÀರ್ಚ್ ವರಗೆ ಮೌನ ಮೆರವಣಿಗೆ ನಡೆಸಿದರು.
ಚರ್ಚ ಸರ್ಕಲ್ ನ ವೆಸ್ಲಿ ದೇವಾಲಯದ ಬಳಿ ಸಮಾವೇಷಗೊಂಡ ಕ್ರೈಸ್ತ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಜಿಲ್ಲಾ ಕ್ರೈಸ್ತ ವಿಭಾಗದ ಮುಖ್ಯಸ್ಥ ರೆವರೆಂಡ್ ಫಾದರ್ ಮನೋಜ್ ಕುಮಾರ್ ಅವರು,ಭಾರತದ ಸಣ್ಣ ರಾಜ್ಯವಾದ ಮಣಿಪುರ ಬಾಂಗ್ಲಾ ಮತ್ತು ಮಯನ್ಮಾರ್ ದೇಶಗಳ ಗಡಿಯಲ್ಲಿದೆ.ಸುಮಾರು 3.3 ಮಿಲಿಯನ್ ಜನರು ವಾಸಿಸುತ್ತಿರುವ ಈ ರಾಜ್ಯದಲ್ಲಿ ಅರ್ಥಕ್ಕಿಂತ ಹೆಚ್ಚು ಜನ ಮೈಟೆಯಿ ಸಮುದಾಯದಕ್ಕೆ ಸೇರಿದ್ದು,ನಾಗಾ ಮತ್ತು ಕುಕ್ಕಿ ಬುಡಕಟ್ಟು ಅಲ್ಪಸಂಖ್ಯಾತ ಜನಾಂಗವಾಗಿದೆ.
ಇತ್ತೀಚಗೆ ಮಣಿಪುರದಲ್ಲಿ ಆಘಾತಕಾರಿ ಘಟನೆಗಳು ನಡೆಯುತ್ತಿದ್ದು,ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಮೈಟೆಯಿ ಜನಾಂಗಕ್ಕೆ ಸೇರಿದ ಇಬ್ಬ್ಬರು ಪುರುಷರು, ಕುಕ್ಕಿ ಜನಾಂಗಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವುದು ಎಂತಹವರ ಹೃದಯ ಹಿಂಡುವ ಅಮಾನವೀಯ ಕೃತ್ಯವಾಗಿದೆ.ಇದರ ವಿಡಿಯೋ ದೇಶದಾದ್ಯಂತ ಹರಿದಾಡುತ್ತಿದೆ.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವನ್ನು ಸಂಘರ್ಷದ ಹಿಂಸಾಚಾರದ ಸಾಧನಗಳಾಗಿ ಬಳಸಲಾಗುತ್ತಿದೆ ಎಂಬುದಕ್ಕೆ ವೀಡಿಯೊ ಇತ್ತೀಚಿನ ಉದಾಹರಣೆಯಾಗಿದೆ ಎಂಬುದು ವರದಿಯಾಗಿದೆ ಅಂತೆಯೇ ಸೇಡಿನ ದಾಳಿಯಾಗಿಯೇ ಈ ಘಟನೆ ಕಂಡಬಂದಿದೆ ಎಂಬುದು ತಿಳಿದುಬಂದಿದೆ.
ತುಮಕೂರು ಕ್ಷೇತ್ರದ ಎಲ್ಲಾ ಸಿಎಸ್‍ಐ ಸಭೆಗಳ ಪರವಾಗಿ ಇಂದು ನಾವು ಮೌನ ಮೆರವಣಿಗೆ ಮಾಡುವ ಮೂಲಕ ಘಟನೆಯನ್ನು ಖಂಡಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರುತಿದ್ದೇವೆ ಎಂದು ರೆವರೆಂಡ್ ಫಾದರ್ ಮನೋಜ್ ಕುಮಾರ್ ತಿಳಿಸಿದರು.
ಪ್ರತಿಭಟನೆಯಲ್ಲಿ ರೆವರೆಂಡ್ ಫಾದರ್‍ಗಳಾದ ಮಿಥುನ್‍ಕುಮಾರ್,ಮಾರ್ಗನ್ ಸಂದೇಶ್, ಸ್ಯಾಮ್ಸನ್, ಸಂಜಯ್, ವಿಕ್ಟರ್ ಹೆಬಿಕ್, ಸುಧೀರ್, ಸುನಿಲ್,ಶ್ರೇತ,ಸ್ಯಾಮುವೆಲ್ ಪ್ರದೀಪ್ ಕುಮಾರ್, ಸಿಸ್ಟರ್ ಡಯಾನ, ಜಪಮಾಲ, ಹೆಡ್‍ವರ್ಡ್, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಎಸ್.ಡಿ.ಪ್ರಸಾದ್, ಎರಿಯ ಖಜಾಂಚಿ ಸತೀಶ್,ಮೊರಸ್, ಸಂಜೀವಕುಮಾರ್, ಫಾಸ್ಟರ್ ದೇವರಾಜು ಸೇರಿದಂತೆ ಸಾವಿರಾರು ಸಂಖ್ಯೆಯ ಕ್ರೈಸ್ತರು ಪಾಲ್ಗೊಂಡಿದ್ದರು.