ನಗೆಮಲ್ಲಿಗೆ ಬಳಗದಿಂದ ಏ.1ರಂದು ‘ಮೂರ್ಖರ ದಿನಾಚರಣೆ’

ತುಮಕೂರು : ತುಮಕೂರು ನಗೆಮಲ್ಲಿಗೆ ಬಳಗ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರುಗಳ ಸಹಯೋಗದಲ್ಲಿ ಏಪ್ರಿಲ್ 1ರ ಶನಿವಾರ ಸಂಜೆ 5ಕ್ಕೆ ಅಮಾನಿಕೆರೆ ಬಳಿಯ ಕನ್ನಡ ಭವನದಲ್ಲಿ ‘ಮೂರ್ಖರ ದಿನಾಚರಣೆ’ ಯನ್ನು ಹಮ್ಮಿಕೊಳ್ಳಲಾಗಿದೆ.

ಉದ್ಘಾಟನೆಯನ್ನು ಹಾಸ್ಯ ಲೇಖಕರಾದ ಎಂ.ಎಸ್.ನರಸಿಂಹಮೂರ್ತಿ ಅವರು ಉದ್ಘಾಟಿಸಿ ಹಾಸ್ಯೋಪನ್ಯಾಸ ನೀಡಲಿದ್ದಾರೆ, ಅಧ್ಯಕ್ಷತೆಯನ್ನು ನಗೆ ಮಲ್ಲಿಗೆ ಬಳಗದ ಡಾ.ಆರ್.ಎಲ್.ರಮೇಶ್‍ಬಾಬು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪ ಭಾಗವಹಿಸಲಿದ್ದು, ಅಬ್ಬಿನ ಹೊಳೆ ಸುರೇಶ್ ಅವರ ಲಲಿತ ಪ್ರಬಂಧಗಳ ‘ಉಚಿತಾಯಣ’ವನ್ನು ವಿದ್ವಾಂಸರು ಹಾಗೂ ವಿಮರ್ಶಕರಾದ ಡಾ.ಎಸ್.ಪಿ.ಪದ್ಮಪ್ರಸಾದ್ ಲೋಕರ್ಪಣೆ ಮಾಡಿದರೆ, ತುರುವೇಕೆರೆ ಪ್ರಸಾದ್ ಅವರ ‘ಒಳಶುಂಠಿ’ ಹಾಸ್ಯ ಸಂಕಲನವನ್ನು ವಿದ್ಯಾವಾಚಸ್ಪತಿ, ಸಾಹಿತಿ ಡಾ.ಕವಿತಾಕೃಷ್ಣ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ನಿರೂಪಣೆಯನ್ನು ರಾಧಕೃಷ್ಣ ಜಿ.ಎನ್. ಮಾಡಲಿದ್ದು, ನಿರ್ವಹಣೆಯನ್ನು ಹಾಸ್ಯ ಬರಹಗಾರರಾದ ಮಣ್ಣೆರಾಜು ಮಾಡಲಿದ್ದಾರೆ.

ಹಾಸ್ಯರಂಜನೆ ಕಾರ್ಯಕ್ರಮವನ್ನು ಜಿ.ಕೆ.ಕುಲಕರ್ಣಿ, ಎಂ.ಜಿ.ಸಿದ್ದರಾಮಯ್ಯ, ಮಿಮಿಕ್ರಿ ಈಶ್ವರಯ್ಯ, ಓ.ಕೆ.ವೀಣಾ, ನಿಟ್ಟೂರು ನರಸಿಂಹರಾಜು, ಸುಮ ಪ್ರಸನ್ನ ಅವರುಗಳು ನಡೆಸಿ ಕೊಡಲಿದ್ದಾರೆ.
ಇದೇ ಸಂದರ್ಭದಲ್ಲಿ ಸಂಕೇತ್ ಗುರುದತ್ತ ಅವರ ಕಾರ್ಟೂನ್ ಸ್ಪ್ರಿಪ್‍ಗಳ ಪ್ರದರ್ಶನ ಏರ್ಪಡಿಸಲಾಗಿದೆ.

Leave a Reply

Your email address will not be published. Required fields are marked *