ತುಮಕೂರು : ತುಮಕೂರು ತಿರಂಗ ಯಾತ್ರಾ ಸಮಿತಿಯಿಂದ ಆಗಸ್ಟ್ 15 ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ತಿರಂಗ ಯಾತ್ರಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಚಾಲಕರು ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ರವೀಶ್ ಹೆಬ್ಬಾಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನಲೆಯಲ್ಲಿ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು, ಈ ಹಿನ್ನಲೆಯಲ್ಲಿ ತುಮಕೂರು ನಗರದಲ್ಲಿ ತಿರಂಗ ಯಾತ್ರಾ ಹಮ್ಮಿಕೊಂಡಿದ್ದು, ಎಸ್.ಐ.ಟಿ. ಕಾಲೇಜು ಮುಂಭಾಗದಲ್ಲಿ ತಿರಂಗ ಯಾತ್ರಾ ಉದ್ಘಾಟನೆಗೊಳ್ಳಲಿದ್ದು, ಮೆರವಣಿಗೆಯ ಮೂಲಕ ಜೂನಿಯರ್ ಕಾಲೇಜು ಮೈದಾನವನ್ನು ತಲುಪಲಿದೆ ಎಂದು ತಿಳಿಸಿದರು.
ಉದ್ಘಾಟನಾ ಸಮಯದಲ್ಲಿ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮಿಗಳು, ಹಿರೇಮಠದ ಡಾ.ಶ್ರೀ.ಶಿವಾನಂದಶಿವಾಚಾರ್ಯಸ್ವಾಮಿಗಳು ಮತ್ತು ಸರಪಳಿ ಮಠದ ಶ್ರೀಗಳು ಭಾಗವಹಿಸಿಲಿದ್ದಾರೆ, ತಿರಂಗ ಯಾತ್ರಾವು, ಬಿ.ಹೆಚ್.ರಸ್ತೆ ಮೂಲಕ ರಾಧಾಕೃಷ್ಣ ರಸ್ತೆಯಲ್ಲಿ ಹಾದು ಜೂನಿಯರ್ ಕಾಲೇಜು ಮೈದಾನದ ತಲುಪಲಿದೆ ಎಂದ ಅವರು, ಈ ಯಾತ್ರೆಯಲ್ಲಿ ನಾಡಿನ ಪ್ರಸಿದ್ದ ಕಲಾ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಈ ತಿರಂಗ ಯಾತ್ರಾ ಮೆರವಣಿಗೆಯಲ್ಲಿ ಸುಮಾರು ನಾಲ್ಕರಿಂದ ಐದು ಸಾವಿರ ಜನರು ವಿವಿಧ ಸಂಘ-ಸಂಸ್ಥೆಗಳಿಂದ ಭಾಗವಹಿಸಲಿದ್ದಾರೆ ಎಂದರು.