
ತುಮಕೂರು:ರಾಷ್ಟ್ರದ ರಕ್ಷಣೆ ಮತ್ತು ಅಭಿವೃದ್ದಿಗೆ ಪೂರಕವಾಗಿ ಕಳೆದ 9 ವರ್ಷಗಳಿಂದ ದುಡಿಯುತ್ತಿರುವ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಹಾಗೂ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಎಸ್.ಪಿ.ಚಿದಾನಂದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ನರೇಂದ್ರಮೋದಿ ಅವರು ಪ್ರಧಾನಿಯಾದ ತಕ್ಷಣವೇ ಭಾರತೀಯ ಸೇನೆಗೆ ಅತ್ಯಾಧುನಿಕ ಶಸ್ತಾಸ್ತ್ರ ನೀಡಿ,ಭಾರತದ ರಕ್ಷಣೆಗೆ ಕಟಿಬದ್ದರಾದರು.ಇದರ ಪರಿಣಾಮ ದೇಶದ ಸೇನಾ ಬಲ ಹೆಚ್ಚಿಸಿಕೊಂಡು ಮುನ್ನೆಡೆಯುತ್ತಿದೆ.ಭಾರತ ಮತ್ತಷ್ಟು ಬಲಿಷ್ಠವಾಗಬೇಕೆಂದರೆ ಜನರು ಬಿಜೆಪಿಗೆ ಮತ ನೀಡಬೇಕೆಂದರು.
ನರೇಂದ್ರಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಒಳಗಿನ ಸಾಗರ ಸಾರಿಗೆಯನ್ನು ಸಾಗರ ಮಾಲ ಯೋಜನೆಯ ಮೂಲಕ ಜಾರಿಗೆ ಬಂದ ಪರಿಣಾಮ ವ್ಯಾಪಾರ,ವಹಿವಾಟು ಅಭಿವೃದ್ದಿಯಾಗಲು ಸಹಕಾರಿಯಾಯಿತು.ಇದರ ಪರಿಣಾಮ ಲಕ್ಷಾಂತರ ಜನರು ಉದ್ಯೋಗ ಪಡೆಯುವಂತಾಯಿತ್ತು.ಇದು ನರೇಂದ್ರಮೋದಿ ಅವರ ದೂರದೃಷ್ಟಿಯ ಫಲ.ತಾಯಂದಿರಿಗಾಗಿ ಉಜ್ವಲ ಯೋಜನೆ ಜಾರಿಗೆ ತಂದು ಲಕ್ಷಾಂತರ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ.ಹಾಗಾಗಿ ತುಮಕೂರು ನಗರದಲ್ಲಿ ಜೋತಿಗಣೇಶ್ ಅವರಿಗೆ,ಹಾಗೆಯೇ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ದೇಶವನ್ನು ಬಲಪಡಿಸಬೇಕೆಂದು ಎಸ್.ಪಿ.ಚಿದಾನಂದ ಮನವಿ ಮಾಡಿದರು.
ಉಡಾನ್ ಹೆಸರಿನಲ್ಲಿ ದೇಶದಲ್ಲಿ ಏರ್‍ಪೋರ್ಟ್‍ಗಳ ಸಂಖ್ಯೆ ಹೆಚ್ಚಾಗಿದ್ದು,ಕರ್ನಾಟಕದ ಶಿವಮೊಗ್ಗ,ಬಿಜಾಪುರ ಹಾಗೂ ಇನ್ನಿತರ ಸ್ಥಳದಲ್ಲಿ ಏರ್‍ಪೋರ್ಟ್ ನಿರ್ಮಾಣವಾಗಿದೆ.ಇದು ಮೋದಿಯವರ ವೈಜ್ಞಾನಿಕ ಆಲೋಚನೆಯ ಭಾಗವಾಗಿದೆ.ದೊಡ್ಡ ನಗರಗಳಲ್ಲದೆ ಎರಡನೇ ಹಂತದ ನಗರಗಳೂ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿದ ನಗರವಾಗಿಸಲು ಸ್ಮಾರ್ಟ್‍ಸಿಟಿ ಯೋಜನೆಯನ್ನು ಜಾರಿಗೆ ತಂದಿದ್ದು,ತುಮಕೂರು ನಗರದಲ್ಲಿ ಸುಮಾರು 1200 ಕೋಟಿ ರೂಗಳ ಅಭಿವೃದ್ದಿ ಕಾಮಗಾರಿ ನಡೆದಿದ್ದು,ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆಗಳು,ಕ್ರೀಡಾಂಗಣ ಸೇರಿದಂತೆ ಹಲವಾರು ಕಾಮಗಾರಿಗಳು ನಡೆದಿದೆ.ರಾಜ್ಯದಲ್ಲಿ 7 ಸ್ಮಾರ್ಟ್‍ಸಿಟಿಗಳಲ್ಲಿ ತುಮಕೂರು ಮೊದಲನೆಯ ಸ್ಥಾನದಲ್ಲಿದೆ.ಶಾಸಕರಾದ ಜೋತಿಗಣೇಶ್ ಉತ್ತಮವಾಗಿ ಕೆಲಸ ಮಾಡಿದ್ದಾರೆ.ಹಾಗಾಗಿ ನಗರದ ಮತದಾರರು ಜೋತಿಗಣೇಶ್ ಅವರನ್ನು ಬೆಂಬಲಿಸುವಂತೆ ಎಸ್.ಪಿ.ಚಿದಾನಂದ ಕೋರಿದರು.
ಯುವಜನತೆಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ದೇಶದಲ್ಲಿ 90 ಸಾವಿರ ಸ್ಟಾರ್ಟ್ ಅಫ್ ಗಳನ್ನು ಸ್ಥಾಪಿಸಿದ್ದು,ಅವುಗಳಲ್ಲಿ 15 ಸಾವಿರ ಕರ್ನಾಟಕದಲ್ಲಿಯೇ ಇವೆ.ಇದರಿಂದ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ.ಅಲ್ಲದೆ ಯುವಜನರನ್ನು ದೇಶದ ಅಭಿವೃದ್ದಿಯಲ್ಲಿ ನೇರವಾಗಿ ತೊಡಗಿಸಿಕೊಂಡಿದಂತಾಗಿದೆ.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ವಿಷ್ಣುವರ್ಧನ,ಆಶ್ರಯ ಸಮಿತಿ ಸದಸ್ಯ ಉಪೇಂದ್ರ, ಧರ್ಮಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.