ಚುನಾವಣಾ ರಾಜಕೀಯದಲ್ಲಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು:ನಾನು ಇಂದು ಸಹಕಾರಿ ಸಚಿವನಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದರೆ ಅದಕ್ಕೆ ಮಧುಗಿರಿ ಕ್ಷೇತ್ರದ ಜನತೆ ಹಾಗೂ ನಿಮ್ಮಂತಹ ಗುರು, ಹಿರಿಯರೇ ಕಾರಣ.ಮಧುಗಿರಿ ಕ್ಷೇತ್ರದ ಜನತೆಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಕರ್ನಾಟಕ ಸರಕಾರದ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿ, ಮೂದೆಯೂ ಚುನಾವಣೆ ರಾಜಕೀಯದಲ್ಲಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದರು.

ಅವರ ಮನೆಯಲ್ಲಿ ಇಂದು ಹರಗುರು ಚರಮೂರ್ತಿಗಳಿಗೆ ಹಮ್ಮಿಕೊಂಡಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧಡೆಗಳಿಂದ ಬಂದಿದ್ದ ಮಠಾಧೀಶರ ಪಾದಪೂಜೆ ನೆರವೇರಿಸಿ,ಅವರ ಆಶೀರ್ವಾದ ಪಡೆದ ನಂತರ ಮಾತನಾಡುತಿದ್ದ ಅವರು,ಇಡೀ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಜನರು ನನ್ನನ್ನು ಗೆಲ್ಲಿಸಿದ್ದಾರೆ ಎಂದರೆ ಇದಕ್ಕೆ ಒಂದು ಜಾತಿಯ ಜನ ಕಾರಣರಲ್ಲ. ಮಧುಗಿರಿ ಕ್ಷೇತ್ರದ ಎಲ್ಲಾ ವರ್ಗದ ಜನರು ಕಾರಣ. ಅಲ್ಲದೆ ಎಲ್ಲಾ ವರ್ಗದ ಬಡವರು ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿದ್ದಾರೆ. ಹಾಗಾಗಿ ನಾನು ಇಂದು ಮಂತ್ರಿಯಾಗಿ ನಿಮ್ಮೆಲ್ಲರ ಋಣ ತೀರಿಸಲು ಸಾಧ್ಯವಾಯಿತು ಎಂದರು.

ಮನುಷ್ಯನ ಜೀವನದಲ್ಲಿ ಹುಟ್ಟು ಆಕಸ್ಮಿಕ, ಸಾವು ಖಚಿತ, ಹುಟ್ಟು ಸಾವಿನ ನಡುವೆ ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯ.ನಾವು ಮಾಡುವ ಪುಣ್ಯದ ಕೆಲಸಗಳು ಸಾವಿನ ನಂತರವೂ ನಮ್ಮನ್ನು ಬದುಕಿಸುತ್ತವೆ.ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗದಿದ್ದರೆ ನಮಗೂ,ಪ್ರಾಣಿಗಳಿಗೂ ವೆತ್ಯಾಸವಿಲ್ಲ. ಕಳೆದ 50 ವರ್ಷಗಳಲ್ಲಿ ನಾನು ನೇರ, ನಿಷ್ಠೂರ ನಡೆಯಿಂದಲೇ, ಅನ್ಯಾಯವನ್ನು ಖಂಡಿಸುತ್ತಾ ಬಂದವನು.ವಿದ್ಯಾರ್ಥಿ ದಿಸೆಯಿಂದಲೇ ಆ ಮನೋಸ್ಥಿತಿಯನ್ನು ರೂಢಿಸಿಕೊಂಡೆ,ಒಬ್ಬನೇ ಕುಳಿತು ಮೇಲುಕು ಹಾಕಿದರೆ ಆಶ್ಚರ್ಯವೆನಿಸುತ್ತದೆ ಎಂದು ತಮ್ಮ ಜೀವನದ ಕೆಲ ಘಟನೆಗಳನ್ನು ವಿವರಿಸಿದರು.

ಚುನಾವಣಾ ರಾಜಕಾರಣದಿಂದ ವಿಮುಖನಾಗಬೇಕು ಎಂದುಕೊಂಡಿದ್ದ ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023 ರಲ್ಲಿ ಚುನಾವಣೆಗೆ ನಿಲ್ಲುವಂತೆ ಸೂಚನೆ ನೀಡಿದಾಗ ನಾನು ಗೆದ್ದು ಬಂದರೆ ಸಹಕಾರ ಸಚಿವ ಸ್ಥಾನ ನೀಡಬೇಕು ಎಂದು ಷರತ್ತು ಹಾಕಿದ್ದೆ, ಸರಕಾರ ರಚನೆಯಾದ ನಂತರ ಸಹಕಾರ ಇಲಾಖೆಯೇ ಸಿಕ್ಕಿದೆ.ಜನ ಸೇವೆಯಲ್ಲಿ ತೊಡಗಿದ್ದೇನೆ.ಮುಂದೆ ಚುನಾವಣೆಗೆ ಸ್ಪರ್ಧಿಸಬಾರದು ಎಂದುಕೊಂಡಿದ್ದ ನನಗೆ ನಿಮ್ಮೆಲ್ಲರ ಆಶೀರ್ವಾದ ಸಿಕ್ಕಿದ ನಂತರ ಹೊಸ ಹುಮ್ಮಸ್ಸು ಬಂದಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತೊಮ್ಮೆ ಚುನಾವಣಾ ರಾಜಕೀಯಕ್ಕೆ ಬರುವ ಸೂಚನೆ ನೀಡಿದರು.

ರಾಜನಹಳ್ಳಿಯ ಡಾ.ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಆಶೀರ್ವಚನ ನೀಡಿ,ಕೆ.ಎನ್.ರಾಜಣ್ಣ ಅವರು ಸಿದ್ದರಾಮಯ್ಯನವರ ಸಚಿವ ಸಂಪುಟದ ಧೀಮಂತ ಸಚಿವರು.ಇಂದು ಬಸವಣ್ಣನ ಅನುಭವ ಮಂಟಪದಲ್ಲಿದ್ದ ಎಲ್ಲಾ ಸ್ವಾಮೀಜಿಗಳು ಸಹ ಇಂದು ರಾಜಣ್ಣನವರನ್ನು ಆಶೀರ್ವದಿಸಲು ಬಂದಿದ್ದೇವೆ.ಜನ್ಮ ದಿನವನ್ನು ಆಚರಿಸಿಕೊಳ್ಳದಿರುವ ವ್ಯಕ್ತಿಯೇ ಅನಾಗರಿಕ ಎಂಬಂತಹ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ.ಜನರೇ ಇಷ್ಟಪಟ್ಟು 75ನೇ ವರ್ಷದ ಹುಟ್ಟು ಹಬ್ಬ ಆಚರಿಸುವ ಪ್ರಯತ್ನ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಅದು ಕೈಗೂಡಲಿದೆ.ಜನ್ಮ ದಿನವೆಂಬದು ಹಿಂದೆ ಮಾಡಿರುವ ಕಾರ್ಯಗಳ ಮೆಲುಕು ಹಾಕುವ, ಮುಂದೆ ಮಾಡಬೇಕಿರುವ ಕಾರ್ಯಗಳ ಯೋಜನೆ ರೂಪಿಸುವ ಕಾರ್ಯಕ್ರಮವಾಗಬೇಕು.ಬಹಳ ನಿಷ್ಟೂರವಾದಿ, ನೇರ ಮಾತಿನ ಜನರಿಗೆ ಟೀಕೆ, ಟಿಪ್ಪಣ್ಣಿ ಸಹಜ. ಅವುಗಳಿಗೆ ಎಂದು ತಲೆ ಕೆಡಿಸಿಕೊಂಡವರಲ್ಲ.ಇಂತಹ ಓರ್ವ ರಾಜಕಾರಣಿ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿ, ಆದಿಚುಂಚನಗಿರಿಯ ಡಾ.ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ,ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ,ಹಿರೇಮಠದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶ್ರೀವಚನಾನಂದಸ್ವಾಮೀಜಿ ಸೇರಿದಂತೆ ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಪಾದಪೂಜೆಯಲ್ಲಿ ಪಾಲ್ಗೊಂಡು ಕೆ.ಎನ್.ರಾಜಣ್ಣ ಅವರ ಪತ್ನಿ ಶಾಂತ¯ ರಾಜಣ್ಣ ಸೇರಿದಂತೆ ಕುಟುಂಬದ ಎಲ್ಲರಿಗೂ ಆಶೀರ್ವಾದ ನೀಡಿದರು.

ಈ ವೇಳೆ ಕೆ.ಎನ್.ಆರ್. ಪತ್ನಿ ಶಾಂತ¯ ರಾಜಣ್ಣ,ಪುತ್ರ ಎಂ.ಎಲ್.ಸಿ.ಆರ್.ರಾಜೇಂದ್ರ,ಪುತ್ರಿ ರಶ್ಮಿ,ಮತ್ತೋರ್ವ ಪುತ್ರ ರವೀಂದ್ರ, ಸಿಂಗದಹÀಳ್ಳಿ ರಾಜಕುಮಾರ್, ಪಿ.ಮೂರ್ತಿ, ಗಂಗಣ್ಣ, ಕಲ್ಲಹಳ್ಳಿ ದೇವರಾಜು, ಎಸ್.ನಾಗಣ್ಣ, ಟಿ.ಪಿ.ಮಂಜುನಾಥ್ ಸೇರಿದಂತೆ ಕೆ.ಎನ್.ರಾಜಣ್ಣನವರ ಹಿತೈಷಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *