ತುಮಕೂರು : ಬಾಣಂತಿ ಮತ್ತು ಅವಳಿ ಜವಳಿ ಹಸುಗೂಸುಗಳು ಸಾವನ್ನಪ್ಪಿದ ಒಂದು ವಾರದ ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರರವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಕರಿಯನ್ನು ಪರಿಶೀಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ವಾರದ ಬಳಿಕ ಭೇಟಿ ನೀಡಿರುವುದಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಸಾರ್ವಜನಿಕರು, ಬಾಣಂತಿ-ಅವಳಿ ಮಕ್ಕಳು ದಿಕ್ಕಿಲ್ಲದವರೆಂದು ಸಚಿವರು ಮನಸ್ಸಿಗೆ ಬಂದಾಗ ಆಸ್ಪತ್ರೆಗೆ ಭೇಟಿ ನೀಡಿ ನೆಪ ಮಾತ್ರಕ್ಕೆ ತನಿಕೆ ಮಾಡಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಡಿ.ಹೆಚ್.ಓ ರವರು ಮತ್ತು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸರ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ತಾಯಿ ಮತ್ತು ಶಿಶು ಮರಣದ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಹೊರಗಡೆ ಔಷಧಿ ಬರೆದು ಕೊಡುವುದನ್ನು ಮತ್ತು ಆಪರೇಷನ್ ಮಾಡಲು ಲಂಚ ಕೇಳಿದರೆ ಕ್ರಮ ತೆಗೆದುಕೊಳ್ಳಲು ಡಿಎಚ್‍ಓ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚಿಸಿದರು. ಆಸ್ಪತ್ರೆ ತುಂಬಾ ಏಜೆಂಟರ್‍ಗಳು ಹುಟ್ಟಿಕೊಂಡಿದ್ದು, ಏಜೆಂಟ್‍ಗಳ ಮೂಲಕ ಲಂಚ ಪಡೆಯುವುವವರನ್ನು ಹಿಡಿಯುವುದು ಕಷ್ಟ ಆಗಿದೆ.
ಆದುದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಏಜೆಂಟ್ ಹಾವಳಿ ತಪ್ಪಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು. ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅನುದಾನ ದುರ್ಬಳಕೆ ಆಗಿದ್ದು, ಇದುವರೆಗೂ ವಸೂಲು ಆಗದೆ ಇರುವ ಬಗ್ಗೆ ಜಿಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾ ಅಧಿಕಾರಿಗಳು ಜಿಲ್ಲಾ ಆಸ್ಪತ್ರೆಯ ಅನೇಕ ಸಿಬ್ಬಂದಿಗಳು ಒಳಗೊಂಡಿದ್ದಾರೆ ಎಂದು ಉತ್ತರ ನೀಡಿದರು. ಅದಕ್ಕೆ ಉಸ್ತುವಾರಿ ಸಚಿವರು ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳೇ ಕ್ರಮತೆಗೆದುಕೊಳ್ಳಬೇಕೆಂದು ಸೂಚಿಸಿದರು.
ಜಿಲ್ಲಾ ಆಸ್ಪತ್ರೆಯ ಅವಾಂತರಗಳಿಗೆ ತೀವ್ರ ಬೇಸರ ವ್ಯಕ್ತ ಪಡಿಸಿದ ಸಚಿವರು, ಎಂದರೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ದಿನ ಸಂಗ್ರಹವಾಗುವ ಶುಲ್ಕದ ಲೆಕ್ಕವನ್ನು ಎಸ್‍ಎಂಎಸ್ ಮಾಡುವಂತೆ ಸೂಚಿಸಿದರು.
ಈ ಸಮಯದಲ್ಲಿ ಖಾಲಿ ಹುದ್ದೆಗಳ ಮಾಹಿತಿ ಪಡೆದರು ಹಾಗೂ ಕ್ರಮಮವಹಿಸಲು ಸೂಚಿಸಿದರು. ಆಯುಷ್ಮಾನ್ ಭಾರತ್ ಸ್ಕೀಮ್ ನಲ್ಲಿ ವೈದ್ಯಾಧಿಕಾರಿಗಳಿಗೆ ಪೆÇ್ರೀತ್ಸಾಹ ಧನ ನೀಡಲಾಗುತ್ತಿದೆ.ವೈದ್ಯಾಧಿಕಾರಿಗಳು ಮಾನವೀಯ ದೃಷ್ಠಿಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಿದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ವೈದ್ಯಾಧಿಕಾರಿಗಳಿಗೆ ಒಳ್ಳೆ ಸಂಬಳ ಮತ್ತು ಪ್ರೋತ್ಸಾಹ ಧನ ನೀಡುತ್ತಿದ್ದು, ಸಣ್ಣ ಪುಟ್ಟ ಕಾರಣಗಳನ್ನು ನೀಡದೆ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ತಿಳಿಸಿದರು.