ಜಿಲ್ಲಾ ಸಾಹಿತ್ಯ ಸಮ್ಮೇಳನದತ್ತ ತಲೆ ಹಾಕದ ಸಚಿವರುಗಳು

ತುಮಕೂರು : ಜಿಲ್ಲೆಯ ಸಾಂಸ್ಕøತಿಕ ಹಬ್ಬ ಎಂದು ಕರೆಸಿಕೊಳ್ಳುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ ಮೂವರು ಸಚಿವರಿದ್ದರೂ ಯಾವ ಸಚಿವರೂ ಸಮ್ಮೇಳನದತ್ತ ತಲೆಯನ್ನೇ ಹಾಕಲಿಲ್ಲ.

ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಆರಗ ಜ್ಞಾನೇಂದ್ರರವರನ್ನು ‘ಕಲ್ಪನುಡಿ’ ಸ್ಮರಣ ಸಂಚಿಕೆ ಬಿಡುಗಡೆಗೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರನ್ನು ಸಮ್ಮೇಳನಾಧ್ಯಕ್ಷರಾದ ಎಂ.ವಿ.ನಾಗರಾಜರಾವ್ ಅವರ ನೂತನ ಕೃತಿಗಳ ಬಿಡುಗಡೆಗೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್‍ರವರನ್ನು ಸಿ.ಜಿ.ವೆಂಕಟೇಶ್ವರ ಅವರ ‘ಶಿಕ್ಷಣವೇ ಶಕ್ತಿ’ ಎಂಬ ಕೃತಿ ಬಿಡುಗಡೆಗೆ ಆಹ್ವಾನಿಸಲಾಗಿತ್ತು.

ಜಿಲ್ಲೆಯಲ್ಲಿ 3 ಸಚಿವರಿದ್ದರೂ ಸಮ್ಮೇಳನದ ಪ್ರಮುಖ ಘಟ್ಟವಾದ ಉದ್ಘಾಟನಾ ಸಮಾರಂಭದಲ್ಲಿ ಯಾವ ಸಚಿವರೂ ಪಾಲ್ಗೊಳ್ಳದಿರುವುದು ಇವರಿಗೆ ಸಾಹಿತ್ಯಕ್ಕಿಂತ ರಾಜಕೀಯ ಸಭೆ-ಸಮಾರಂಭಗಳೆ ಬಹು ಪ್ರಿಯವಾದ ಸಮ್ಮೇಳನವಾಗುತ್ತವೆ,ಸಾಹಿತ್ಯ ಮತ್ತು ಸಾಹಿತಿಗಳಿಂದ ಇವರಿಗೆ ಏನು ಲಾಭ ಎಂಬ ಮಾತುಗಳನ್ನು ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಕೆಲವರು ಮಾತನಾಡಿಕೊಳ್ಳುತ್ತಿದ್ದರು.

ಕೊನೆಯ ಪಕ್ಷ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಶಿಕ್ಷಣ ಮಂತ್ರಿಗಳಾದರೂ ಸಮ್ಮೇಳನಕ್ಕೆ ಆಗಮಿಸಬಹುದು ಎಂಬದು ಸಹ ಉಸಿಯಾಯಿತು.

ಇದಲ್ಲದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಚಿವರುಗಳನ್ನು ಹೇಗೆ ಆಹ್ವಾನಿಸಿದ್ದಾರೋ ಗೊತ್ತಿಲ್ಲ, ಮತ್ತೆ ಕೆಲವರು ಸಚಿವರುಗಳು ಸಮ್ಮೇಳನಕ್ಕೆ ಬಾರದಿರುವುದಕ್ಕೆ ಇದೇನು ರಾಜಕೀಯ ಸಮ್ಮೇಳನವೇ ಎಂದು ಮಾತನಾಡಿಕೊಳ್ಳುತ್ತಿದ್ದರು.

ಸಚಿವರು ಬಂದಿದ್ದರೆ ಸರ್ಕಾರದ ಮಟ್ಟದಲ್ಲಿ ಸಾಹಿತ್ಯಕ್ಕೆ ಸಿಗಬೇಕಾದ ಸವಲತ್ತು, ನಾಡು-ನುಡಿಯ ಅಭಿವೃದ್ಧಿಯ ಬಗ್ಗೆ ಏನು ಹೇಳುತ್ತಿದ್ದರು ಎಂಬುದು ಸಹ ಮುಖ್ಯವಾಗುತ್ತಿತ್ತು.

Leave a Reply

Your email address will not be published. Required fields are marked *