
ಕುಪ್ಪಳ್ಳಿ : ಡಾ.ಮಿಲಿಂದ ಎಂ.ಬಿ. ಮತ್ತು ಭೂಮಿಕಾ.ವೈ. ಅವರುಗಳು ಇಂದು ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪುರವರ ಶತಮಾನೋತ್ಸವ ಸ್ಮಾರಕಭವನದ ಹೇಮಾಂಗಣದಲ್ಲಿ ಕುವೆಂಪುರವರ ಮಂತ್ರಮಾಂಗಲ್ಯದ ಮೂಲಕ ವಿವಾಹವಾದರು.
ಡಾ.ಮಿಲಿಂದ ಎಂ.ಬಿ. ತುಮಕೂರಿನ ಡಾ.ಬಸವರಾಜು ಮತ್ತು ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಅಧ್ಯಕ್ಷರಾದ ಜಿ.ಮಲ್ಲಿಕಾ ಬಸವರಾಜು ದಂಪತಿಗಳ ಮಗನಾಗಿದ್ದಾರೆ. ಭೂಮಿಕಾ.ವೈ.ಅವರು ಶಿವಮೊಗ್ಗದ ಕೆ.ಎಲ್.ಬೇಬಿ ಮತ್ತು ಯಶವಂತ ಆರ್.ಸೂರ್ಯವಂಶಿ ಅವರ ಮಗಳಾಗಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿ ಅರಕೇಶ್ ಈ ಸಂದರ್ಭದಲ್ಲಿ ಮಾತನಾಡಿ, ಪ್ರೀತಿ, ಕರುಣೆ ಮೇಲೆ ನಂಬಿಕೆಯಿಟ್ಟು ಮದುವೆಯಾಗುತ್ತಿದ್ದಾರೆ.
ಇಂದಿನ ಮದುವೆಗಳು ಜಾತಿ, ಜಾತಿ ಮಧ್ಯೆ ಯೆ ಮದುವೆ ಆಗುತ್ತಿರುವಾಗ, ಸಮಾಜ ಬದಲಾವಣೆಗಾಗಿ ಅಂತರ್ಜಾತಿ ವಿವಾಹವಾಗುತ್ತಿವೆ.
ಸಾವಿರಾರು ವರ್ಷಗಳಿಂದ ಭಯ ಹುಟ್ಟುಸುತ್ತಾ ಮದುವೆ ಮಾಡುತ್ತಿದ್ದಾರೆ, ಜಾತಿ ಎಂಬುದು ಸಾಮಾಜಿಕ ನ್ಯಾಯದ ವಿರೋಧಿ, ಗಾಂಧಿ, ಅಂಬೇಡ್ಕರ್ ಜಾತಿ ಹೋಗಲಾಡಿಲು ಪ್ರಯತ್ನಿಸಿದರು, ಬ್ರಾಹ್ಮಣ ಶಾಹಿಯಿಂದ ಬಿಡುಗಡೆಯಾಗದಿರುವುದು ದುರಂತ ಎಂದರು.
ಜಾತಿ ನಿರ್ಮೂಲನೆಗೆ ಸಂವಿಧಾನದಲ್ಲೂ ಏನೂ ಹೇಳದೆ ಇರುವುದರಿಂದ, ಇಂದಿಗೂ ಜಾತಿ, ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆಗೆ ಕಾರಣವಾಗಿದೆ.
ಬ್ರಾಹ್ಮಣ್ಯ ಶಾಹಿಯಿಂದ ಹೊರ ಬರಲು ಮೂಡನಂಬಿಕೆಗಳಿಂದ ಹೊರಬರಲು ಅಂತರ್ಜಾತಿ ವಿವಾಹವಾಗಲಿ ಎಂದು ಹೇಳಿದರು.
ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಅವರು ಕುವೆಂಪುರವರ ಮಂತ್ರಮಾಗಲ್ಯ ಬೋಧಿಸಿ ಮಾತನಾಡಿ 1966ರಲ್ಲಿ ಪೂರ್ಣಚಂದ್ರ ತೇಜಸ್ವಿ-ರಾಜೇಶ್ವರಿ ಅವರಿಗೆ ಕುವೆಂಪು ರವರು ಮಂತ್ರಮಾಂಗಲ್ಯ ವಿವಾಹ ಮಾಡಿಸಿದ್ದರು, ಅದು ಐದು ದಶಕಗಳ ನಂತರವೂ ಮಂತ್ರಮಾಂಗಲ್ಯ ವಿವಾಹಗಳು ನಡೆಯುತ್ತಿವೆ ಎಂದರು.
ವಕೀಲರಾದ ಹೆಚ್.ವಿ.ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.