ಚುನಾವಣೆ : 15 ದಿನಕ್ಕೊಮ್ಮೆ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ

ತುಮಕೂರು : ರಾಜ್ಯದಲ್ಲಿ ಚುನಾವಣಾ ಪೂರ್ವ ಕಾರ್ಯಗಳು ನಮ್ಮ ಪಕ್ಷದಿಂದ ನಡೆಯುತ್ತಿದ್ದು ಇದೇ ತಿಂಗಳಿನಿಂದ ಪ್ರತಿ 15 ದಿನಕ್ಕೊಮ್ಮೆ ಪ್ರಧಾನಿ ನರೇಂದ್ರ ಮೋದಿ ರವರು ರಾಜ್ಯಕ್ಕೆ ಭೇಟಿ ನೀಡಲಿದ್ದು, ಹಾಗೆಯೇ ತಿಂಗಳಿಗೆ ನಾಲ್ಕು ಬಾರಿ ಗೃಹ ಸಚಿವ ಅಮಿತ್ ಶಾ ರವರು ಸಹ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಆ ಸಂದರ್ಭದಲ್ಲಿ ರಾಜ್ಯದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವ ರೀತಿ ತಯಾರಿ ಮಾಡಬೇಕು ಎಂಬ ತೀರ್ಮಾನವನ್ನು ರಾಷ್ಟ್ರ ಹಾಗೂ ರಾಜ್ಯದ ನಾಯಕರು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಅವರಿಂದು ತುಮಕೂರಿನ ಗಾಜಿನ ಮನೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು, ರಾಜ್ಯ ಕಾಂಗ್ರೆಸ್ ಪಕ್ಷವು ಗಂಟು ಮೂಟೆ ಕಟ್ಟುಕೊಂಡು ಹೋಗುವ ಕಾಲ ದೂರವಿಲ್ಲ ಎಂದು ಆರ್.ಅಶೋಕ್‍ರವರು ಕಾಂಗ್ರೆಸ್ ಪಕ್ಷದ ಮುಖಂಡರುಗಳಿಗೆ ಮಾರ್ಮಿಕವಾಗಿ ಕುಟುಕಿದರು.

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಸರ್ಕಾರವನ್ನು ಟೀಕೆ ಮಾಡುತ್ತಿದ್ದು, ಒಬ್ಬರ ಹೇಳಿಕೆಯಂತೆ ಮತ್ತೊಬ್ಬರ ಹೇಳಿಕೆ ವ್ಯತಿರಿಕ್ತವಾಗಿರುತ್ತವೆ, ಸರ್ಕಾರ ಮೀಸಲಾತಿ ಹೆಚ್ಚಳ ್ಲ ಕೆಂಪೇಗೌಡರ ಪುತ್ತಳಿ ಅನಾವರಣ ಕಾಂಗ್ರೆಸ್‍ನವರಿಗೆ ಹೊಟ್ಟೆಯುರಿ ಪ್ರಾರಂಬವಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದರು.

ಗುಜರಾತ್ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಗಂಟು ಮೂಟೆ ಕಟ್ಟುವ ಪರಿಸ್ಥಿತಿಗೆ ಬಂದಿದ್ದು ಇನ್ನು ಅವರು ರಾಜ್ಯಕ್ಕೆ ಯಾವ ಕೊಡುಗೆ ನೀಡಿದ್ದಾರೆ ಸಿದ್ಧರಾಮಯ್ಯನವರ ಆಡಳಿತ ಅವಧಿಯಲ್ಲಿ ಟಿಪ್ಪು ಭಾಗ್ಯ ನೀಡಿದ್ದು ಇನ್ನೂ ಟಿಪ್ಪು ಜಯಂತಿ ಆಚರಣೆ ವೇಳೆ ಕೊಲೆಗಳು ನಡೆದಿರುವುದೇ ‘ಭಾಗ್ಯ’ ಎಂದು ವಿರೋಧ ಪಕ್ಷವನ್ನು ಟೀಕಿಸಿದರು.

ಈ ಹಿನ್ನಲೆಯಲ್ಲಿ ಟಿಪ್ಪು ಅನ್ನೋ ಕಾಂಗ್ರೆಸ್ ಪಕ್ಷದ ರಾಜ್ಯಕ್ಕೆ ಬೇಡ ಎಂದು ರಾಜ್ಯದ ಜನತೆ ತೀರ್ಮಾನ ಮಾಡಿದ್ದು, ಗುಜರಾತ್‍ನಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನವನ್ನು ಪಡೆದುಕೊಳ್ಳುವುದಕ್ಕೆ ಯೋಗ್ಯತೆ ಇಲ್ಲದಂತಾಗಿದೆ ಅದೇ ರೀತಿ ರಾಜ್ಯದಲೂ ಸಹ ಕಾಂಗ್ರೆಸ್ ಪಕ್ತ ಶೇಕಡ 20ರಷ್ಟು ಸ್ಥಾನ ಗೆಲ್ಲಲು ಸಧ್ಯವಿಲ್ಲ ಎಂದರು.

ಗುಜರಾತ್‍ನಲ್ಲಿ ಆಮ್ ಆದಿ ಪಾರ್ಟಿ ಹೇಗೆ ಸರ್ಫ್ ಹಾಗೂ ನಿರ್ಮ ಪೌಡರ್ ಹಾಕಿ ಕಾಂಗ್ರೆಸ್ಸನ್ನು ತೊಳೆದು ಹಾಕಿದಂತೆ ರಾಜ್ಯದಲ್ಲೂ ಸಹ ಅಮ್ಮಾದಿ ಪಕ್ಕವೇ ಕಾಂಗ್ರೆಸ್ ಪಕ್ಷವನ್ನ ತೊಳೆಯಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *