ತುಮಕೂರು : ಮಾಜಿ ಶಾಸಕ ಬಿ.ಸುರೇಶಗೌಡ ಅವರು ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಮೇಲೆ ದೂರು ನೀಡಿದ 24 ಗಂಟೆಯೊಳಗೆ ಮಾಜಿ ಶಾಸಕರ ಮೇಲೆ ಹಾಲಿ ಶಾಸಕರಾದ ಗೌರಿಶಂಕರ್ ದೂರು ನೀಡಿದ್ದಾರೆ.
ಮಾಜಿ ಶಾಸಕ ಸುರೇಶ ಗೌಡ ಕೊಲೆಗೆ ಸಂಚು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ
ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್, ಬೊಮ್ಮನಹಳ್ಳಿ ಬಾಬು ಅಲಿಯಾಸ್ ಅಟ್ಡಿಕಾ ಬಾಬು, ಗೌರಿಶಂಕರ್ ಬೆಂಬಲಿಗ ಹಿರೇಹಳ್ಳಿ ಮಹೇಶ್ ಅವರ ವಿರುದ್ಧ ದೂರು ದಾಖಲಾಗಿದೆ.
ಸುರೇಶ್ ಗೌಡ ಮತ್ತು ಗೌರಿಶಂಕರ್ ಅವರ ನಡುವೆ ಇದೇ ವಿಚಾರವಾಗಿ ಆರೋಪ ಪ್ರತ್ಯಾರೋಪ ಕೇಳಿ ಬಂದಿತ್ತು. ಇದು ಮತ್ತೊಂದು ಹಂತ ತಲುಪಿ ದೂರು ದಾಖಲಿಸಲಾಗಿದೆ.
ಈ ದೂರು ನೀಡಿದ 24ಗಂಟೆಯೂ ಕಳೆದಿಲ್ಲ ಹಾಲಿ ಶಾಸಕರಾದ ಡಿ.ಸಿ.ಗೌರಿಶಂಕರ್ ಮೇಲೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ 120(ಬಿ).506ರ ಅಡಿಯಲ್ಲಿ ಮಾಜಿ ಶಾಸಕ ಬಿ.ಸುರೇಶಗೌಡ ಅವರ ಮೇಲೆ ಎಫ್‍ಐಆರ್ ದಾಖಲಾಗಿದೆ.