ಕಾಂಗ್ರೆಸ್‍ನಿಂದ ಪ್ರೀಡಂ ಮಾರ್ಚ್ ಪಾದಯಾತ್ರೆ

ತುಮಕೂರು:ಸ್ವಾತಂತ್ರ ಚಳವಳಿಯಲ್ಲಿ ಕಾಂಗ್ರೆಸ್ ಪಕ್ಷ ವಹಿಸಿದ್ದ ಪಾತ್ರವನ್ನು ಇಂದಿನ ಯುವಜನರಿಗೆ ತಿಳಿಸುವ ನಿಟ್ಟಿನಲ್ಲಿ ಎಐಸಿಸಿ ಮತ್ತು ಕೆಪಿಸಿಸಿಯ ನಿರ್ದೇಶನದಂತೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರೀಡಂ ಮಾರ್ಚ್ ಕಾಂಗ್ರೆಸ್ ವತಿಯಿಂದ ಪಾದಯಾತ್ರೆಯನ್ನು ನಡೆಸಲಾಯಿತು.

ನಗರದ ಬೋರೇಗೌಡನ ಪಾಳ್ಯ ಸರ್ಕಲ್(ಬಿ.ಜಿ.ಪಾಳ್ಯ ಸರ್ಕಲ್)ನಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಅವರು,ಬ್ರಿಟಿಷರನ್ನು ಭಾರತದಿಂದ ತೊಲಗಿಸಬೇಕು ಎಂಬ ಉದ್ದೇಶದಿಂದ 1885ರಲ್ಲಿ ಉದಯಿಸಿದ ಕಾಂಗ್ರೆಸ್ ಪಕ್ಷ,1947ರವರೆಗೆ ನಿರಂತರವಾಗಿ ಹಲವಾರು ಹೋರಾಟ, ಸತ್ಯಾಗ್ರಹಗಳಲ್ಲಿ ಪಾಲ್ಗೊಂಡ ಪರಿಣಾಮ ದೇಶ ಬ್ರಿಟಿಷರ ಕಪಿ ಮುಷ್ಠಿಯಿಂದ ಹೊರಬರಲು ಸಾಧ್ಯವಾಯಿತು. ಈ ವಿಚಾರ ಇಂದಿನ ಯುವಜನತೆಗೆ ಅಷ್ಟಾಗಿ ತಿಳಿದಿಲ್ಲ.ಹಾಗಾಗಿ ಬಿಜೆಪಿ ಪಕ್ಷದ ಸುಳ್ಳು ಭರವಸೆಗಳ ಮತ ನೀಡಿ ಪರಿತಪಿಸುತ್ತಿರುವ ಯುವಜನತೆಗೆ ಸ್ವಾತಂತ್ರ ಹೋರಾಟದ ವಿವಿಧ ಮಜುಲುಗಳನ್ನು ಪರಿಚಯಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಜನರ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಈ ಪಾದಯಾತ್ರೆ ಮಹತ್ವ ಪಡೆದುಕೊಂಡಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ,ಮಾಜಿ ಶಾಸಕ ಎಸ್.ಷಪಿ ಅಹಮದ್ ಚಾಲನೆ ನೀಡಿರುವ ಈ ಪ್ರೀಡಂ ಮಾರ್ಚ್ ಬಿ.ಜಿ.ಪಾಳ್ಯ ವೃತ್ತದಿಂದ ಹೊರಟು, ಜಯಪುರ, ಪೂರ್‍ಹೌಸ್ ಕಾಲೋನಿ, ಟಿಪ್ಪು ನಗರ, ಕುರಿಪಾಳ್ಯ,ಅಜಾದ್ ನಗರ,ನಜರಾಬಾದ್ ಮೂಲಕ ಧ್ಹಾನಾಪಾಲೇಸ್ ಬಳಿ ಕೊನೆಗೊಳ್ಳಲಿದೆ.ಇದರಲ್ಲಿ ನಗರಪಾಲಿಕೆಯ ವಿರೋಧಪಕ್ಷದ ನಾಯಕರು ಸೇರಿದಂತೆ ಪಾಲಿಕೆಯ ಎಲ್ಲಾ ಸದಸ್ಯರು, ಮಾಜಿ ಮೇಯರ್‍ಗಳು ಸಹ ಪಾಲ್ಗೊಂಡಿದ್ದಾರೆ. ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಸಹ ಈ ಪಾದಯಾತ್ರೆಗೆ ಸಾಥ್ ನೀಡಿದ್ದಾರೆ.ಇದರ ಜೊತೆಗೆ ಸಾರ್ವಜನಿಕರ ಸಹ ಕೈಜೋಡಿಸಿರುವುದು ಕಾಂಗ್ರೆಸ್ ಪಕ್ಷದ ಬಗ್ಗೆ ಜನರಿಗೆ ಇರುವ ಒಲವನ್ನು ತೋರಿಸುತ್ತದೆ ಎಂದು ಡಾ.ರಫೀಕ್ ಅಹಮದ್ ತಿಳಿಸಿದರು.

Leave a Reply

Your email address will not be published. Required fields are marked *