“ಗ್ರಾಮ ಪಂಚಾಯತಿ ತೆರಿಗೆ ಹಣಕ್ಕೆ ಕೈ ಹಾಕಿದ ರಾಜ್ಯ ಸರ್ಕಾರ”- ಡಿಸೆಂಬರ್ 12ರಂದು ಬೆಂಗಳೂರು ಚಲೋ

ತುಮಕೂರು : ಕೋವಿಡ್-19 ನಿಂದ ಮೃತಪಟ್ಟ ಗ್ರಾಮ ಪಂಚಾಯಿತಿ ನೌಕರರಿಗೆ ಪರಿಹಾರದ ಹಣವನ್ನು ರಾಜ್ಯ ಸರ್ಕಾರವೇ ತನ್ನ ನಿಧಿಯಿಂದ ನೀಡಬೇಕು, ಮೃತ ನೌಕರರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಹಾಗೂ ಈಗಾಗಲೇ ಗ್ರಾಮ ಪಂಚಾಯತಿಗಳಿಂದ ಆಶ್ವಾನೆ ನಿಧಿಗೆ ಸಂಗ್ರಹಿಸಿರುವ ಹಣವನ್ನು ಆಯಾ ಪಂಚಾಯತಿಗಳಿಗೆ ವಾಪಸ್ಸು ನೀಡಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷರಾದ ಸತೀಶ್ ಕಾಡಶೆಟ್ಟಿಹಳ್ಳಿ ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯಿತಿ ನೌಕರರು ಕೋವಿಡ್-19ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುವಾಗ ರೋಗಗ್ರಸ್ಥರ ಸಂಪರ್ಕದಿಂದ ಮರಣ ಹೊಂದಿದ್ದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಪ್ರಮಾಣಿಕರಿಸಿದಲ್ಲಿ ಅಂತಹವರ ಕುಟುಂಬಕ್ಕೆ ರೂ.30.00(ಮೂವತ್ತು ಲಕ್ಷ) ರೂಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಲಭ್ಯವಿರುವ ಅನುದಾನದಿಂದ ಪರಿಹಾರ ನೀಡಲಾಗುವ್ಯದೆಂದು ಸರ್ಕಾರ ಘೋಣೆಮಾಡಡಿತ್ತು.(ಸರ್ಕಾರದ ಆದೇಶ ಸಂಖ್ಯೆ ಆರ್.ಡಿ.ಪಿ.ಆರ್ 535ಜಿಪಿಎಸ್ 2020, ದಿನಾಂಕ2020). ಆದರೆ ಎರಡು ವರ್ಷಗಳು ಕಳೆದರೂ ಮೃತರಾದ ಗ್ರಾಮ ಪಂಚಾಯತಿ ನೌಕರರರಿಗೆ ಯಾವುದೇ ಪರಿಹಾರ ನೀಡಡದೇ ಸರ್ಕಾರ ನಿದ್ದೆಯಲ್ಲಿತ್ತು ಎಂದಿದ್ದಾರೆ.

ಆದರೆ ಇತ್ತೀಚೆಗೆ ನೌಕರರ ಮುಷ್ಕರದ ಬೆದರಿಕೆಯಿಂದ ಎಚ್ಚೆತ್ತ ಸರ್ಕಾರ, ಪರಿಹಾರ ನೀಡಲು ತಾಲ್ಲುಕು ಮತ್ತು ಜಿಲ್ಲಾ ಪಂಚಾಯತಿಗಳ ಅನುದಾನದಲ್ಲಿ ಪರಿಹಾರ ನೀಡುಲು ಪ್ರಯತ್ನಿಸಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಯಾವುದೇ ಅನುದಾನ ಲಭ್ಯವಿಲ್ಲದ ಕಾರಣ, ಜಿಲ್ಲಾ ಪಂಚಾಯಿತಿಯ ಮಾತೃ ಖಾತೆಗೆ ಪರಿಹಾರ ಧನವನ್ನು ಬಿಡುಗಡೆ ಮಾಡುವಂತೆ ಕೆಲವು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸರ್ಕಾರವನ್ನು ಒತ್ತಾಯ ಮಾಡಡಡಿದುದರಿಂದ, ಎರಡು ಮುಕ್ಕಾಲು ಸಾವಿರ ಕೋಟಿ ಬಜೆಟ್ ಮಂಡಿಸಿರುವ ಸರ್ಕಾರ, ಕೋವಿಡ್19 ನಿರ್ವಹಣೆಯಲ್ಲಿ ಮೃತರಾಗಿರುವ 160ಮಂದಿ ಗ್ರಾಮ ಪಂಚಾಯತಿ ನೌಕರರಿಗೆ ಕೇವಲ 50 ಕೋಟಿ ಪರಿಹಾರ ನೀಡಲು ರಾಜ್ಯ ಸರ್ಕಾರ ಪರಿಹಾರದ ಧನವನ್ನು ಬಿಡುಗಡೆ ಮಾಡದೆ, ಜಿಲ್ಲಾ ಪಂಚಾಯಿತಿಗಳ ಹಂತದಲ್ಲಿ “ಆಶ್ವಾಸನೆ ನಿಧಿ” ಎಂಬ ಹೆಸರಿನಲ್ಲಿ ನಿಧಿಯನ್ನು ಸ್ಥಾಪಿಸಿ ಗ್ರಾಮ ಪಂಚಾಯಿತಿಗಳು ತಮ್ಮ ಸ್ವಂತ ಸಂಪನ್ಮೂಲದ ವಾರ್ಷಿಕ ಬೇಡಿಕೆಯ ಆಧಾರದಲ್ಲಿ ವಾರ್ಷಿಕ ವಂತಿಗೆ ನೀಡುವಂತೆ, ಹಾಗೂ ಪಿಡಿಓಗಳು ನಿಗಧಿ ಪಡಿಸಿದ ಹಣವನ್ನು ಆಶ್ವಾಸÀನೆ ನಿಧಿ ಖಾತೆಗೆ ತಕ್ಷಣ ವರ್ಗಾಯಿಸುವಂತೆ ಒತ್ತಡ ಹೇರುತ್ತಿರುವುದು ವಿಪರ್ಯಾಸ ಎಂದು ತಿಳಿಸಿದ್ದಾರೆ.

ಅಲ್ಲದೆ ಗ್ರಾಮ ಪಂಚಯಾತಿಗಳಿಂದ 50 ಕೋಟಿ ಹಣ ಸಂಗ್ರಹಿಸಲು, ಜಿಲ್ಲಾ ಪಂಚಯಾತಿ ಮುಖ್ಯ ಕಾಂiÀರ್iನಿರ್ವಹಣಾಧಿಕಾರಿಗಳು ಹಾಗೂ ತಾಲ್ಲುಕು ಪಂಚಾಯತಿ ಕಾರ್ಯನಿರ್ವಾಕ ಅಧಿಕಾರಿಗಳ ಮೂಲಕ ಪಿಡಿಒಗಳು ತಕ್ಷಣ ಹಣ ವರ್ಗಾವಣೆ ಮಾಡದಿದ್ದರೆ ಗ್ರಾಮ ಪಂಚಾಯತಿಯ ಲೆಕ್ಕಪ್ರಗಳನ್ನು ತನಿಖೆ ಮಾಡಿಸುವುದಾಗಿ ಪಿಡಿಒಗಳ ಮೂಲಕ ಅದ್ಯಕ್ಷರುಗಳನ್ನು ಬೆದರಿಸಿ, ಹಣ ಸಂಗ್ರಹ ಮಾಡುತ್ತಿರುವುದು ಸಂವಿಧಾನ ವಿರೋಧಿ ಕ್ರಮವಾಗಿರುತ್ತದೆ ಎಂದಿದ್ದಾರೆ.
ಗ್ರಾಮ ಪಂಚಾಯತಿಗಳು ಸಂವಿಧಾನದ ಪ್ರಕರಣ 243ಜಿ ಅನ್ವಯ ಸ್ಥಳೀಯ ಸ್ವಯಂ ಸರ್ಕಾರಗಳಾಗಿದ್ದು , ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಅನ್ವಯ ಯಾವುದೇ ಅನುದಾನವನ್ನು ಖರ್ಚುಮಾಡುವ ಸಂದರ್ಭದಲ್ಲಿ ಸಾಮಾನ್ಯ ಸಭೆ ಕರೆದು ಸಭೆಯ ಅನುಮೋದನೆ ಪಡೆದು ಖರ್ಚು ಮÀiÁಡಬೇಕು. ಆದರೆ ಇಲ್ಲಿ ಸರ್ಕಾರವೇ ಖುದ್ದಾಗಿ ಕಾಯ್ದೆ ಮತ್ತು ಸಂವಿಧಾನದ ಉಲ್ಲಂಘನೆ ಮಾಡಿಸುತ್ತಿದೆ. ಇದನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಮಹಾ ಒಕ್ಕೂಟ ವಿರೋಧಿಸುತ್ತದೆ. ಎರಡು ಮುಕ್ಕಾಲು ಸಾವಿರ ಕೋಟಿ ಬಜೆಟ್ ಮಂಡಿಸಿರುವ ಸರ್ಕಾರ 50 ಕೋಟಿ ಅನುದಾನಕ್ಕಾಗಿ ಗ್ರಾಮ ಪಂಚಾಯತಿಗಳ ಅನುದಾನಕ್ಕೆ ಕೈ ಹಾಕಿರುವುದು ಸರಿಯಲ್ಲ. ಯಾರಾದರು ಪ್ರಶ್ನಿಸಿದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಒಗಳು ಉತ್ತರ ನೀಡಬೇಕಾಗುತ್ತದೆ ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ನೀಡುವ ಶಾಸನಬದ್ಧ ಅನುದಾನದಲ್ಲಿ ಶೇ 40 ರಷ್ಟನ್ನು ನೌಕರರ ಸಂಬಳಕ್ಕೆ, ಉಳಿದ ಶೇ 60 ರಷ್ಟನ್ನು ವಿದ್ಯುತ್ ಬಿಲ್ಲಿಗೆ ನಿಗದಿಪಡಿಸಲಾಗಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ನೀಡುವ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಜಲಜೀವನ್ ಮಿಷನ್‍ಗೆ ಹಣ ನೀಡಿಕೆ, ಸ್ವಚ್ಛ ಭಾರತ ಮಿಷನ್ ಅಭಿಯಾನದಲ್ಲಿ ವಾಹನ ಹಾಗೂ ಇತರೆ ಸಾಮಗ್ರಿಗಳ ಖರೀದಿ, ನೌಕರರ ಸಂಬಳ, ವಿದ್ಯುತ್‍ಚ್ಛಕ್ತಿ ಬಿಲ್ ಹೀಗೆ ಎಲ್ಲಾ ತೀರ್ಮಾನಗಳನ್ನು ಮೇಲಿನ ಹಂತದಲ್ಲೇ ತೆಗೆದುಕೊಂಡು, ಮೇಲಿನವರ ಆದೇಶವನ್ನು ಪಾಲಿಸುವಂತೆ ಪಿಡಿಓಗಳ ಮೂಲಕ ಗ್ರಾಮ ಪಂಚಾಯಿತಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದ್ದಾರೆ.

ಸ್ವಂತ ಸಂಪನ್ಮೂಲದಲ್ಲೂ ಗ್ರಾಮ ಪಂಚಾಯತಿಗಳ ಮೇಲೆ ಸೋಲಾರ್ ಘಟಕಗಳ ಅಳವಡಿಕೆ, ಡಿಜಿಟಲ್ ಲೈಬ್ರೆರಿ ಮುಂತಾದ ಯನೆಗಳನ್ನು ರೂಪಿಸಿ ಸಾಮಗ್ರಿ ಸರಬರಾಜು ಏಜೆನ್ಸಿಗಳನ್ನು ರಾಜ್ಯ ಮಟ್ಟದಲ್ಲೆ ನಿಗದಿಪಡಿಸಿ ಅವುಗಳಿಗೆ ಹಣಸಂದಾಯ ಮಾಡುವಂತೆ ಮಾಡಲಾಗುತ್ತಿದೆ ಇನ್ನೂ ತಾಲ್ಲೂಕು ಪಂಚಾಯತಿ ಮಟ್ಟದಲ್ಲೂ ಇನ್ಸುನೇಟರ್, ಬ್ಲೀಚಿಂಗ್ ಪೌಡರ್. ಫೆನಾಯಿಲ್, ಮುಂತಾದವುಗಳ ಸರಬರಾಜನ್ನು ತಾವೇ ನಿಗಧಿಪಡಿಸಿದ ಏಜೆಂನ್ಸಿಗಳ ಮೂಲಕ ಮಾಡಿ ಹಣ ಸಚಿದಾಯ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎಂದಿದ್ದಾರೆ.

ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಕಸ ಸಂಗ್ರಹಣೆ ವಾಹನ ಖರಿದೀ, ಕಸ ಸಂಗ್ರಹಣೇ ಸಾಮಗಿಗಳ ಖರೀದಿ ಮುಂತಾದವುಗಳನ್ನು ತಮ್ಮ ಹಂತದಲ್ಲೇ ಏಜೆಂನ್ಸಿಗಳನ್ನು ನಿಗಧಿಪಡಿಸಿ ಅವರಿಂದಲೇ ಕೊಳ್ಳುಹಾಗೆ ಒತ್ತಡ ಹೇರಲಾಗುತ್ತಿದೆ ಎಂದಿದ್ದಾರೆ.

ಮೇಲಧಿಕಾರಿಗಳ ಮಾತು ಕೇಳದಿದ್ದ ಪಕ್ಷದಲ್ಲಿ ಗ್ರಾಮ ಪಂಚಾಯತಿಗಳ ಲೆಕ್ಕಪತ್ರಗಳ ತನಿಖೆ ಮಾಡುತ್ತೇನೆ, ಕ್ರಮ ಕೈಗೊಳ್ಳುತ್ತೇನೆ ಎಂದು ಅಧಿಕಾರಿಗಳು ಎದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮೇಲಿನ ಎಲ್ಲಾ ಕಾರಣಗಳಿಂದಾಗಿ ಗ್ರಾಮ ಪಂಚಾಯತಿಗಳಿಗೆ ಸಾರ್ವಜಜನಿಕರ ಬೇಡಿಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹಣಕಾಸಿನ ಲಭ್ಯತೆಯೇ ಇಲ್ಲದಂತಾಗಿ ದುರ್ಭಲಗೊಂಡಿವೆ, ಆದ್ಧರಿಂದ ಈ ಕೂಡಲೇ ರಾಜ್ಯ ಸರ್ಕಾರವು ಸದರಿ ಆದೇಶವನ್ನು ಹಿಂಪಡೆದು ರಾಜ್ಯ್ಯ ಸರ್ಕಾರವೇ ಪರಿಹಾರವನ್ನು ಕೋವಿಡ್- 19ರ ಕಾರಣಕ್ಕಾಗಿ ಮೃತಪಟ್ಟ ಗ್ರಾಮ ಪಂಚಾಯಿತಿ ನೌಕರರಿಗೆ ನೀಡಬೇಕೆಂದು ಮತ್ತೋಮ್ಮೆ ಮಹಾಒಕ್ಕೂಟವು ಒತ್ತಾಯಿಸಿದೆ ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಗಳು ಸಂವಿಧಾನದ 73ನೇ ತಿದ್ದುಪಡಿಯ ನಂತರದಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳಾಗಿದ್ದು, ಅಲ್ಲಿ ಪ್ರಾಜಾಸತ್ತಾತ್ಮಕವಾಗಿ ಆಯ್ಕೆಯಾದ ಜನಪ್ರತಿನಿಧಿಗಳ ಒಂದು ಆಡಳಿತ ವ್ಯವಸ್ಥೆ ಇದ್ದು ಸಂವಿಧಾನ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಕಾಯ್ದೆಯ ಅನ್ವಯ ನಿರ್ಣಯಗಳನ್ನು ತೆಗೆದುಕೊಂಡು ಅನುಷ್ಠಾನ ಮಾಡಬೇಕಾದ ಜವಾಬ್ದಾರಿ ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳದ್ದಾಗಿರುತ್ತದೆ, ಆದರೆ ಸರ್ಕಾರ ರಾಜ್ಯಮಟ್ಟದಲ್ಲಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡು ಅವುಗಳ ಅನುಷ್ಟಾನದ ಜವಾಬ್ದಾರಿಯನ್ನು ಮಾತ್ರ ಗ್ರಾಮ ಪಂಚಾಯಿತಿಗಳಿಗೆ ನೀಡುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ಪ್ರಕ್ರಿಯೆಯಾಗಿರುತ್ತದೆ. ಉದಾಹರಣೆಗೆ ಹಾಗೂ ಗ್ರಾಮ ಪಂಚಾಯಿತಿಗಳನ್ನು ಪ್ರಜಾಸತ್ತಾತ್ಮಕ ಸಂಸ್ಥೆಗಳೆಂದು ಪರಿಗಣಿಸದೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಶಾಖಾ ಕಛೇರಿಗಳಂತೆ ನಡೆಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಕೂಡಲೆ ಈ ರೀತಿಯ ಪ್ರಕ್ರಿಯೆಗಳನ್ನು ನಿಲ್ಲಿಸಬೇಕು. ಗ್ರಾಮ ಪಂಚಾಯಿತಿಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಬೇಕಾದ ವಾತಾವರಣವನ್ನು ಸೃಷ್ಟಿಸಬೇಕು. ಇಲ್ಲವಾದಲ್ಲಿ ಡಿಸೆಂಬರ್ 12ರಂದು ಬೆಂಗಳೂರು ಚಲೋ ಕಾರ್ಯಕ್ರಮದ ಮೂಲಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸೇರಿ, ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಲಾಗುವುದೆಂದು ಎಂದು ಕೆ.ಎಸ್.ಸತೀಶ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *