ಗುಜರಾತ್ ಚುನಾವಣೆ : ಡಿಸೆಂಬರ್ 1 ಮೊದಲ, ಡಿಸೆಂಬರ್5 ಎರಡನೇ ಹಂತದ ಮತದಾನ , ಡಿ 8 ರಂದು ಎಣಿಕೆ

ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದ್ದು,  ಡಿಸೆಂಬರ್ 1 ಮೊದಲ, ಡಿಸೆಂಬರ್5 ಎರಡನೇ ಹಂತದ ಮತದಾನ , ಡಿ 8 ರಂದು ಎಣಿಕೆ ನಡರಯಲಿದೆ ಎಂದುಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿದರು.  ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರಿಗೆ ಪ್ರವೇಶ ಮತ್ತು ಸೇರ್ಪಡೆಗಾಗಿ ವಿಶೇಷ ವೀಕ್ಷಕರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಯೋಜಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮೊರ್ಬಿ ಸೇತುವೆ ಕುಸಿತದ ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ. ಗುಜರಾತ್ ಚುನಾವಣೆಯಲ್ಲಿ 4.9 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ 34,000 ಕ್ಕಿಂತ ಹೆಚ್ಚು ಸೇರಿದಂತೆ 51,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.ಗುಜರಾತ್ ನಲ್ಲಿ 2.53ಕೋಟಿ ಪುರುಷ ಮತದಾರರು ಇದ್ದಾರೆ.2.37 ಕೋಟಿ ಮಹಿಳಾ ಮತದಾರರು ಇದ್ದು 4.61ಲಕ್ಷ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 92 ಸದಸ್ಯರ ಬೆಂಬಲ ಬೇಕಿದೆ. ಪ್ರಸ್ತುತ ಆಡಳಿತಾರೂಢ ಬಿಜೆಪಿ 111, ಕಾಂಗ್ರೆಸ್​ 62 ಸದಸ್ಯ ಬಲ ಹೊಂದಿವೆ. ಐದು ಸ್ಥಾನಗಳು ವಿವಿಧ ಕಾರಣಗಳಿಂದ ತೆರವಾಗಿವೆ.

Leave a Reply

Your email address will not be published. Required fields are marked *