ಚಂದ್ರಶೇಖರ ಆಲೂರು, ಲಲಿತಸಿದ್ದಬಸವಯ್ಯರವರಿಗೆ-ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಸಾಹಿತ್ಯ ಪ್ರಶಸ್ತಿ

ತುಮಕೂರು: ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಪ್ರತಿಷ್ಠಾನವು ನೀಡುವ ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಸಾಹಿತ್ಯ ಪ್ರಶಸ್ತಿಯನ್ನು ಲಲಿತ ಪ್ರಬಂಧಕ್ಕಾಗಿ ಚಂದ್ರಶೇಖರ ಆಲೂರು ಮತ್ತು ಕಾವ್ಯಕ್ಕಾಗಿ ಲಲಿತಸಿದ್ದಬಸವಯ್ಯ ಅವರಿಗೆ ನೀಡಲಾಗಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭವು ಸೆಪ್ಟಂಬರ 21ರ ಬುಧವಾರ ಸಂಜೆ 4.30ಕ್ಕೆ ನಗರದ ಕನ್ನಡಭವನದಲ್ಲಿ ನಡೆಯಲಿದೆ.

ಆಶಯ ನುಡಿಗಳನ್ನು ಪ್ರೊ.ಬರಗೂರು ರಾಮಚಂದ್ರಪ್ಪ ಆಡಲಿದ್ದು, ಪ್ರಶಸ್ತಿ ಪ್ರಧಾನವನ್ನು ರಾಜ್ಯಸಭಾ ಸದಸ್ಯರು ಹಾಗೂ ಲೇಖಕರಾದ ಡಾ.ಎಲ್.ಹನುಮಂತಯ್ಯ ಮಾಡಲಿದ್ದು, ಅಧ್ಯಕ್ಷತೆಯನ್ನು ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಬಸವಯ್ಯ ವಹಿಸುವರು.

ಈ ಪ್ರಶಸ್ತಿಯು ತಲಾ 10ಸಾವಿರ ರೂಪಾಯಿಗಳ ನಗದು ಒಳಗೊಂಡಿದೆ.

ಸಮಾರಂಭದಲ್ಲಿ ಪ್ರಜಾಪ್ರಗತಿ ಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣ, ಶ್ರೀಮತಿ ಶಾಂತಸಣ್ಣಗುಡ್ಡಯ್ಯ, ಜಿಲ್ಲಾ ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಉಪಸ್ಥಿತರಿರುವರು, ಇದೇ ಸಂದರ್ಭದಲ್ಲಿ ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯನವರ ಬದುಕು-ಬರಹದ ಬಗ್ಗೆಯ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ. ಪಡೆದಿರುವ ಡಾ.ಪದ್ಮಜಾ ವೈ.ಎಂ. ಅವರನ್ನು ಸನ್ಮಾನಿಸಲಾಗುವುದು ಎಂದು ಬರಗೂರು ರಾಮಚಂದ್ರಪ್ಪನವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *