ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಎಚ್.ಎಲ್
ಪುಷ್ಪ ರವರು ಆಯ್ಕೆ ಯಾಗಿದ್ದಾರೆ.
ಪುಷ್ಪಾರವರು, ವನಮಾಲರವರು ಮತ್ತು ಶೈಲಜಾರವರುಗಳು ಸ್ಪರ್ಧೆಯಲ್ಲಿ ದ್ದರು, ಎಚ್.ಎಲ್.ಪುಷ್ಪರವರು 342 ಮತಗಳನ್ನು ಪಡೆಯುವುದರ ಮೂಲಕ ಆಯ್ಕೆಯಾಗಿದ್ದಾರೆ.
ವನಮಾಲ ಅವರು 280 ಮತ್ತು ಶೈಲಜಾ ಅವರು 33 ಮತಗಳನ್ನು ಪಡೆದು ಪರಾಜಿತರಾಗಿದ್ದಾರೆ. 44 ಮತಗಳು ತಿರಸ್ಕೃತಗೊಂಡಿವೆ.
ಪುಷ್ಪಾ ಅವರ ಆಯ್ಕಯು ಸಾಂಸ್ಕೃತಿಕ ವಲಯಕ್ಕೆ ಒಂದು ಖುಷಿಯನ್ನು ತಂದಿದ್ದು , ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾಬಸವರಾಜು, ತುಮಕೂರು ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ, ಶೈನಾದ ಬಿ.ಸಿ.ಶೈಲಾನಾಗರಾಜು ಅವರುಗಳು ಪುಷ್ಪರವರ ಆಯ್ಕೆಯ ನ್ನು ಅಭಿನಂದಿಸಿದ್ದಾರೆ.