ಬರಗೂರು ರಾಮಚಂದ್ರಪ್ಪ ಮೇಲಿನ ದೂರು : ತುಕ್ಕು ಹಿಡಿದಿರುವ ಸಾಂಸ್ಕøತಿಕ ರಾಜಕಾರಣಿಗಳು

ತುಮಕೂರು : ಬರಗೂರು ರಾಮಚಂದ್ರಪ್ಪನವರು ಈಗ್ಗೆ 40 ವರ್ಷಗಳ ಹಿಂದ ಬರೆದ ಕಾದಂಬರಿಯೊಳಗಿನ ಗೀತೆಯೊಂದನ್ನು ಆಧರಿಸಿ ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನ ಬಗ್ಗೆ ರಾಜ್ಯದ ಸಾಂಸ್ಕøತಿಕ ಮತ್ತು ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿಯುಳ್ಳ ರಾಜಕಾರಣಿಗಳು ಬಾಯಿ ಬಿಡದೆ ಇರುವುದು ಆಶ್ಛರ್ಯನ್ನುಂಟು ಮಾಡಿದೆ.

ಇತ್ತೀಚೆಗೆ ಒಂದು ವರ್ಗದ ಸಾಹಿತಿಗಳನ್ನೇ ಗುರುಯಾಗಿಸಿಕೊಂಡು ಒಂದಲ್ಲ ಒಂದು ರೀತಿಯಲ್ಲಿ ಬೆದರಿಕೆ, ಕಿರುಕುಳವನ್ನು ನೀಡುತ್ತಿದ್ದು, ಹಲವಾರು ಸಾಹಿತಿಗಳು ದಿನ ಬೆಳಗಾದರೆ ಜೀವವನ್ನು ಕೈಲ್ಲಿಡುಕೊಂಡು ಓಡಾಡುವ ಪರಿಸ್ಥಿತಿ ತಲೆದೋರಿದ್ದು, ಗೌರಿಲಂಕೇಶ್ ಹತ್ಯೆಯ ನಂತರ ಹಲವಾರು ಸಾಹಿತಿ, ಬರಹಗಾರರು ಮನೆಯನ್ನು ಬಿಡುವಾಗ ನೂರಾರು ಸಲ ಯೋಚಿಸುವಂತಹ ಪರಿಸ್ಥಿತಿ ತಲೆದೋರಿದೆ.

ಇತ್ತೀಚೆಗೆ ಹಿರಿಯ ಸಾಹಿತಿಯೊಬ್ಬರು ಸಿಕ್ಕಿ ಈಗಿನ ಕಿರುಕುಳದಿಂದ ನಮಗೆ, ಮನೆಯವರಿಗೆ ನೆಮ್ಮದಿಯೇ ಇಲ್ಲ, ಮನೆಯಲ್ಲಿ ನೀವು ಹೊರಗೆ ಹೋಗಬೇಡಿ, ಜಗತ್ತಿನ ಉಸಾಬರಿಯೆಲ್ಲ ನಿಮಗೇಕೆ ಮನೆಯಲ್ಲಿರಿ ಎಂದು ನಮ್ಮನ್ನು ಹೊರಗೆ ಬರದಂತಹ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.

ಇಷ್ಟೆಲ್ಲಾ ಇದ್ದರೂ, ಈ ನಾಡಿನ ಸಾಂಸ್ಕøತಿಕ ಮತ್ತು ಲಂಕೇಶರ ನಂತರ ನಾಡಿನ ಬಗ್ಗೆ ಕಳಕಳಿಯುಳ್ಳಂತಹ ಒಬ್ಬ ಹಿರಿಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವಂತಹ ಸಾಹಿತಿ ಬರಗೂರು ರಾಮಚಂದ್ರಪ್ಪನವರ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದಾಗ ಈ ನಾಡಿನಲ್ಲಿ ಪ್ರಗತಿಪರವಾಗಿ, ಸಾಂಸ್ಕøತಿಕವಾಗಿ ಗುರುತಿಸಿಕೊಂಡಿರುವ ರಾಜಕಾರಣಿಗಳು ಪಕ್ಷಬೇದ ಮರೆತು ರಾಮಚಂದ್ರಪ್ಪನವರ ಮೇಲಿನ ದೂರನ್ನು ರದ್ದು ಪಡಿಸಲು ಆಗ್ರಹಿಸಬೇಕಾಗಿತ್ತು, ವಿಧಾನಸಭೆಯಲ್ಲೂ ಇದು ಪ್ರತಿಧ್ವನಿಸಿ ಕೋಲಾಹಲ ಸೃಷ್ಠಿಸಬೇಕಿತ್ತು ಆದರೆ ಇದಾಗದೆ ಇಡೀ ಸಾಂಸ್ಕøತಿಕ ರಾಜಕಾರಣಿಗಳಿಗೆ ತುಕ್ಕು ಹಿಡಿದಿದೆ.

ಇದೂವರೆವಿಗೂ ಸದನದ ಹೊರಗೆಯಾಗಲಿ, ಒಳಗೆಯಾಗಲಿ ಧ್ವನಿ ಎತ್ತದಿರುವುದು ಜೆ.ಹೆಚ್,ಪಟೇಲ್, ಎಂ.ಪಿ.ಪ್ರಕಾಶ್, ಮುಂತಾದವರ ಕಾಲಕ್ಕೆ ಸಾಹಿತಿಗಳ ಪರವಾಗಿ ಧ್ವನಿ ಎತ್ತುವ ಸಾಂಸ್ಕøತಿಕ ರಾಜಕಾರಣ ಮುಗಿಯಿತೆ ಎಂದು ಯೋಚಿಸುವ ಕಾಲ ಬಂದಿದೆ.

ಚುನಾವಣೆಯ ಕಾಲದಲ್ಲಿ ಸಾಹಿತಿಗಳಿಗೆ ತಮ್ಮ ಪರವಾಗಿ ನಿಲ್ಲಿ ಎಂದು ಇದೇ ರಾಜಕಾರಣಿಗಳು ದುಂಬಾಲು ಬೀಳುತ್ತಾರೆ, ಆದರೆ ಇವರು ಗೆದ್ದ ಮೇಲೆ ಸಾಹಿತಿಗಳಿಗೆ ಬರಹಗಾರರಿಗೆ ಕಿರುಕುಳ, ಬೆದರಿಕೆ ಕರೆಗಳು, ಮೆಸೇಜ್‍ಗಳು ಬಂದಾಗ ಏಕೆ ಮಾತನಾಡುವುದಿಲ್ಲ ಎಂಬುದೇ ಈಗ ಕಾಡುತ್ತಿರುವ ಪ್ರಶ್ನೆಯಾಗಿದೆ.

ಬರಗೂರು ರಾಮಚಂದ್ರಪ್ಪನವರು 40 ವರ್ಷಗಳ ಹಿಂದೆ ‘ಭರತ ನಗರಿ’ ಎಂಬ ಕಾದಂಬರಿಯಲ್ಲಿ ರಾಷ್ಟ್ರಗೀತೆ ಧಾಟಿಯಲ್ಲೆ ಗೀತೆಯನ್ನು ಬರೆದಿದ್ದಾರೆ. ಈ ಗೀತೆಯನ್ನು ಬರೆದ ಕಾಲಘಟ್ಟವನ್ನು ನೋಡಿದರೆ ಬಂಡಾಯ ಸಾಹಿತ್ಯ, ದಲಿತ ಚಳುವಳಿ, ರೈತ ಚಳುವಳಿ ಉತ್ತುಂಗದಲ್ಲಿದಂತಹ ಕಾಲದಲ್ಲಿ ಬರೆದಿರುವಂತಹವುದು, ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸಾಹಿತ್ಯ ರಚನೆಯಾಗುತ್ತಿರುತ್ತದೆ.

ಇದನ್ನು ಮನಗಾಣದೆ ಯಾರೋ ದೂರು ನೀಡಿರುವುದನ್ನು ಪೊಲೀಸ್ ಇಲಾಖೆ ದಾಖಲಿಸಿಕೊಂಡಿದೆ, ಇದರ ವಿರುದ್ಧ ಈಗಿನ ಕಾಲಘಟ್ಟಕ್ಕೆ ಆ ಗೀತೆ ಅಪ್ರಸ್ತುತವಾಗಿದ್ದು, ಪ್ರಬುದ್ಧ ಸಾಹಿತಿಗಳು, ಚಲನಚಿತ್ರ ನಿರ್ದೇಶಕರು ಹಾಗೂ ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿಗಳನ್ನು ಪಡೆದಿದ್ದು, 82ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ವರು ಇಂತಹವರ ಮೇಲೆ ದೂರು ದಾಖಲಿಸಿರುವುದನ್ನು ಸಾಂಸ್ಕøತಿಕ ರಾಜಕಾರಣಿಗಳು ಖಂಡಿಸಬೇಕಿತ್ತು ಅದು ಆಗಲಿಲ್ಲ.

ಕೇಂದ್ರ ಕ.ಸಾ.ಪ.ಗೆ ಸಾಹಿತಿಗಳ ಪತ್ರ : ಬಹುಮುಖ್ಯವಾಗಿ ಸೃಜನಶೀಲ ಕೃತಿಯೊಂದನ್ನು ಹೇಗೆ ನೋಡಬೇಕೆಂಬ ಅಂಶವನ್ನು ಆದ್ಯತೆಯಾಗಿ ಪರಿಗಣಿಸಬೇಕು. ಕಥೆ, ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳ ಆಯಾ ಗುಣಧರ್ಮಕ್ಕೆ ಅನುಗುಣವಾಗಿ ಲೇಖಕರು ನಡೆ-ನುಡಿಗಳನ್ನು ಚಿತ್ರಣ ಮಾಡುತ್ತಾರೆ. ಅದೆಲ್ಲವೂ ಲೇಖಕರು ಬರೆದುದಂಬುವದು నిజ ಹಾಗೆಂದು ಪ್ರತಿಯೊಂದು ಪಾತ್ರದ ನಡೆ-ನುಡಿಗಳು ಲೇಖಕರದ್ದಾಗಿರುವುದಿಲ್ಲ. ಎಲ್ಲಾ ಪಾತ್ರಗಳ ನಡೆ-ನುಡಿ, ಸನ್ನಿವೇಶಗಳ ಹಾಗೂ ಸಂಯೋಜನೆಯಿಂದ ರೂಪಗೊಂಡದ್ದು, ಕೃತಿಯ ಅಂತಿಮ ಆಶಯ ಮಾತ್ರ ಲೇಖಕರದಾಗಿರುತ್ತದೆ. ಕೃತಿಯೊಂದರ ಬಗ್ಗೆ ನಿರ್ಣಯಕ್ಕೆ ಬರುವಾಗ ಈ ಅಂತಿಮ ಆಶಯವನ್ನμÉ್ಟೀ ಲೇಖಕರದೆಂದು ಪರಿಗಣಿಸಬೇಕಾಗುತ್ತದೆ ಎಂದು ನೂರಾರು ಸಾಹಿತಿಗಳು ಬರಗೂರು ರಾಮಚಂದ್ರಪ್ಪನವರ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಆಯುಕ್ತರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಭಿಪ್ರಾಯ ಕೇಳಿರುವುದಕ್ಕೆ ದೂರಿನ ಬಗ್ಗೆ ಅಭಿಪ್ರಾಯ ನೀಡುವಾಗ ಬರಗೂರು ರಾಮಚಂದ್ರಪ್ಪನವರ ಬಗ್ಗೆಯ ಹಲವಾರು ಅಂಶಗಳನ್ನು ಪರಿಗಣಿಸಲು ಆಗ್ರಹಿಸಿದ್ದಾರೆ.

ಬರಗೂರರು ‘ಭರತ’ನಗರಿ’ ಕಾದಂಬರಿಯನ್ನು ಬರೆದದ್ದು ಸುಮಾರು 40 ವರ್ಷಗಳ ಹಿಂದೆ ಅದೊಂದು ರಾಜಕೀಯ ವಿಡಂಬನೆಯ ರೂಪಕಾತ್ಮಕ ಕಾದಂಬರಿ ಎಂದು ಲೇಖಕರು ಹೇಳಿದ್ದಾರೆ. ಅದು ಅಂದಿನ ರಾಜಕೀಯ ಆಡಳಿತ ವ್ಯವಸ್ಥೆಯ ಹಿನ್ನೆಲೆಯಲ್ಲಿ ರಚನೆಯಾದ ಕಾದಂಬರಿ, ಅದರಲ್ಲಿ ಪಾತ್ರವೊಂದು ರಾಷ್ಟ್ರಗೀತೆಯ ದಾಟಿಯಲ್ಲಿ ಗೀತೆಯೊಂದನ್ನು ಕಟ್ಟಿ ಹಾಡಾಗಿದೆಯಾದರೂ, ರಾಷ್ಟ್ರಗೀತೆಯನ್ನಾಗಲಿ, ಯಾವುದೇ ಜಾತಿ ಧರ್ಮವನ್ನಾಗಲಿ, ಅವಮಾನಿಸಿಲ್ಲವೆಂದೂ, ಅಂತಹ ಉದ್ದೇಶವೇ ತಮಗರಿವಿಲ್ಲವೆಂದೂ ಬರಗೂರರು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಅಪಾರ್ಥವಾಗಿದ್ದರೆ ಜನರಲ್ಲಿ ವಿμÁದ ವ್ಯಕ್ತಪಡಿಸುತ್ತೇನೆಂದು ಬಹಿರಂಗ ಹೇಳಿಕೆನ್ನು ನೀಡಿದ್ದಾರೆ. ಇದನ್ನು ಪರಿಗಣಿಸುವುದು ಅಗತ್ಯ ಎಂದಿದ್ದಾರೆ.

ನಲವತ್ತು ವರುಷಗಳ ಹಿಂದಿನ ‘ಭರತ ನಗರಿ’ ಕಾದಂಬರಿಯೂ ಅಂದಿನ ಕಾಲಕ್ಕೆ ನೀಡಿದೆ. ಪ್ರತಿಕ್ರಿಯಾತ್ಮಕ ರೂಪಕವಾಗಿತ್ತೆಂದು ಭಾವಿಸಿದ ಬರಗೂರರು ಎಲ್ಲಾ ಕಾಲಕ್ಕೂ ಅನ್ವಯಿಸುವಂತೆ ಇರಬೇಕೆಂದು ಅದನ್ನು ಪರಿಷ್ಕರಿಸಿ ಹೊಸ ರೂಪ ನೀಡಿ 2021ರಲ್ಲಿ ಪ್ರಕಟಗೊಂಡ ‘ಸಮಗ್ರ ಸಾಹಿತ್ಯ ಸಂಪುಟಗಳಲ್ಲಿ (ಸಂಪುಟ 10) ಸೇರಿಸಿದ್ದಾರೆ. ಹೊಸ ಪರಿಷ್ಕøತ ಕೃತಿಯಲ್ಲಿ ರಾಷ್ಟ್ರಗೀತೆ ದಾಟಿಯ ಹಾಡು ಇಲ್ಲ, ಸಮತೆ, ಮಮತೆಗಳನ್ನು ಆಶಿಸುವ ಬೇರೊಂದು ಹಾಡು ಇದೆ. ಪರಿಷ್ಕೃತ ಹೊಸ ಕೃತಿ ಪ್ರಕಟವಾದ ಮೇಲೆ ಹಳೆಯ ಕೃತಿ ಅಪ್ರಸ್ತುತವಾಗುತ್ತದೆ. ಇದನ್ನು ಪರಿಗಣಿಸಬೇಕಾದ ಮುಖ್ಯ ಅಂಶವಾಗಿದೆ ಎಂದಿದ್ದಾರೆ.

ಈ ಎಲ್ಲಾ ಅಂಶಗಳನ್ನು ಆಧರಿಸಿ ಸದರಿ ದೂರು, ಅಪ್ರಸ್ತತವೆಂಬ ಅಭಿಪ್ರಾಯ ನೀಡಬೇಕೆಂದೂ ಸೃಜನಶೀಲ ಕೃತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಆಶಯವನ್ನು ಎತ್ತಿ ಹಿಡಿಯಬೇಕೆಂದೂ ನಾವು ಅಪೇಕ್ಷಿಸುತ್ತೇವೆ ಎಂದು ಸಾಹಿತಿಗಳು, ಬರಹಗಾರರು ಕೇಂದ್ರ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯನ್ನು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *