
ತುಮಕೂರು : ತುಮಕೂರು 11 ವಿಧಾನಸಭಾ ಕ್ಷೇತ್ರಗಳ ಒಟ್ಟು 2247932 ಮತದಾರರಿದ್ದು, ಜಿಲ್ಲಿಯಲ್ಲಿ 6428 ಮಹಿಳಾ ಮತದಾರರು ಹೆಚ್ಚಿದ್ದಾರೆ.
ತುಮಕೂರು ವಿಧಾನ ಸಭಾಕ್ಷೇತ್ರದಲ್ಲಿ ಪುರುಷ ಮತದಾರರು 127001 ಇದ್ದರೆ, ಮಹಿಳಾ ಮತದಾರರು 131848 ಮತದಾರರಿದ್ದು ಪುರುಷರಿಗಿಂತ 4847 ಮಹಿಳಾ ಮತದಾರು ಹೆಚ್ಚಿದ್ದಾರೆ.
ಮತದಾರರ ಪಟ್ಟಿಯಲ್ಲಿರುವಂತೆ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ ಇಂತಿದೆ.

ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಈವರೆಗಿನ ಮತದಾರರ ಪಟ್ಟಿಯನ್ವಯ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರ ಸೇರಿ 1120698 ಪುರುಷ, 1127126 ಮಹಿಳೆ ಹಾಗೂ 108 ತೃತೀಯ ಲಿಂಗಿಗಳು ಸೇರಿದಂತೆ 2247932 ಅರ್ಹ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.