ತುಮಕೂರು: ಮುಂದಿನ ತಿಂಗಳ ಮೇ 10 ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣಾ ಕಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿರುವ ನನಗೆ ತುಮಕೂರು ನಗರ ಮತದಾರರ ಆಶೀರ್ವಾದ ಸಿಗಲಿದೆ ಎಂದು ಜೆಡಿಎಸ್ ಮುಖಂಡ ನರಸೇಗೌಡ ತಮ್ಮ ಅಭಿಪ್ರಾಯ ಹಂಚಿಕೊಂಡರು.


ಮೈತ್ರಿ ನ್ಯೂಸ್‍ನೊಂದಿಗೆ ಮಾತನಾಡಿದ ಅವರಜು ಈ ಹಿಂದೆಯಾಗಲಿ, ಈ ಚುನಾವಣೆಯಲ್ಲಾಗಲಿ ನಾನು ಯಾರ ಬಳಿಯೂ ಒಂದು ನೈಯಾ ಪೈಸೆ ಹಣ ಪಡೆದಿಲ್ಲ, ನಾನು 30 ವರ್ಷಗಳ ಕಾಲ ಪಕ್ಷಕ್ಕೆ ದುಡಿದಿದ್ದೇನೆ.
ಆದರೆ ನಗರ ಜೆಡಿಎಸ್ ಅಭ್ಯರ್ಥಿಯಾಗಿರುವ ಗೋವಿಂದರಾಜು ನನ್ನ ಮತ್ತು ನಾನು ಪ್ರತಿನಿಧಿಸುವ ಒಕ್ಕಲಿಗ ಸಮುದಾಯದ ಬಗ್ಗೆ ಅಪಾರ ಪ್ರೀತಿ ಇದ್ದು, ತುಮಕೂರು ನಗರದಲ್ಲಿ ಇದುವರೆವಿಗೂ ಒಕ್ಕಲಿಗ ಸಮಾಜಕ್ಕೆ ಟಿಕೆಟ್ ನೀಡಿಲ್ಲ, ಇದು ಸಮುದಾಯದ ಸ್ವಾಭಿಮಾನದ ಪ್ರಶ್ನೆಯಾಗಿದೆ.ನನ್ನ ಹಿತೈಷಿಗಳು,ಬೆಂಬಲಿಗರು ನನ್ನ ಜೊತೆಗೆ ಇರಲಿದ್ದಾರೆ. ನಾನು ದೇವೇಗೌಡರ ಕೈಯಿಂದ ಬಿ ಫಾರಂ ಪಡೆದು ಚುನಾವಣೆಗೆ ನಿಲ್ಲುವಷ್ಟು ಯೋಗ ಪಡೆದಿಲ್ಲವೇನೋ ಎಂದು ಹೇಲಿದರು.
ನಾನು ಸಮಾಜ ಸೇವೆಯಿಂದ ರಾಜಕಾರಣಕ್ಕೆ ಬಂದಿದ್ದೇನೆ, 2 ದಶಕಗಳಿಂದ ಪಕ್ಷಕ್ಕೆ ದುಡಿದೆ, ಆ ಪಕ್ಷದ ನಾಯಕರಿಂದ ಬಿ ಫಾರಂ ಪಡೆಯುವ ಯೋಗ ನನಗೆ ಇರದೆ ಇರಬಹುದು ಎಂದರು.
ನಾನು ಯುವಕರೊಂದಿಗೆ ಪೆÇೀನ್, ಭೇಟಿ ಮಾಡುತ್ತಿದ್ದೇನೆ. ನರಸೇಗೌಡ ಕಣದಿಂದ ಹಿಂದೆ ಸರಿಯುತ್ತಾರೆ ಎನ್ನುತ್ತಿದ್ದರು, ನಾನು ಹಣ ಹೆಂಡ ಹಂಚುವುದಿಲ್ಲ, ನಾನು ಬಡವರಿಗೆ, ದೇವಸ್ಥಾನ ಗಳಿಗೆ ಸಹಾಯ ಮಾಡಿದ್ದೇನೆ ಎಂದರು.
ಯಾಕೆ ಗೆಲ್ಲುಸಬೇಕು, ಎಂದರೆ ತಳಮಟ್ಟದಿಂದ ಬಂದಿದ್ದೇನೆ, ಸಣ್ಣ ಗುತ್ತಿಗೆದಾರನಾಗಿ ಕೆಲಸ ಮಾಡಿರುವುದರಿಂದ ಎಲ್ಲ ಇಲಾಖೆ ಪರಿಚಯವಿದೆ. ಹೇಮಾವತಿ ನೀರು ಇಲ್ಲದಿದ್ದರೂ ನೀರು ಒದಗಿಸುವ ಯೋಜನೆ, ಕಾಂಪಟೇಷನ್ ಪರೀಕ್ಷೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಹಾಸ್ಟಲ್ ಸೌಕಭ್ಯ, ಸರ್ಕಾರಿ ಶಾಲೆಯನ್ನು ಕಾಪೆರ್Çರೇಟ್ ಶಾಲೆಗಳನ್ನಾಗಿ ಮಾಡಕಾಗುವುದು, ಕೈಗಾರಿಕೋದ್ಯಮಿ ಗಳು ಸರ್ಕಾರಿ ಶಾಲೆಗೆ ಬಸ್ ಸೌಕರ್ಯ ಒದಗಿಸಲು ಇಚ್ಛಾಶಕ್ತಿ ಇದೆ.
ಅಂಗನವಾಡಿ ಕೇಂದ್ರಗಳ ನ್ನು ಕಟ್ಟಲಾಗುವುದು ಎಂದರು.
ಯಾರನ್ನು ನಾನು ದೋಷಿಸುವುದಿಲ್ಲ. ನನಗೆ ಯಾರೂ ಉಮೇದುವಾರಿಕೆ ವಾಪಸ್ಸು ತೆಗೆಯಿರಿ ಎಂದು ಕೇಳಲಿಲ್ಲ, ರ್ಯಾಲಿಗೆ ಬನ್ನಿ ಎಂದμÉ್ಟೀ ಹೇಳಿದರು, ಆದರೆ ಬೆಳಿಗ್ಗೆ ವೇಳೆಗೆ ನರಸೇಗೌಡ ವಾಪಸ್ಸು ತೆಗೆಯುತ್ತಾರೆ ಎಂದು ಹಬ್ಬಿಸಿದರು ಅವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದರು.
ಬೊಮ್ಮನಹಳ್ಳಿ ಬಾಬು ನನ್ನ ಆರೋಗ್ಯ ಸರಿಯಿಲ್ಲದಾಗ ಬಂದು ಧೈರ್ಯ ತುಂಬಿದರು, ಅಟಿಕಾ ಬಾಬುರವರ ತಮ್ಮನಾಗಿ
ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದ್ದಾರೆ. ನನಗೆ ಯಾರನ್ನು ಸೋಲುಸಬೇಕೆಂದಿಲ್ಲ, ನಾನು ಗೆಲ್ಲುವುದು ಮುಖ್ಯ ಎಂದರು.
ತಾವ ಪಕ್ಷದವರೂ ಒಕ್ಕಲಿಗರಿಗೆ ಟಿಕೆಟ್ ಕೊಟ್ಟಿಲ್ಲ. ನನ್ನ ದುಡಿಮೆಗೆ ಪ್ರತಿಫಲ ಸಿಕ್ಕಿಲ್ಲ ಯಾರ ಹಂಗಿನಲ್ಲಿ ನಾನಿಲ್ಲ ಎಂದರು.
ಏಪ್ರಿಲ್ 19 ರ ರಾತ್ರಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್,ಉಪಮೇಯರ್ ನರಸಿಂಹಮೂರ್ತಿ,ಪಾಲಿಕೆ ಸದಸ್ಯ ಶ್ರೀನಿವಾಸ್,ಗೋವಿಂದರಾಜು ಮನೆಗೆ ಬಂದು ನಾಳೆ ನಾಮಪತ್ರ ಸಲ್ಲಿಕೆಗೆ ಬರಬೇಕೆಂದು ಮನವಿ ಮಾಡಿದ್ದರು. ಅವರ ಮನವಿಗೆ ಒಪ್ಪಿಗೆ ಸೂಚಿಸಿದ್ದೇನಷ್ಟೇ. ಆದರೆ ಬೆಳಗ್ಗೆ ಮಾಧ್ಯಮಗಳಲ್ಲಿ ನೋಡಿದರೆ ನರಸೇಗೌಡ ಮರಳಿಗೂಡಿಗೆ ಎಂಬ ತಲೆ ಬರಹದಲ್ಲಿ ಸುದ್ದಿ ಪ್ರಕಟವಾಗಿತ್ತು. ಇದರಿಂದ ಬೇಸತ್ತ ನಾನು ಇಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದೇನೆ.ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದರು.