ಡಾ.ಜಿ.ಪರಮೇಶ್ವರ್ ತಲೆಗೆ ಕಲ್ಲಿನ ಪೆಟ್ಟು ಅಘಾತಕಾರಿ-ಖಂಡನೀಯ

ತುಮಕೂರು : ಮಾಜಿ ಉಪಮುಖ್ಯಮಂತ್ರಿ, ಮಾಜಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ತಲೆಗೆ ಪೆಟ್ಟಾಗುವಂತೆ ಕಲ್ಲು ತೂರಿರುವುದು ನಿಜಕ್ಕೂ ಅಘಾತಕಾರಿ ಮತ್ತು ಇದು ಕೂಲಂಕುಶವಾಗಿ ತನಿಖೆಗೆ ಒಳಪಡಿಸಬೇಕಾದ ಘಟನೆಯಾಗಿದೆ.

ಒಬ್ಬ ಮಾಜಿ ಗೃಹಸಚಿವರು ನಾಮ ಪತ್ರ ಸಲ್ಲಿಸುವ ದಿನವೇ ಭದ್ರತಾ ಲೋಪ ಎದ್ದು ಕಾಣುತಿತ್ತು, ಅಂದು ಸಹ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿ, ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದರು.

ಡಾ.ಜಿ.ಪರಮೇಶ್ವರ್ ಅವರ ತಲೆಗೆ ಹೊಡೆದಿರುವ ಕಲ್ಲು.

ಅಂದೂ ಸಹ ಮಹಿಳಾ ಪೇದೆಗೆ ತಲೆಗೆ ಕಲ್ಲಿನಿಂದ

ಹೊಡೆದು ಗಾಯಗೊಳಿಸಲಾಗಿತ್ತು, ಇಷ್ಟಾದರೂ ಪೊಲೀಸರಾಗಲಿ, ಆಡಳಿತಾತ್ಮಕ ಸಿಂಬಂಧಿಯಾಗಲಿ ಮುಂಜಾಗ್ರತೆ ವಹಿಸದಿರುವುದು ಮೋಲ್ನೋಟಕ್ಕೆ ಭದ್ರತಾ ಲೋಪ ಎದ್ದು ಕಾಣಿಸುತ್ತದೆ.

ಯಾವುದಾದರೂ ಮಂತ್ರಿ, ಶಾಸಕ ಏನೂ ಆಗದ ಕ್ಷೇತ್ರದಲ್ಲಾಗಿದ್ದರೆ ಯಾರೋ ಆಗದವರು, ಪುಂಡು-ಪೋಕರಿಗಳ ಕೆಲಸವಿರಬಹುದು ಎಂದು ಹೇಳಬಹುದಾಗಿತ್ತು, ಆದರೆ ಮಾಜಿ ಉಪಮುಖ್ಯಮಂತ್ರಿ, ಮಾಜಿ ಗೃಹಮಂತ್ರಿಯವರಿಗೇ ಭದ್ರತೆ ಇಲ್ಲ, ಅವರ ತಲೆಗೆ ಕಲ್ಲು ಬಿದ್ದು ರಕ್ತ ಗಾಯವಾಯಿತು ಎಂದರೆ ಯಾವ ಸಂದೇಶವನ್ನು ಕೊಡಲು ಈ ಘಟನೆ ನಡೆದಿದೆ ಎಂಬುದನ್ನು ತೀವ್ರ ತನಿಖೆಗೆ ಒಳ ಪಡಿಸಬೇಕಾಗಿದೆ.


ಪರಮೇಶ್ವರ್ ಅವರು ಈ ಬಾರಿ ಗೆದ್ದರೆ ಒಂದು ಉನ್ನತ ಸ್ಥಾನ ಪಡೆಯುವ ಸಾಧ್ಯತೆಯು ಇದ್ದು, ಇಂತಹ ಕ್ಷುಲ್ಲಕ ಘಟನೆಗಳಿಂದ ಅವರು ಧೈರ್ಯಗೆಟ್ಟು ಪ್ರಚಾರದಲ್ಲಿ ಭಾಗವಾಹಿಸದಂತೆ ಮಾಡುವ ಹುನ್ನಾರವೇನಾದರೂ ಇದೆಯೇ ಎಂಬುದು ತಿಳಿಯ ಬೇಕಿದೆ.

ಈ ಹಿಂದೆಯೂ ಮಧುಗಿರಿಯಲ್ಲಿ ಪರಮೇಶ್ವರ್ ಅವರ ಮೇಲೆ ಹಲ್ಲೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು, ಮಾಜಿ ಗೃಹ ಸಚಿವರ ಮೇಲೆ ಈ ರೀತಿಯ ಕಲ್ಲು ತೂರಾಟ ನಡೆದಿರುವುದು ಖಂಡನೀಯ, ಪ್ರಜಾಪ್ರಭುತ್ವ ರಾಷ್ಟದಲ್ಲಿ ಪ್ರಜೆಗಳಿಂದ ನಡೆಯುವ ಪ್ರಜಾಪ್ರತಿನಿಧಿಯ ಆಯ್ಕೆಯ ಸಂದರ್ಭದಲ್ಲಿ ಇಂತಹ ಘಟನೆಗಳು ಎಲ್ಲೋ ಅಕಸ್ಮಿಕವಾಗಿ ನಡೆದಿದೆ ಎಂದು ಸುಮ್ಮನಿರಬಾರದು, ಇಂತಹ ಘಟನೆಗಳಿಗೆ ಮತ್ತೆ ಅವಕಾಶವಾಗಬಾರದು.


ಈ ಘಟನೆ ಯಾವ ರೀತಿಯದೆ ಆಗಿರಲಿ, ಇವರ ಎದುರಾಳಿ ಸ್ಪರ್ಧಿಗಳು ಖಂಡಿಸಬೇಕಾಗುತ್ತದೆ. ಇದು ಸಾಮಾನ್ಯ ಘಟನೆಯಲ್ಲ ಎಂದು ಪರಿಗಣಿಸಬೇಕಾಗಿದೆ.

ಇನ್ನು ಮುಂದಾದರೂ ಇಂತಹ ಘಟನೆಗಳು ನಡೆಯದಂತೆ ಚುನಾವಣಾ ಆಯೋಗ, ಪೊಲೀಸ್ ಇಲಾಖೆ ಗಮನ ಹರಿಸಲಿ
ಘಟನೆ ನಡೆದಿದ್ದು ಹೇಗೆ :-

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರಚಾರ ನಡೆಸುತ್ತಿದ್ದ ವೇಳೆ ಅವರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲ್ಲೂಕು ಭೈರನಹಳ್ಳಿಯಲ್ಲಿ ನಡೆದಿದೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಭೈರನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಅಭಿಮಾನಿಗಳು ಹೂವಿನ ಮಳೆಗರೆಯುವಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು ಪರಮೇಶ್ವರ ತಲೆಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.

ಗಾಯಗೊಂಡ ಪರಮೇಶ್ವರ್ ಅವರನ್ನು ಕೂಡಲೇ ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.

ಕಲ್ಲು ತೂರಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *