ಗುಬ್ಬಿ : ಇಡೀ ವಿಶ್ವವೇ ಒಪ್ಪುವಂತಹ ಸಂವಿಧಾನವನ್ನು ಡಾ. ಬಿ ಆರ್ ಅಂಬೇಡ್ಕರ್ ರವರು ಬರೆದುಕೊಟ್ಟಿದ್ದಾರೆ ಅದನ್ನು ಪಾಲಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಸಂವಿಧಾನ ದಿನ ಆಚರಿಸಿ, ಸಂವಿಧಾನದ ಪುಸ್ತಕಗಳಿಗೆ ಪುಷ್ಪ ನಮನ ಅರ್ಪಿಸಿ ಮಾತನಾಡಿದ ಅವರು, ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಂತಹ ಮಹಾತ್ಮ ಗಾಂಧಿಯವರು ಡಾ. ಬಿ.ಆರ್ ಅಂಬೇಡ್ಕರ್ ಈ ದೇಶದ ದೊಡ್ಡ ಆಸ್ತಿ ಆದರೆ ಅಂತಹ ಆದರ್ಶ ವ್ಯಕ್ತಿಗಳಿಗೆ ಅವಮಾನ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದ್ದು ಸಂವಿಧಾನವನ್ನೇ ಬದಲಾವಣೆ ಮಾಡುವುದಕ್ಕೆ ಮುಂದಾಗಿರುವುದು ಈ ದೇಶದ ದುರ್ದೈವ ಎಂದು ಬೇಸರವನ್ನು ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಜಿ. ಎಸ್ ಪ್ರಸನ್ನ ಕುಮಾರ್ ಮಾತನಾಡಿ ಸಂವಿಧಾನ ಆಶಯಕ್ಕೆ ನಾವೆಲ್ಲರೂ ಬದ್ಧವಾಗಿ ನಡೆದುಕೊಂಡಾಗ ಮಾತ್ರ ಡಾ. ಬಿ ಆರ್ ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನಕ್ಕೆ ಗೌರವ ಸಿಗುತ್ತದೆ. ಹಾಗಾಗಿ ಗುಬ್ಬಿ ತಾಲೂಕಿನ ಪ್ರತಿ ಮನೆ ಹಾಗೂ ಮನಗಳಿಗೆ ಸಂವಿಧಾನದ ಪೀಠಿಕೆಗಳನ್ನು ನೀಡುವ ಮೂಲಕ ಅದರಲ್ಲಿರುವ ಮಹತ್ವವನ್ನು ತಿಳಿಸುವಂತಹ ಕಾರ್ಯಕ್ಕೆ ನಾವು ಮುಂದಾಗಿದ್ದು ಇದನ್ನು ಓದಿಕೊಂಡಂತಹ ಮನುಷ್ಯ ಭ್ರμÁ್ಟಚಾರ, ಲಂಚಗೊಳಿತನ, ದ್ವೇಷ, ಅಸೂಯೆಗಳನ್ನು ಬಿಟ್ಟು ನಾನು ಭಾರತೀಯ ಎಂದು ಬದುಕುತ್ತಾನೆ ಹಾಗಾಗಿ ಈ ಸಂವಿಧಾನ ದಿನವನ್ನು ಪ್ರತಿ ಮನೆಯಲ್ಲಿಯೂ ಆಚರಣೆ ಮಾಡಬೇಕು ಆಗ ಮಾತ್ರ ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ರಾಜಕೀಯವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಅದನ್ನು ಬಿಟ್ಟು ಅಭಿವೃದ್ಧಿಯ ಹೆಸರಿನಲ್ಲಿ ರಾಜಕೀಯ ಮಾಡಿ ಆಗ ನಿಮ್ಮ ಅರ್ಹತೆ ಅರ್ಥವಾಗುತ್ತದೆ. ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟರೆ ಇಡೀ ದೇಶವೇ ಅದೋಗತಿಗೆ ಇಳಿಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ತಾತಯ್ಯ ಮಾತನಾಡಿ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ತಿಳಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷರಾದ ಸಲೀಂಪಾಶ ಅವರು ಕಾರ್ಯಕ್ರಮ ನಿರೂಪಿಸಿ, ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಬೋಧೀಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ನರಸಿಂಹಯ್ಯ,ನಿಂಬೆಕಟ್ಟೆಜ ಯಣ್ಣ, ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ಸಾದಿಕ್, ಮುಖಂಡರಾದ ಜಗನ್ನಾಥ್, ಶ್ರೀನಿವಾಸ್, ಚಿಕ್ಕರಂಗೇಗೌಡ, ಭಾಗ್ಯಮ್ಮ ರೂಪ, ಜಿ. ವಿ ಮಂಜುನಾಥ್, ಶಿವಾನಂದ ಸೇರಿದಂತೆ ಇನ್ನಿತರರು ಹಾಜರಿದ್ದರು.