ತುಮಕೂರು:ಮಹಿಳಾ ಸಂಘ ಸಂಸ್ಥೆಗಳು ಬ್ಯಾಂಕ್ ನಿಂದ ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಮಾಜಿ ಡಿಸಿಎಂ ಹಾಗೂ ಶಾಸಕರಾದ ಡಾ.ಜಿ ಪರಮೇಶ್ವರ್ ತಿಳಿಸಿದರು.
ತಾಲೂಕಿನ ಹೆಗ್ಗೆರೆ ಸಮೀಪದ ನಿವಾಸದಲ್ಲಿ ಮೆಳೆಹಳ್ಳಿಯ ಶ್ರೀ ಲಕ್ಷ್ಮೀ ಪ್ರಾಡಕ್ಟ್ ವತಿಯಿಂದ ಸ್ತ್ರೀ ಶಕ್ತಿ ಮಹಿಳೆಯರು ತಯಾರಿಸಿರುವ ಸಾಂಬಾರ್ ಪದಾರ್ಥಗಳನ್ನು ಬಿಡುಗಡೆ ಮಾಡಿದ ಬಳೀಕ ಮಾತನಾಡಿ, ಮಹಿಳೆಯರು ಬ್ಯಾಂಕ್ ನಿಂದ ನೀಡಲಾಗುತ್ತಿರುವ ಸಾಲ ಸೌಲಭ್ಯಗಳನ್ನು ಹಾಗೂ ಸರಕಾರದಿಂದ ಸಿಗುವಂತಹ ಸಬ್ಸಿಡಿ ಸೌಲಭ್ಯಗಳನ್ನು ಪಡೆದು ಸ್ವ ಉದ್ಯೋಗ ಕಟ್ಟಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಕರೆ ನೀಡಿದರು.
ಮಹಿಳೆಯರು ಸ್ವ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡಾಗ ಮಾತ್ರ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸಣ್ಣ,ಸಣ್ಣ ಉದ್ಯಮ ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಬದುಕು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.
ಮಾಜಿ ಎಪಿಎಂಸಿ ಮಾಜಿ ಸದಸ್ಯರಾದ ಚಂದ್ರಕಲಾ ಅವರು ಶ್ರೀ ಲಕ್ಷ್ಮೀ ಪುಡ್ ಪ್ರಾಡಕ್ಟ್ ನಲ್ಲಿ ಚಿರಂಜೀವಿ ಸ್ತ್ರೀ ಶಕ್ತಿ ಸ್ವಸಾಯ ಸಂಘದ ಸದಸ್ಯರು ತಯಾರಿಸಿರುವ ಅಪ್ಪಳ,ಉಪ್ಪಿನಕಾಯಿ,ಸೊಂಡಿಗೆ,ಪುಳಿಯೊಗರೆ ಪೌಡರು,ಸಾಂಬಾರ್ ಪದಾರ್ಥ ಸೇರಿದಂತೆ ಹಲವಾರು ಪ್ರಾಡಕ್ಟ್ ಗಳನ್ನು ಡಾ.ಜಿ ಪರಮೇಶ್ವರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸದಸ್ಯರಾದ ಚಂದ್ರಕಲಾ, ಚಿರಂಜೀವಿ ಸ್ತ್ರೀ ಶಕ್ತಿ ಸ್ವಸಾಯ ಸಂಘದ ಸದಸ್ಯರಾದ ನಾಗರತ್ನಮ್ಮ,ಸಿಂಧೂ,ಸಿದ್ಧಗಂಗಮ್ಮ,ಶಾರದ,ಪ್ರತಿಭಾ,ರಾಧ,ದಯಾಮಣಿ,ಸರೋಜಾ,ಜ್ಯೋತಿ,ಸಿದ್ದಮ್ಮ,ಚಂದ್ರಮ್ಮ,ಕರಿಯಮ್ಮ,ಜ್ಯೋತಿ ಮುಂತಾದವರು ಭಾಗವಹಿಸಿದ್ದರು.