ತುಮಕೂರು:ಕೇರಳದಿಂದ ಬುಲೆಟ್ ಬೈಕ್‍ನಲ್ಲಿ ಭಾರತ ಜೋಡೋ ಯಾತ್ರೆಯ ಜೊತೆಯಲ್ಲಿ ಆಗಮಿಸಿತ್ತಿರುವ ಇಬ್ಬರು ಗೆಳೆಯರು ಮೈತ್ರಿನ್ಯೂಸ್‍ನ ರಾಹುಲ್‍ಗಾಂಧಿಯವರು ಬಾಲಕನೊಬ್ಬನನ್ನು ತಬ್ಬಿಕೊಂಡಿರುವ ಆಕರ್ಷಕ ತಲೆಬರಹದ ಪತ್ರಿಕೆಯನ್ನು ನೋಡಿ ಸಂಪಾದಕ ವೆಂಕಟಾಚಲ.ಹೆಚ್.ವಿ.ರವರ ಬಳಿ ಬಂದು ಪತ್ರಿಕೆಯನ್ನು ಪಡೆದುಕೊಂಡು ಪರಿಚಯ ಮಾಡಿಕೊಂಡು ಪೋಟೋ ತೆಗೆಸಿಕೊಂಡು ಮೊಬೈಲ್ ನಂಬರ್‍ಗಳನ್ನು ನೀಡಿ ಹಸ್ತಲಾಘವ ಮಾಡಿದರು.
ಇವರು ಕೇರಳದಿಂದ ಜಮ್ಮುಕಾಶ್ಮೀರದವರೆವಿಗೂ ಬುಲೆಟ್‍ನಲ್ಲಿಯೇ ತೆರಳುವುದಾಗಿ ತಿಳಿಸಿದರಲ್ಲದೆ, ಕರ್ನಾಟಕದ ಜನತೆ ಜೊಡೋ ಯಾತ್ರೆಗೆ ಉತ್ತಮವಾಗಿ ಪ್ರತಿಕ್ರಿಯಿಸಿರುವುದಕ್ಕೆ ಖುಷಿ ಪಟ್ಟರು. ರಾತ್ರಿ ವೇಳೆ ರಾಹುಲ್ ಅವರ ಜೊತೆ ತಂಗುವುದಾಗಿ ತಿಳಿಸದ ಅವರು ಕೇರಳದಿಂದ ನೂರಕ್ಕೂ ಹೆಚ್ಚು ಮಂದಿ ಯಾತ್ರೆಯ ಜೊತೆ ಬಂದಿರುವುದಾಗಿ ತಿಳಿಸಿದರು.
ಅವರು ಸಂಪಾದಕರನ್ನು ಪ್ರೀತಿಯಿಂದ ತಬ್ಬಿಕೊಂಡು ತೋರಿಸಿದ ಪ್ರೀತಿ ಭಾರತದ ಐಕ್ಯತೆಯನ್ನು ಎತ್ತಿ ತೋರಿಸಿತು. ಅಷ್ಟೆ ಅಲ್ಲದೆ ಕೇರಳಕ್ಕೆ ಬನ್ನಿ ಎಂದೂ ಸಹ ಆಹ್ವಾನವಿತ್ತು ತಮ್ಮ ಬೈಕ್ಕಿನಲ್ಲಿ ದೊಡ್ಡ ಪ್ಲಾಗನ್ನು ಹಾರಿಸುತ್ತಾ ಮುಂದೆ ಸಾಗಿದರು.