ಪಠ್ಯಕ್ರಮ ವರ್ತಮಾನಕ್ಕೆ ಪೂರಕವಾಗಿರಲಿ: ಕುಲಪತಿ

ತುಮಕೂರು: ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ಪಠ್ಯಕ್ರಮ ಬದಲಾಯಿಸಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ಘಟಕವು ಇಂಗ್ಲಿಷ್ ಅಧ್ಯಯನ ಮಂಡಳಿಯ ಸಹಕಾರದೊಂದಿಗೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪಠ್ಯಕ್ರಮ ಬದಲಾವಣೆ ಕುರಿತು ಸೋಮವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

2004ರಿಂದ 2014ರ ವರೆÀಗೂ ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿರಲಿಲ್ಲ. ಕೆಲವು ವರ್ಷಗಳ ಹಿಂದೆ ಪಠ್ಯಕ್ರಮ ಬದಲಾವಣೆಗೆ ಪೂರ್ಣ ಸ್ವಾತಂತ್ರ್ಯವಿತ್ತು. ಈಗ ಶೇ. 30ರಷ್ಟು ಪಠ್ಯಕ್ರಮ ಬದಲಾವಣೆಗೆ ಅವಕಾಶವಿದೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ವಿಕಾಸಕ್ಕಾಗಿ ಪಠ್ಯಕ್ರಮದ ಬದಲಾವಣೆ ಹಾಗೂ ಉನ್ನತೀಕರಣದ ಅವಶ್ಯಕತೆಯಿದೆ ಎಂದರು.

ಬದಲಾದ ಪಠ್ಯಕ್ರಮದ ಪಠ್ಯಪುಸ್ತಕದ ಮುದ್ರಣ ತಡವಾದರೆ ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಮಾಡುವ ವ್ಯವಸ್ಥೆ ಕೈಗೊಳ್ಳೋಣ. ಅಧ್ಯಯನ ಸಾಮಗ್ರಿಗಳು ಸಿದ್ಧವಾದ ನಂತರ ಬದಲಾದ ಪಠ್ಯಕ್ರಮದ ಮುದ್ರಣವಾಗಲಿ ಎಂದು ಹೇಳಿದರು.

ವಿವಿ ಕುಲಸಚಿವೆ ನಾಹಿದಾ ಜûಮ್, ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ವಿಭಾಗದ ಸಂಯೋಜಕ ಪ್ರೊ. ಎಚ್. ಕೆ. ಶಿವಲಿಂಗಸ್ವಾಮಿ, ಪಲ್ಲಗಟ್ಟಿ ಅಡವಪ್ಪ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಪ್ರಾಧ್ಯಾಪಕ ಡಾ. ಉದಯರವಿ ಎಸ್. ವಿ., ದಂಡಿನಶಿವರ ಸ.ಪ್ರ.ಕಾ. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಭಾಸ್ ಪಂಡಿತ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *