ಮಧುಗಿರಿ : ವಿಧಾನಸೌಧದಲ್ಲಿ ನೆಲಮಂಗಲ ತಾಲ್ಲೂಕು, ಮಣ್ಣೆಗ್ರಾಮ, ತುಮಕೂರು ನಗರದ ಕ್ಯಾತ್ಸಂದ್ರ ಎಂದು ಪ್ರಮಾಣ ವಚನ ಸ್ವೀಕರಿಸುವ ಬದಲು ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಹೋಬಳಿ ಚಿಕ್ಕಮಾಲೂರು ಲಿಂಗಪ್ಪನ ಮಗ ನಾಗರಾಜು ಎಂದು ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಬಿಜೆಪಿ ಸಂಭಾವ್ಯ ಅಭ್ಯರ್ಥಿ ಎಲ್.ಸಿ.ನಾಗರಾಜು ಹೇಳಿದರು.
ಮಧುಗಿರಿ ತಾಲ್ಲೂಕಿನವರು ಶಾಸಕರಾಗಿ 50 ವರ್ಷಗಳಿಗಿಂತ ಹೆಚ್ಚಾಗಿದ್ದು, ನಮ್ಮ ತಾಲ್ಲೂಕಿನವರು ಶಾಸಕರಾಗಬೇಕು ಎಂಬುದೇ ನನ್ನ ಅಭಿಲಾಷೆ, ಎರಡು ವರ್ಷಗಳಿಂದ ಮಧುಗಿರಿ ತಾಲ್ಲೂಕಿನಲ್ಲಿ ರಾಜಕೀಯವಾಗಿ ಓಡಾಡುತ್ತಿದ್ದೇನೆ, ಇದಕ್ಕಾಗಿ ನನ್ನ ಸರ್ಕಾರಿ ಹುದ್ದೆಯನ್ನು ತ್ಯಾಗ ಮಾಡಿ ಬಂದಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಯಾಕೆ ಮಧುಗಿರಿಯವರೇ ಶಾಸಕರಾಗಬೇಕೆಂದರೆ, ನನ್ನ ತಾಲ್ಲೂಕಿನ ಯುವಕರು, ಜನ, ಉದ್ಯೋಗ ಹರಸಿ ಬೆಂಗಳೂರಿನಂತಹ ರಾಜಧಾನಿಗೆ ಹೋಗುವುದನ್ನು ತಡೆಯಬೇಕು, , ಸ್ಥಳೀಯವಾಗಿ ದುಡಿಯಲು, ತಾಲ್ಲೂಕಿನಲ್ಲೇ ಗಾರ್ಮೇಂಟ್ಸ್ ಉದ್ಯೋಗ,ಆರೋಗ್ಯ, ಶಿಕ್ಷಣ ದೊರಕಿಸಿ ಕೊಡಲು ಮಧುಗಿರಿ ತಾಲ್ಲೂಕಿನಲ್ಲಿ ಜನ್ಮವೆತ್ತಿರುವ ಈ ಭೂಮಿಯ ವಾರಸುದಾರರು, ನೆಲದ ಜಲ, ಗಾಳಿ ಕುಡಿದವರಿಗೆ ಪ್ರಭುತ್ವ ಧಕ್ಕಬೇಕಾ ಆಥವಾ ಬೆಂಗಳೂರು- ತುಮಕೂರಿನವರಿಗೆ ಧಕ್ಕಬೇಕಾ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ, 2023ರಲ್ಲಿ ನಮ್ಮ ಜನರ ಪ್ರಭುತ್ವವನ್ನು ಈ ತಾಲ್ಲೂಕಿನ ಮಕ್ಕಳಿಗೆ ಸಿಗಬೇಕೆಂಬುದೇ ನನ್ನ ಆಶಯ ಎಂದರು.
ಕೆಲವರು ಮಧುಗಿರಿ ಬೆಟ್ಟಕ್ಕೆ ಹಗ್ಗ ಹಾಕುತ್ತೇವೆ, ಜಿಲ್ಲೆ ಮಾಡುತ್ತೇವೆ ಎನ್ನುತ್ತಾರೆ ಇವೆಲ್ಲಾ ಸಹಜ ಪ್ರಕ್ರಿಯೆ ಕಾರ್ಯಕ್ರಮಗಳು, ಆಡಳಿತಾತ್ಮಕ ಕಾರ್ಯಗಳು, ಅದು ಸರ್ಕಾರದ ಕೆಲಸ, ನಾನು ಈ ನೆಲದ ಮಗನಾಗಿದ್ದು, ಇಡೀ ಕ್ಷೇತ್ರದ ಪಂಚಾಯ್ತಿಗಳ ಮನೆ ಮನೆಗೆ ಭೇಟಿ ನೀಡಿ, ಪೆನ್‍ಷನ್, ಶಾಲಾ ಕಟ್ಟ, ಶುದ್ಧಕುಡಿಯುವ, ಬಸ್ ಸೌಕರ್ಯ ಎಲ್ಲಾ ಸಮಸ್ಯೆಗಳನ್ನು ಆಲಿಸಿ ಪಟ್ಟಿ ಮಾಡಿ ಅಧಿಕಾರಿಗಳನ್ನು ಭೇಟಿ ಮಾಡಿ ಬಗೆಹರಿಸಲು ಮುಂದಾಗುತ್ತೇನೆ ಎಂದರು.
ನಾನೊಬ್ಬ ಜೀತಗಾರನ ಮಗನಾಗಿದ್ದು ಕಷ್ಟ ಪಟ್ಟು ಅಕ್ಷರ ಕಲಿತಿದ್ದೇನೆ, ನನಗೆ ಈ ಮಧುಗಿರ ಬೆಂಗಾಡಿನ ಜನರ ಕಷ್ಟ ಗೊತ್ತಿದೆ, ಆದ್ದರಿಂದ ನಮ್ಮ ತಾಲ್ಲೂಕಿನ ಮಕ್ಕಳು ಹೈಟೆಕ್ ಶಾಲೆಯಲ್ಲಿ ಓದಬೇಕು, ಜನರ ಆರೋಗ್ಯಕ್ಕಾಗಿ ಹೈಟೆಕ್ ಆಸ್ಪತ್ರೆ ಜೊತೆಗೆ ಪ್ರತಿ ಹೋಬಳಿಯಲ್ಲೂ ಉನ್ನತ ಶ್ರೇಣಿಯ ಆಸ್ಪತ್ರೆಗಳು ಪ್ರಾರಂಭಿಸಬೇಕೆಂಬ ಕನಸ್ಸಿದೆ ಎಂದರು.
ನಮ್ಮ ಜಿಲ್ಲೆಯ ಮಕ್ಕಳು ಓದಿ ವಿದೇಶಕ್ಕೆ ಹೋದರೆ ಅದು ನಮ್ಮ ತಾಲ್ಲೂಕಿಗೆ ಹೆಮ್ಮ, ನಮ್ಮ ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಿ ಇಲ್ಲಿನ ಯುವಕ-ಯುವತಿಯರಿಗೆ ಉದ್ಯೋಗ ನೀಡಲಾಗುವುದು, ಬೇರೆಯವರಂತೆ, ಸೀರೆ ಹಂಚುವುದು, ಹಬ್ಬಕ್ಕೆ ಕುರಿ-ಕೋಳಿ ಹಂಚುವುದಿಲ್ಲ ಮಾಡುವುದಿಲ್ಲ, ಹೆಮ್ಮೆಯಿಂದ ದುಡಿಯುವಂತೆ ಮಾಡಲಾಗುವುದು ಎಂದರು.
ನಿರಂತರವಾಗಿ ಕೃಷಿಗೆ ಶಾಶ್ವತವಾದ ನೀರಾವರಿ ಒದಗಿಸಲು ಭ್ರದ ಮೇಲ್ದಂಡೆ ಯೋಜನೆ ತರಲು ಶ್ರಮಿಸುತ್ತೇನೆ,ಪಶು ಸಂಗೋಪನೆಗೆ ಒತ್ತು ನೀಡಿ ಮೊಬೈಲ್ ಪಶು ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದ ಆವರು, ನಮ್ಮ ಕನಸೇನೆಂದರೆ ಈ ತಾಲ್ಲೂಕಿನಲ್ಲಿ ಬದುಕಿರುವವರೆಗೂ ಈ ತಾಲ್ಲೂಕಿನ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂಬುದು ನನ್ನ ಆಸೆ, ಅದಕ್ಕಾಗಿ ನನ್ನ ಜೀವವಿರುವ ತನಕ ಹೋರಾಡುತ್ತೇನೆ ಎಂದರು.
ಪ್ರಧಾನಿ ಮೋದಿಯವರು ದೇಶವನ್ನು ಅಭಿವೃದ್ಧಿಯತ್ತ ಕೊಡ್ಯೋತ್ತಿರುವುದುನ್ನು ನೋಡಿ ಬಿಜೆಪಿಗೆ ಬಂದಿದ್ದೇನೆ ಎಂದ ಆವರು, ನಮ್ಮ ಪಕ್ಷದ ತೀಮಾನದಂತೆ ನಾನು ನಡೆದುಕೊಳ್ಳಲಿದ್ದೇನೆ, ಈ ಬಾರಿ ತಾಲ್ಲೂಕಿನ ಮಗನೊಬ್ಬನನ್ನು ನಮ್ಮ ತಾಲ್ಲೂಕಿನ ಜನ ನನನು ಆಯ್ಕೆ ಮಾಡುತ್ತಾರೆ, ನಾನು ಕನಸ್ಸನ್ನು ಭಿತ್ತುವುದಿಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ, 2023 ಮತ್ತು 2028ಕ್ಕೆ ನಮ್ಮ ತಾಲ್ಲೂಕಿನವರೇ ಶಾಸಕರಾಗಬೇಕು, ಬೇರೆ ತಾಲ್ಲೂಕಿನವರು ಇಲ್ಲಿ ಶಾಸಕರಾಗುವುದನ್ನು ಕೊನೆಗಾಣಿಸಲು ನಮ್ಮ ತಾಲ್ಲೂಕಿನ ಜನ ಪಣ ತೊಟ್ಟಿದ್ದಾರೆ ಎಂದರು.