ಮಾ.20 ವಿಕಲಚೇತನ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಉದ್ಘಾಟನೆ

ತುಮಕೂರು:ಬೆಳಗುಂಬದ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಡೆಯುತ್ತಿರುವ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಬಳಿ ಇನ್ಫೋಸಿಸ್ ವತಿಯಿಂದ ನಿರ್ಮಿಸಿರುವ ವಿಕಲಚೇತನರ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರದ ಉದ್ಘಾಟನೆಯನ್ನು ಮಾ.20 ರ ಬೆಳಗ್ಗೆ 10:30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ತುಮಕೂರು ಜಿಲ್ಲಾ ಸಭಾಪತಿ ಟಿ.ಬಿ.ಶೇಖರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಸುಮಾರು 10*150 ಅಡಿ ಜಾಗದಲ್ಲಿ ವಿಕಲಚೇತನ ಮಕ್ಕಳಿಗೆ ವಿವಿಧ ರೀತಿಯ ಅವಶ್ಯಕ ತರಬೇತಿ ನೀಡಿ,ಅವರು ಕುಟುಂಬಕ್ಕೆ ಹೊರೆಯಾಗದೆ,ಸ್ವಾವಲಂಬಿ ಜೀವನ ನಡೆಸುತಾಗಬೇಕು ಎಂಬ ಉದ್ದೇಶದಿಂದ ರೆಡ್‍ಕ್ರಾಸ್ ಸಂಸ್ಥೆಗೆ ಇನ್ಫೋಸಿಸ್ ಸಂಸ್ಥೆಯವರು ತಮ್ಮ ಸಿ.ಎಸ್.ಆರ್.ನಿಧಿಯಿಂದ ಈ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದು, ಮುಂದಿನ 5 ವರ್ಷಗಳ ಕಾಲ ನಿರ್ವಹಣೆ ಸಹ ಮಾಡಲಿದ್ದಾರೆ ಎಂದರು.

ಮಾರ್ಚ್ 20 ರಂದು ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಅರಗಜ್ಞಾನೇಂದ್ರ ಅವರು ಉದ್ಘಾಟನೆ ಮಾಡುವರು. ಅಧ್ಯಕ್ಷತೆಯನ್ನು ಶಾಸಕ ಡಿ.ಸಿ.ಗೌರಿಶಂಕರ್ ವಹಿಸುವರು, ಮುಖ್ಯ ಅತಿಥಿಗಳಾಗಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಡಾ.ಸಿ.ಎನ್.ಆಶ್ವಥ್‍ನಾರಾಯಣ,ಸಂಸದ ಜಿ.ಎಸ್.ಬಸವರಾಜು,ಇನ್ಫೋಸಿಸ್ ಪ್ರತಿμÁ್ಠನದ ಧರ್ಮದರ್ಶಿ ಸುನೀಲ್ ಕುಮಾರ್ ಧಾರೇಶ್ವರ್,ಬೆಳಗುಂಬ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್,ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕರ್ನಾಟಕದ ಸಭಾವತಿ ವಿಜಯಕುಮಾರ್ ಪಾಟೀಲ್ ಶಾವಂತಗೇರ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್.ಪಿ.ರಾಹುಲ್ ಕುಮಾರ್ ಶಹಪುರವಾಡ, ಸಿಒಓ ಡಾ.ಕೆ.ವಿದ್ಯಾಕುಮಾರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಟಿ.ಬಿ.ಶೇಖರ್ ಉಪಸ್ಥಿತರಿರು ವವರು.ಇದೇ ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್ ಸಂಸ್ಥೆಯ ಹಿರಿಯ ಚೇತನಗಳಾದ ಎಂ.ವಿ.ರಾಮಚಂದ್ರ, ಡಾ.ಸಿ.ಜಯರಾಮ ರಾವ್,ಟಿ.ಎಂ.ಸ್ವಾಮಿ,ಎಂ.ಬಸವಯ್ಯ,ಹೆಚ್.ಜಿ.ಚಂದ್ರಶೇಖರ್,ಸಿ.ವಿ.ಮಹದೇವಯ್ಯ,ಎಸ್.ನಾಗಣ್ಣ ಅವರುಗಳನ್ನು ಅಭಿನಂದಿಸÀ ಲಾಗುವುದು ಎಂದರು.

ರೆಡ್ ಕ್ರಾಸ್ ಕೌಶಲ್ಯಾಭಿವೃದ್ದಿ ಸಮಿತಿಯ ಅಧ್ಯಕ್ಷ ಬಸವರಾಜು,ರೆಡ್ ಕ್ರಾಸ್ ರಾಷ್ಟ್ರೀಯ ಮಂಡಳಿಯ ಸದಸ್ಯ ಎಸ್.ನಾಗಣ್ಣ
ರೆಡ್‍ಕ್ರಾಸ್ ಸಂಸ್ಥೆಯ ನಿರ್ದೇಶಕ ಕೃಷ್ಣಯ್ಯ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ವೇಣುಗೋಪಾಲ್,ಲೋಕೇಶ್ ಟಿ.ಆರ್., ಶಿವಕುಮಾರ್ ಕೆ.ಜಿ. ಜಿ.ವಿ.ವಾಸುದೇವ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *