ತುಮಕೂರು : ಮೈತ್ರಿನ್ಯೂಸ್ ದಸರಾ ಸಮಿತಿಯಿಂದ ಪೌರಕಾರ್ಮಿಕರಿಗೆ ಅವಮಾನ ಎಂಬ ವರದಿಯಿಂದ ಜಿಲ್ಲಾಡಳಿತ ಮತ್ತು ದಸರಾ ಸಮತಿ ಎಚ್ಚತ್ತುಕೊಂಡು ಪೌರಕಾರ್ಮಿಕರಿಗೆ ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರಿಂದ ಸನ್ಮಾನಿಸಿ, ಗೌರವಿಸಲಾಯಿತು.

ಅಕ್ಟೋಬರ್ 20ರ ಮಂಗಳವಾರ ದಸರಾ ಸಮಿತಿಯಿಂದ ಪೌರಕಾರ್ಮಿಕರಿಗೆ ಸನ್ಮಾನ ಎಂದು ಕರೆಸಲಾಗಿತ್ತು, ಆದರೆ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಕೆಲ ಅಧಿಕಾರಿ ವರ್ಗ, ರಾಜಕಾರಣಿಗಳಿಗೆ ಸನ್ಮಾನಿಸಿ ಸಾಕು ಬಿಡ್ರಿ ಎಂದು ವೇದಿಕೆ ಇಳಿದು ಹೊರಟು ಹೋಗಿದ್ದರು, ಇದರಿಂದ ನೊಂದುಕೊಂಡ ಪೌರಕಾರ್ಮಿಕರು ನಾವು ಹೇಲು-ಉಚ್ಚೆ ಬಾಚುವವರು ನಮ್ಮನ್ನು ಮುಟ್ಟಿಸಿಕೊಂಡರೆ ಸಚಿವರ ಕೈಗಳು ಕೊಳಕಾಗುತ್ತವೆ ಎಂದು ಅಳಲು ತೋಡಿಕೊಂಡಿದ್ದನ್ನೇ ಮೈತ್ರಿನ್ಯೂಸ್ ವರದಿ ಮಾಡಿತ್ತು.

ಈ ವರದಿಯು ದಸರಾ ಸಮಿತಿ, ಜಿಲ್ಲಾಡಳಿತ ಮತ್ತು ಸಚಿವರಿಗೆ ಇರಿಸು-ಮುರಿಸು ಮತ್ತು ಮುಜಗರ ತಂದ ಹಿನ್ನೆಲೆಯಲ್ಲಿ ದಸರಾದ ಕೊನೆಯ ದಿನವಾದ ಅಕ್ಟೋಬರ್ 21ರಂದು ಅಂಬಾರಿ ಮೆರವಣಿಗೆ ಮುಗಿದ ಕೂಡಲೇ ಸ್ವತಃ ಸಚಿವರೇ ಪೌರಕಾರ್ಮಿಕರನ್ನು ಖುದ್ದಾಗಿ ಭೇಟಿ ಮಾಡಿ ಅವರ ಅಳಲನ್ನು ಆಲಸಿ ವೇದಿಕೆಗೆ ಕರೆದು ಶಾಲು ಹೊದಿಸಿ, ದಸರಾ ಫಲಕ ನೀಡಿ ಗೌರವ ಸಲ್ಲಿಸಿದರು.
ಮೈತ್ರಿನ್ಯೂಸ್ ಪೌರಕಾರ್ಮಿಕರಿಗೆ ಅವಮಾನ ಮತ್ತು ಪತ್ರಕರ್ತರಿಗೆ ವರದಿ ಮಾಡಲು ಆಸನ ಅವ್ಯವಸ್ಥೆ ಬಗ್ಗೆ ಖಡಕ್ಕಾದ ವರದಿ ಜಿಲ್ಲಾಡಳಿತ ಮತ್ತು ಸಚಿವರಿಗೆ ಮಜುಗರ ಮತ್ತು ಬೇರೆ ಅರ್ಥ ಬರಲಿದೆ ಎಂಬುದನ್ನು ಮನನ ಮಾಡಿಕೊಂಡು ಎಚ್ಚೆತ್ತು ಪೌರಕಾರ್ಮಿಕರಿಗೆ ಮತ್ತು ಪತ್ರಕರ್ತರಿಗೂ ಸನ್ಮಾನ, ಇದಲ್ಲದೆ ಕೊನೆಯ ದಿನ ಪತ್ರಕರ್ತರಿಗೆ ವ್ಯವಸ್ಥಿತವಾದ ಆಸನದ ವ್ಯವಸ್ಥೆ, ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾಡಳಿತವು ದಸರಾ ಹಬ್ಬವನ್ನು ನಾಡ ಹಬ್ಬವನ್ನಾಗಿ ಆಚರಿಸುವಾಗ ಪ್ರಜ್ಞಾವಂತರು, ಚಿಂತಕರು ಮತ್ತು ಸಾಮಾಜಿಕವಾಗಿ ಕಳಕಳಿ ಇರುವವರನ್ನು ದಸರಾ ಸಮಿತಿಗಳಿಗೆ ಆಯ್ಕೆ ಮಾಡಿಕೊಂಡು ವ್ಯವಸ್ಥೆ ಹೇಗಿರಬೇಕು, ದಸರಾ ಆಚರಣೆಗೆ ಸಂಪನ್ಮೂಲವನ್ನು ಯಾವ ಮೂಲದಿಂದ, ಹೇಗೆ ಕ್ರೂಡಿಕರಿಸಬೇಕೆಂಬುದನ್ನು ಸುಧೀರ್ಘವಾಗಿ ಚರ್ಚಿಸಿ ಲೋಪ-ದೋಷಗಳಿಲ್ಲದೆ ಕಾರ್ಯಕ್ರಮಗಳು, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮತ್ತು ದಸರಾ ಮೆರವಣಿಗೆಯನ್ನು ಚೆಂದವಾಗಿ ಮಾಡಬೇಕು.
ದಸರಾ ಸಮಿತಿಗಳಿಗೆ ದಸರಾ ಎಂದರೇನು, ಸಾಂಸ್ಕøತಿಕ ಕಾರ್ಯಕ್ರಮವೆಂದರೇನು, ದಸರಾ ಕಾರ್ಯಕ್ರಮಕ್ಕೆ ಎಂತಹವರನ್ನು ಕರೆಸಬೇಕು, ಜಿಲ್ಲೆಯ ಪರಂಪರೆಯನ್ನು ಎತ್ತಿ ಹಿಡಿಯುವಂತಹ, ಜಿಲ್ಲೆಯ ಕಲಾವಿದರು, ಸಾಹಿತಿಗಳಿಗೆ ಮೇರು ಪಂಕ್ತಿ ಇರುವಂತ ನೋಡಿಕೊಳ್ಳಬೇಕು, ಯಾರೋ ಹೇಳಿದ್ದಕ್ಕೆ ಗೋಣು ಹಾಕುವವರನ್ನು ದಸರಾ ಸಮಿತಿಗೆ ಹಾಕಿಕೊಂಡರೆ ಇನ್ನೇನು ಆಗುತ್ತದೆ, ಕುದುರೆ ಹೋಗಿ ಕತ್ತೆಯಾಗುತ್ತದೆ, ಆಗ ಎಲ್ಲಾ ವ್ಯವಸ್ಥೆಗಳು ಅಸ್ತವ್ಯಸ್ತವಾಗಲಿವೆ.
ಈ ಬಾರಿಯ ದಸರಾದಲ್ಲಿ ಜಿಲ್ಲೆಯ ಕಲಾವಿದರುಗಳಿಗೆ, ಸಾಹಿತಿಗಳಿಗೆ ಮನ್ನಣೆ ಸಿಗದಿರುವುದು ನೋವಿನ ಸಂಗಾತಿಯಾಗಿದೆ, ತುಮಕೂರು ಜಿಲ್ಲೆಯವರಿಗೇ ಅವಕಾಶ ಸಿಗದಿದ್ದರೆ ಈ ದಸರಾ ಆಚರಿಸಿ ಪ್ರಯೋಜನವೇನು ಎಂದು ಜಿಲ್ಲೆಯ ಸಾಹಿತಿಗಳು ಮತ್ತು ಚಿಂತಕರು ಪ್ರಶ್ನೆ ಮಾಡುತ್ತಿದ್ದಾರೆ.
ದಸರಾವೆಂದರೆ ನಾಡಿನ ಜನ ಆಚರಿಸುವುದು, ಗೆದ್ದು ಮಂತ್ರಿಗಳಾದವರು ರಾಜರಂತೆ ಮೆರೆಯಲು, ಅಧಿಕಾರಿಗಳು ಮೆರೆಯಲು ಮಾಡುವಂತಹವುದಲ್ಲ, ಈ ದಸರಾದಲ್ಲಿ ರಾಜಕಾರಣಿಗಳು, ಅವರ ಚೇಲಾಗಳು, ಅಧಿಕಾರಿಗಳ ದರಾಬಾರು-ಕಾರುಬಾರು ಜೋರಾಗಿ ನಡೆಯಿತು, ಹಾಗಾದರೆ ಇದೊಂದು ನಾಡ ಹಬ್ಬ ಎಂದು ಹೇಳಲು ಹೇಗೆ ಸಾಧ್ಯವಾಗುತ್ತದೆ, ದಸರಾವನ್ನು ಉದ್ಘಾಟಿಸಲು ಜಿಲ್ಲೆಯ ಯಾವ ಮೇರು ಸಾಹಿತಿಗಳು, ಕವಿಗಳು ಇರಲಿಲ್ಲವೆ! ಜಿಲ್ಲೆಯ ಪರಂಪರೆಯನ್ನು ಎತ್ತಿ ಹಿಡಿಯುವ ಸಾಹಿತಿಗಳು, ಅನ್ನ ಕೊಡುವ ರೈತಾಪಿ ಜನರಲ್ಲಿ ಪ್ರತಿಭೆಗಳಿಲ್ಲವೆ ಅಂತಹವರನ್ನು ಗುರುತಿಸಿ ದಸರಾ ಮಾಡಿದ್ದರೆ ನಾಡ ಹಬ್ಬಕ್ಕೆ ಮತ್ತೊಂದು ತರಹದ ಮರಗು ಬರುತ್ತಿತ್ತು ಎಂಬುದು ಹಲವಾರು ಜನರ ಮಾತು, ತುಡಿತವಾಗಿದೆ.
ಮುಂದಿನ ದಸರಾ ಸಂದರ್ಭದಲ್ಲಿ ಪ್ರಾಜ್ಞವಂತರು, ಚಿಂತಕರು, ಸಾಹಿತಿಗಳಿಗೆ, ಚಿಂತಕರಿಗೆ ದಸರಾ ಸಮಿತಿಯಲ್ಲಿ ಹಾಕಿಕೊಂಡು ಜಿಲ್ಲೆಯ ಸಂಸ್ಕøತಿ, ಕಲೆ, ಸಾಹಿತ್ಯಕ್ಕೆ ಒತ್ತು ನೀಡಲಿ ಮೂರು ವರ್ಷದ ದಸರಾವೂ ಒಂದು ತರಹ ಮುದ ಮತ್ತು ಕೆಲವರಿಗೆ ಮನರಂಜನೆ ನೀಡಿದ್ದು, ಮತ್ತು ಸುಧಾರಣೆಯಾಗಲಿ ಎಂಬುದೇ ಎಲ್ಲಾರ ಆಶಯವಾಗಿದೆ, ಬರದಲ್ಲೂ ಅದ್ಧೂರಿ ದಸರಾ ಆಚರಿಸಿದ ಜಿಲ್ಲಾಡಳಿಕ್ಕೆ ಅಭಿನಂದನೆಗಳು.
-ಮೈತ್ರಿನ್ಯೂಸ್ ವರದಿ
ದಸರಾ ಆಚರಣೆಗೆ ಜಿಲ್ಲಾಡಳಿತ ಹೆಚ್ಚು ಒತ್ತು ನೀಡಿದ್ದರಿಂದ ಕಚೇರಿಗಳಲ್ಲಿ ಜನ ಸಾಮಾನ್ಯರ ಕೆಲ-ಕಾರ್ಯಗಳು ಸುಸ್ತಿ ಬಿದ್ದಿವೆ(ಪೆಂಡಿಂಗ್) ಆ ಫೈಲ್ ಗಳಿಗೆ ಮುಕ್ತಿ ಸಿಗಲು ಜಿಲ್ಲಾಡಳಿತ ಚುರುಕಾಗಿ ಕಾರ್ಯನಿರ್ವಹಿಸಲಿ, ಮತ್ತುಷ್ಟು ಜನರ ಪ್ರೀತಿ ಗಳಿಸಲಿ ಹೀಗೆ ಹಾಡುತ್ತಾ-ಕುಣಿತ್ತಾ ಇರಲಿ—-
-ವೆಂಕಟಾಚಲ.ಹೆಚ್.ವಿ.