“ಕ್ವಿಟ್ ಇಂಡಿಯಾ ಚಳವಳಿ” ಭಾರತದ ಸ್ವಾತಂತ್ರ್ಯಕ್ಕೆ ಮೈಲಿಗಲ್ಲು-ಮುರಳೀಧರ ಹಾಲಪ್ಪ

ತುಮಕೂರು:ದೇಶಕ್ಕೆ ಸ್ವಾತಂತ್ರಕ್ಕಾಗಿ ನಡೆದ ಮಾಡು ಇಲ್ಲವೆ ಮಡಿ ಹೋರಾಟ “ಕ್ವಿಟ್ ಇಂಡಿಯಾ ಚಳವಳಿ” ಭಾರತದ ಸ್ವಾತಂತ್ರ ಇತಿಹಾಸದಲ್ಲಿಯೇ ಮಹತ್ವ ಮೈಲಿಗಲ್ಲು ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಮುರುಳೀಧರ ಹಾಲಪ್ಪ ಅಭಿಪ್ರಾಯಪಟ್ಟರು

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳವಳಿ ನೆನಪಿಗಾಗಿ ಹಮ್ಮಿಕೊಂಡಿದ್ದ ಕ್ವಿಟ್ ಇಂಡಿಯಾ ಚಳವಳಿ ಸಂಸ್ಮರಣ ಕಾರ್ಯಕ್ರಮದ ಅಂಗವಾಗಿ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಮಹಾತ್ಮಗಾಂಧಿ ಸ್ಮಾರಕ ಭವನಕ್ಕೆ ತೆರಳಿ,ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಆಗಸ್ಟ್ 09-1942ರಿಂದ ಸುಮಾರು 2 ವರ್ಷಗಳ ಕಾಲ ನಡೆದ ಈ ಹೋರಾಟ,ಇಡೀ ದೇಶವನ್ನು ಸ್ವಾತಂತ್ರ ಚಳವಳಿಗೆ ದುಮಕುವಂತೆ ಮಾಡಿದ ಶಕ್ತಿಯೇ ಮಹಾತ್ಮಗಾಂಧಿ ಎಂದರು.

ಕ್ವಿಟ್ ಇಂಡಿಯಾ ಚಳುವಳಿಯನ್ನು ನೆನಪು ಮಾಡಿಕೊಳ್ಳುವ ನೈತಿಕ ಹಕ್ಕು ಇದ್ದರೆ ಆದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ.ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟ ಅಂದಿನ ಜನಸಂಘದ ನಾಯಕರಿಗಲ್ಲ.ಇದೇ ಕ್ವಿಟ್ ಇಂಡಿಯಾ ಸವಿನೆನಪಿಗಾಗಿ ನಮ್ಮ ನಾಯಕರಾದ ರಾಹುಲ್‍ಗಾಂಧಿಯವರು ದ್ವೇಷದ ಜಾತ್ರೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಮೇಘಾಲಯದಿಂದ ಗುಜರಾತ್‍ನ ಪೋರ್ ಬಂದರ್‍ವರೆಗೆ ಎರಡನೇ ಭಾರತ್ ಜೋಡೋ ಪಾದಯಾತ್ರೆ ಆರಂಭಿಸಿದ್ದು,ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಲು ಹೊರಟಿದ್ದಾರೆ ಎಂದು ಮುರುಳೀಧರ್ ಹಾಲಪ್ಪ ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ,ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತಕ್ಕೆ ಸ್ವಾತಂತ್ರ ತಂದುಕೊಡುವ ನಿಟ್ಟಿನಲ್ಲಿ ಕ್ವಿಟ್ ಇಂಡಿಯಾ ಚಳವಳಿ ಅತ್ಯಂತ ಮಹತ್ವ ಪಡೆದ ಘಟನೆ.ಕೇವಲ 50 ಜನರಿಂದ ಆರಂಭವಾದ ಈ ಹೋರಾಟಕ್ಕೆ 15 ಕೋಟಿಗೂ ಹೆಚ್ಚು ಜನ ಪಾಲ್ಗೊಂಡು,ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಲು ಕಾರಣವಾಯಿತು.ಇದೇ ಸಂದರ್ಭದಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಇಸನೂರು ಘಟನೆಯನ್ನು ಕನ್ನಡಿಗರು ಮರೆಯುವಂತಿಲ್ಲ.ಧರ್ಮ,ಜಾತಿ, ಭಾಷೆ,ಮೇಲು,ಕೀಳಿನ ಹೆಸರಿನಲ್ಲಿ ದ್ವೇಷದಿಂದ ಕುದಿಯುತ್ತಿರುವ ಭಾರತಕ್ಕೆ ಶಾಂತಿ ಮತ್ತು ನೆಮ್ಮದಿಯ ವಾತಾವರಣ ದೊರೆಯ ಬೇಕೆಂದರೆ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಹಾಗಾಗಿ ನಮ್ಮೆಲ್ಲರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.

ಸ್ವಾತಂತ್ರ ಹೋರಾಟಗಾರರಾದ 96 ವರ್ಷದ ಟಿ.ಆರ್.ರೇವಣ್ಣ ಮಾತನಾಡಿ,ಮಂಡಿ ವರ್ತಕರಾಗಿದ್ದ ನಮ್ಮ ಕುಟುಂಬ 1932ರಲ್ಲಿ ಮಹಾತ್ಮಗಾಂಧಿಯವರು ತುಮಕೂರಿಗೆ ಬಂದಿದ್ದರಿಂದ ಸ್ಪೂರ್ತಿ ಪಡೆದ ಸ್ವಾತಂತ್ರ ಚಳವಳಿಗೆ ಧುಮುಕಿ,ವಿದ್ಯಾರ್ಥಿ ಹೋರಾಟದಲ್ಲಿ 3 ತಿಂಗಳ ಕಾಲ ಜೈಲು ವಾಸ ಅನುಭವಿಸಿ,ಅಲ್ಲಿಂದ,ಇಲ್ಲಿಯವರೆಗೆ ಹೋರಾಟದಲ್ಲಿ ತೊಡಗಿದ್ದೇನೆ.ಭಾರತಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಷ್ಠರ ಪಾತ್ರ ಮಹತ್ವದಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ್,ನಗರಸಭಾ ಮಾಜಿ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ ಮಾತನಾಡಿದರು.

ಇದೇ ಸಂದರ್ಭದಲ್ಲಿ ಆಗಸ್ಟ್ 10ರ ಗುರವಾರ 12 ಗಂಟೆಗೆ ತಮಿಳುನಾಡಿನ ಪೆರಂಬೂರಿನಿಂದ ಹೊರಟ ರಾಜೀವ್ ಸದ್ಭಾವನಾ ಜೋತಿ ತುಮಕೂರಿಗೆ ಆಗಮಿಸಲಿದ್ದು, ನಾವೆಲ್ಲರೂ ಒಗ್ಗೂಡಿ ಅವರನ್ನು ಸ್ವಾಗತಿಸಿ, ಬೀಳ್ಕೋಡುವ ಕೆಲಸ ಮಾಡಬೇಕು.ಹಾಗಾಗಿ ಎಲ್ಲರೂ ಗುರುವಾರ 12 ಗಂಟೆಗೆ ಕಾಂಗ್ರೆಸ್ ಕಚೇರಿಗೆ ಆಗಮಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಸಿದ್ದಲಿಂಗೇಗೌಡ,ರೇವಣ್ಣಸಿದ್ದಯ್ಯ,ಶಿವಾಜಿ,ಮಾಜಿ ಜಿಲ್ಲಾಧ್ಯಕ್ಷ ರಾಮಕೃಷ್ಣ,ಉಪಾಧ್ಯಕ್ಷ ಹೆಬ್ಬೂರು ಶ್ರೀನಿವಾಸಮೂರ್ತಿ,ಷ್ಮಣುಕಪ್ಪ,ನಯಾಜ್ ಅಹಮದ್,ಮೇಯರ್ ಶ್ರೀಮತಿ ಪ್ರಭಾವತಿ,ವಾಲೆಚಂದ್ರಯ್ಯ,ಸುಜಾತ,ಆಟೋ ರಾಜು,ಮೆಹಬೂಬ್ ಪಾಷ,ಆದಿಲ್, ಅಬ್ದುಲ್ ರಹೀಂ, ಕವಿತಾ , ಮಂಜುಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

One thought on ““ಕ್ವಿಟ್ ಇಂಡಿಯಾ ಚಳವಳಿ” ಭಾರತದ ಸ್ವಾತಂತ್ರ್ಯಕ್ಕೆ ಮೈಲಿಗಲ್ಲು-ಮುರಳೀಧರ ಹಾಲಪ್ಪ

  1. We with Muralidhar Hjallappaji
    His voice echo of the common people voice
    Long live revolution
    Long Live Constitution

Leave a Reply

Your email address will not be published. Required fields are marked *